alex Certify ಯುದ್ಧ ಆರಂಭಕ್ಕೆ ಒಂದು ದಿನ ಮೊದಲು ಸುಖಾಂತ್ಯವಾಯ್ತು ಈ ‘ಲವ್‌ ಕಹಾನಿ’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಯುದ್ಧ ಆರಂಭಕ್ಕೆ ಒಂದು ದಿನ ಮೊದಲು ಸುಖಾಂತ್ಯವಾಯ್ತು ಈ ‘ಲವ್‌ ಕಹಾನಿ’

ಭಾರತದ ಯುವಕ ಹಾಗೂ ಉಕ್ರೇನ್‌ ಯುವತಿ ನಡುವಣ ಪ್ರೀತಿ, ಯುದ್ಧ ಪ್ರಾರಂಭವಾಗುವುದಕ್ಕೂ ಒಂದು ದಿನ ಮುಂಚಿತವಷ್ಟೆ ಸುಖಾಂತ್ಯಗೊಂಡಿದೆ. ಉಕ್ರೇನ್‌ ನ ಲ್ಯುಬೊವ್‌ ಎಂಬ ಯುವತಿ ಹೈದ್ರಾಬಾದ್‌ ನ ಪ್ರತೀಕ್‌ ನನ್ನು ಇಷ್ಟಪಟ್ಟಿದ್ಲು.

ಪರಸ್ಪರ ಪ್ರೀತಿಸ್ತಾ ಇದ್ದ ಈ ಜೋಡಿ ಉಕ್ರೇನ್‌ ನಲ್ಲೇ ಮದುವೆಯಾಗಿದ್ದಾರೆ. ಆರತಕ್ಷತೆ ಕಾರ್ಯಕ್ರಮವನ್ನು ಭಾರತದಲ್ಲಿ ಹಮ್ಮಿಕೊಂಡಿದ್ರಿಂದ ಉಕ್ರೇನ್‌ ನಿಂದ ಹೈದ್ರಾಬಾದ್‌ ಗೆ ಬಂದಿಳಿದಿದ್ದಾರೆ. ಅದಾದ ಮರುದಿನವೇ ಉಕ್ರೇನ್‌ ಅನ್ನು ಸುತ್ತುವರಿದ ರಷ್ಯಾ ಪಡೆಗಳು ದಾಳಿ ಆರಂಭಿಸಿವೆ.

ಪ್ರತೀಕ್‌ ಹಾಗೂ ಲ್ಯುಬೊವ್‌ ಅದೃಷ್ಟ ಚೆನ್ನಾಗಿತ್ತು. ಹಾಗಾಗಿಯೇ ಯುದ್ಧ ಶುರುವಾಗುವ ಮೊದಲೇ ಸುರಕ್ಷಿತವಾಗಿ ಭಾರತ ತಲುಪಿದ್ದಾರೆ. ಹೈದ್ರಾಬಾದ್‌ ನಲ್ಲಿ ಆರತಕ್ಷತೆ ಕೂಡ ನೆರವೇರಿದ್ದು, ಚಿಲ್ಕುರ್‌ ಬಾಲಾಜಿ ದೇವಾಲಯದ ಅರ್ಚಕ ರಂಗರಾಜನ್‌ ನವದಂಪತಿಗೆ ಆಶೀರ್ವಾದ ಮಾಡಿದ್ದಾರಂತೆ.

ಉಕ್ರೇನ್‌ ನಲ್ಲಿ ಶಾಂತಿ ನೆಲೆಸಲೆಂದು ಪ್ರಾರ್ಥಿಸಿದ್ದಾರಂತೆ. ಹೈದ್ರಾಬಾದ್‌ ನ ಪತ್ರಕರ್ತೆಯೊಬ್ಬರು ನವದಂಪತಿಯ ವಿಡಿಯೋವನ್ನು ಟ್ವಿಟ್ಟರ್‌ ನಲ್ಲಿ ಶೇರ್‌ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...