alex Certify ಯುಪಿ ಚುನಾವಣಾ ಫಲಿತಾಂಶದ ಬಳಿಕ ಬುಲ್ಡೋಜರ್​ ಬಳಕೆ ಮಾಡುತ್ತೇವೆ; ಯೋಗಿ ಆದಿತ್ಯನಾಥ್ ಎಚ್ಚರಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಯುಪಿ ಚುನಾವಣಾ ಫಲಿತಾಂಶದ ಬಳಿಕ ಬುಲ್ಡೋಜರ್​ ಬಳಕೆ ಮಾಡುತ್ತೇವೆ; ಯೋಗಿ ಆದಿತ್ಯನಾಥ್ ಎಚ್ಚರಿಕೆ

ಕೇಂದ್ರ ಸಚಿವ ಎಸ್​ ಪಿ ಬಘೇಲ್​ ಮೇಲೆ ದಾಳಿಯನ್ನು ನಡೆಸಿದ ದುಷ್ಕರ್ಮಿಗಳಿಗೆ ಉತ್ತರ ಪ್ರದೇಶ ಸಿಎಂ ಯೋಗಿಆದಿತ್ಯನಾಥ್​ ಖಡಕ್​ ಎಚ್ಚರಿಕೆ ನೀಡಿದ್ದಾರೆ.

ಬುಲ್ಡೋಜರ್​ಗಳು ಪ್ರಸ್ತುತ ದುರಸ್ತಿಯಲ್ಲಿದೆ. ಉತ್ತರ ಪ್ರದೇಶ ಚುನಾವಣೆಯ ಫಲಿತಾಂಶದ ದಿನ ಹೊರ ಬೀಳುತ್ತಿದ್ದಂತೆಯೇ ಅವೆಲ್ಲ ಬುಲ್ಡೋಜರ್​ಗಳು ಬಳಕೆಗೆ ಸಿದ್ಧವಾಗಲಿದೆ ಎಂದು ಹೇಳಿದ್ದಾರೆ.

ಉತ್ತರ ಪ್ರದೇಶದ ಮಣಿಪುರಿಯಲ್ಲಿ ಸಾರ್ವಜನಿಕ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಯೋಗಿ ಆದಿತ್ಯನಾಥ್, ಕಳೆದ ನಾಲ್ಕೂವರೆ ವರ್ಷಗಳಿಂದ ತಲೆಮರೆಸಿಕೊಂಡಿರುವ ಆದರೆ ಚುನಾವಣೆಯ ಸಂದರ್ಭದಲ್ಲಿ ಮಾತ್ರ ಹೊರಬರುವ ಎಲ್ಲರಿಗೂ ಮಾರ್ಚ್​ 10ರ ನಂತರ ಸರ್ಕಾರ ಬುಲ್ಡೋಜರ್​ಗಳನ್ನು ಬಳಕೆ ಮಾಡುತ್ತದೆ ಎಂದು ಎಚ್ಚರಿಕೆ ನೀಡಿದರು.

ಕರ್ಹಾಲ್​ ವಿಧಾನಸಭಾ ಕ್ಷೇತ್ರದಲ್ಲಿ ಸಮಾಜವಾದಿ ಪಕ್ಷದ ನಾಯಕರು ತಮ್ಮ ಸೋಲನ್ನು ಕಾಣುವ ಮೂಲಕ ತಾಳ್ಮೆ ಕಳೆದುಕೊಂಡಿದ್ದಾರೆ. ಕೇಂದ್ರ ಸಚಿವರು ಹಾಗೂ ಬಿಜೆಪಿ ಅಭ್ಯರ್ಥಿ ಎಸ್​ಪಿ ಬಘೇಲ್​ರ ಮೇಲಿನ ಹಲ್ಲೆಯು ಸಮಾಜವಾದಿ ಪಕ್ಷದ ಹೇಡಿತನಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದು ಕಿಡಿಕಾರಿದರು.

— ANI UP/Uttarakhand (@ANINewsUP) February 18, 2022

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...