alex Certify ಮೋದಿಗೆ ಅವಹೇಳನ ಮಾಡುತ್ತಾ ಮಹಿಳೆಯರ ಚುಡಾಯಿಸುತ್ತಿದ್ದವನಿಗೆ ಬಿತ್ತು ಸಖತ್ ಗೂಸಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೋದಿಗೆ ಅವಹೇಳನ ಮಾಡುತ್ತಾ ಮಹಿಳೆಯರ ಚುಡಾಯಿಸುತ್ತಿದ್ದವನಿಗೆ ಬಿತ್ತು ಸಖತ್ ಗೂಸಾ

ಮೈಸೂರು: ಬಸ್ ನಲ್ಲಿ ಅಸಭ್ಯವಾಗಿ ವರ್ತಿಸಿದವನನ್ನು ಮಹಿಳೆಯರೇ ಹೊರಗೆ ದಬ್ಬಿ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ನಡೆದಿದೆ.

ನಗರದ ಬಸ್ ನಿಲ್ದಾಣದಿಂದ ಮೇಟಗಳ್ಳಿ ಮಾರ್ಗವಾಗಿ ಹೋಗುತ್ತಿದ್ದ ಬಸ್ ಹತ್ತಿರ ಸ್ಥಳೀಯ ವಿವಿ ಮೊಹಲ್ಲಾ ಪ್ರದೇಶದ ವ್ಯಕ್ತಿಯೊಬ್ಬ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅವಹೇಳನ ಮಾಡುತ್ತಾ ಮಹಿಳೆಯರನ್ನು ಕಾಡಿಸುತ್ತಿದ್ದ.

ಅಲ್ಲದೇ, ಈ ವ್ಯಕ್ತಿಯ ನಡತೆಯನ್ನು ಪ್ರಶ್ನಿಸಿದ್ದಕ್ಕೆ ಕೊಲೆ ಮಾಡುವ ಬೆದರಿಕೆಯನ್ನು ಕೂಡ ಹಾಕಿದ್ದ. ಇದರಿಂದ ಕೋಪಗೊಂಡ ಮಹಿಳೆಯರು, ಈತನನ್ನು ಬಸ್ ನಿಂದ ಕೆಳಗೆ ದಬ್ಬಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಮಹಿಳೆಯರ ಧೈರ್ಯಕ್ಕೆ ಹಲವರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಈ ವ್ಯಕ್ತಿಯ ವಿರುದ್ಧ ಪೊಲೀಸ್ ಠಾಣೆಯಲ್ಲಿ ಮಾತ್ರ ಯಾವುದೇ ಪ್ರಕರಣ ದಾಖಲಾಗಿಲ್ಲ. ಮಹಿಳೆಯರನ್ನು ಚುಡಾಯಿಸಿದವರಿಗೆ ಇದೇ ಪರಿಸ್ಥಿತಿಯಾಗಬೇಕು ಎಂದು ಜನ ಮಾತ್ರ ಕಮೆಂಟ್ ಮಾಡುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...