alex Certify ಮ್ಯೂಸಿಕ್ ವಿಡಿಯೋ ಚಿತ್ರೀಕರಣದ ವೇಳೆ ಪಾಪ್ ಗಾಯಕಿಯ ಗಲ್ಲಕ್ಕೆ ಕಚ್ಚಿದ ಸರ್ಪ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮ್ಯೂಸಿಕ್ ವಿಡಿಯೋ ಚಿತ್ರೀಕರಣದ ವೇಳೆ ಪಾಪ್ ಗಾಯಕಿಯ ಗಲ್ಲಕ್ಕೆ ಕಚ್ಚಿದ ಸರ್ಪ..!

ಮ್ಯೂಸಿಕ್ ವಿಡಿಯೋ ಚಿತ್ರೀಕರಣದ ವೇಳೆ ಪಾಪ್ ಗಾಯಕಿ ಮೇಟಾ ಅವರಿಗೆ ಹಾವು ಕಚ್ಚಿದೆ. ಈ ವರ್ಷದ ಏಪ್ರಿಲ್‌ನಲ್ಲಿ ಜೇ ಝಡ್‌ನ ಲೇಬಲ್ ರೋಕ್ ನೇಷನ್‌ಗೆ ಸಹಿ ಮಾಡಿದ್ದ ಅವರು, ಕಳೆದ ವಾರ ಇನ್‌ಸ್ಟಾಗ್ರಾಮ್ ಮತ್ತು ಟ್ವಿಟರ್‌ನಲ್ಲಿ ಘಟನೆಯ ತುಣುಕನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ಇದೀಗ ವೈರಲ್ ಆಗಿದೆ.

ಕಿರು ವಿಡಿಯೋದಲ್ಲಿ, 21 ವರ್ಷ ವಯಸ್ಸಿನ ಪಾಪ್ ಗಾಯಕಿ ಹಲವಾರು ಹಾವುಗಳಿಂದ ಸುತ್ತುವರಿದ ಕಾರ್ಪೆಟ್ ಮೇಲೆ ಮಲಗಿರುವುದು ಗಮನಿಸಬಹುದು. ಕಪ್ಪು ಕಸೂತಿ ಧರಿಸಿ, ಹಾವು ಆಕೆಯ ಗಲ್ಲದ ಮೇಲೆ ತೆವಳಿಕೊಂಡು ಬಂದು ಕಚ್ಚುವ ಮೊದಲು ನಗುತ್ತಿದ್ದಳು. ಈ ವೇಳೆ ಆಕೆಯನ್ನು ಹಾವು ಕಚ್ಚಿಯೇ ಬಿಟ್ಟಿದೆ. ನೋವಿನಿಂದ ತಕ್ಷಣ ಹಾವನ್ನು ದೂರ ತಳ್ಳಿದ್ದು, ಅಲ್ಲಿಂದ ತೆರಳಿದ್ದಾರೆ.

ಕೈ-ಕಾಲುಗಳಿಲ್ಲದ ದೆಹಲಿಯ ವ್ಯಕ್ತಿಯ ಸ್ಪೂರ್ತಿ ಕಂಡು ಆನಂದ್ ಮಹೀಂದ್ರಾ ಮೆಚ್ಚುಗೆ..!

ಈ ವಿಡಿಯೋವನ್ನು ಮೇಟಾ ತನ್ನ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ವಿಡಿಯೋವನ್ನು  4.8 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಸದ್ಯ ಭಾರಿ ವೈರಲ್ ಆಗಿದೆ.

ವರದಿ ಪ್ರಕಾರ, ಮ್ಯೂಸಿಕ್ ವಿಡಿಯೋಗೆ ಬಳಸಲಾಗುತ್ತಿರುವ ಯಾವುದೇ ಹಾವು ವಿಷಕಾರಿಯಾಗಿರಲಿಲ್ಲ. ಗಾಯಕಿಯ ಗಲ್ಲದ ಮೇಲೆ ಹಾವು ಕಚ್ಚಿದನ್ನು ಹೊರತುಪಡಿಸಿ ಬೇರೆ ಯಾವುದೇ ಗಾಯಗಳು ಆಗಲಿಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...