alex Certify ಮೊಬೈಲ್‌ ಮೂಲಕ ಓಪನ್‌ ಆಗುತ್ತೆ ಕೋಕಾ ಕೋಲಾ ಹೊರತಂದಿರುವ ವಿಶಿಷ್ಟ ಬಾಟಲಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೊಬೈಲ್‌ ಮೂಲಕ ಓಪನ್‌ ಆಗುತ್ತೆ ಕೋಕಾ ಕೋಲಾ ಹೊರತಂದಿರುವ ವಿಶಿಷ್ಟ ಬಾಟಲಿ…!

ಕೋಕಾ-ಕೋಲಾ ಇಂಡಿಯಾ ವಿಶಿಷ್ಟವಾದ ತಾಂತ್ರಿಕ ಉತ್ಪನ್ನವನ್ನು ಹೊರತಂದಿದೆ. ‘ಲಾಕ್ಡ್’ ಕೋಕ್ʼ ಎಂಬ ವಿಶಿಷ್ಟ ಬಾಟಲ್‌ ಇದು. ಹಬ್ಬದ ಸೀಸನ್‌ಗಾಗಿ ಪಾನೀಯದ ಸೀಮಿತ ಆವೃತ್ತಿಯನ್ನು ಬಿಡುಗಡೆ ಮಾಡಲಾಗಿದೆ. ‘ಲಾಕ್ ಮಾಡಲಾದ’ ಬಾಟಲಿಗೆ ವಿಶೇಷ ಬ್ಲೂಟೂತ್-ಸಕ್ರಿಯಗೊಳಿಸಿದ ಕ್ಯಾಪ್ ಅನ್ನು ಅಳವಡಿಸಲಾಗಿದೆ. ಅದನ್ನು ಮೊಬೈಲ್‌ ಫೋನ್‌ ಮೂಲಕ ಓಪನ್‌ ಮಾಡುವುದು ವಿಶೇಷ.

ಈ ಪರಿಕಲ್ಪನೆಯು ಕೋಕ್‌ನ ಇತ್ತೀಚಿನ #MilkeHiManegiDiwali ಅಭಿಯಾನದ ಭಾಗವಾಗಿದೆ. ದೀಪಾವಳಿಯಲ್ಲಿ ಪರಸ್ಪರ ವೈಯಕ್ತಿಕವಾಗಿ ಭೇಟಿ ಮಾಡಿ ಹಬ್ಬ ಆಚರಿಸಬೇಕೆಂಬುದರ ಸಂಕೇತ ಇದು. ಭಾರತದಲ್ಲಿ ಇದೇ ಮೊದಲ ಬಾರಿಗೆ ಇಂತಹ ವಿಶಿಷ್ಟ ಕೋಕ್‌ ಲಭ್ಯವಿದೆ. ಒಗಿಲ್ವಿ ಮುಂಬೈನ ಪರಿಕಲ್ಪನೆಯಡಿ ಇದನ್ನು ರಚಿಸಲಾಗಿದೆ.

ಉಡುಗೊರೆ ಸ್ವೀಕರಿಸುವವರ ಮನೆಯ ವಿಳಾಸ ಮತ್ತು ಕಸ್ಟಮೈಸ್ ಮಾಡಿದ ಹಬ್ಬದ ಸಂದೇಶವನ್ನು ಭರ್ತಿ ಮಾಡುವ ಮೂಲಕ ಬಾಟಲಿಯನ್ನು ಮೈಕ್ರೋಸೈಟ್ ಮೂಲಕ ಆರ್ಡರ್ ಮಾಡಬಹುದು. ಸ್ವೀಕರಿಸುವವರು ನಂತರ ಕಸ್ಟಮೈಸ್ ಮಾಡಿದ ಬಾಟಲಿಯನ್ನು ಡೆಲಿವರಿ ಮೂಲಕ ಸ್ವೀಕರಿಸುತ್ತಾರೆ.

ಕೋಕಾ-ಕೋಲಾ ಬ್ರ್ಯಾಂಡ್‌ನ ಮಾರ್ಕೆಟಿಂಗ್‌ನ ನಿರ್ದೇಶಕ ಕೌಶಿಕ್ ಪ್ರಸಾದ್ ಮಾತನಾಡಿ, “ಗ್ರಾಹಕರಿಗೆ ವಿಶಿಷ್ಟ ಉತ್ಪನ್ನದ ಆವಿಷ್ಕಾರವನ್ನು ಅನಾವರಣಗೊಳಿಸಲು ಉತ್ಸುಕರಾಗಿದ್ದೇವೆ. ಡಿಜಿಟಲ್ ಸಕ್ರಿಯಗೊಳಿಸುವಿಕೆ ಮತ್ತು ಉತ್ಪನ್ನ ನಾವೀನ್ಯತೆಯು ಕೋಕಾ-ಕೋಲಾದಲ್ಲಿ ಬೆಳವಣಿಗೆಯ ಪ್ರಮುಖ ಸ್ತಂಭಗಳಾಗಿವೆ. ನಮ್ಮ ಹೊಸ ‘ಲಾಕ್’ ಬಾಟಲಿ ಈ ಕಾರ್ಯತಂತ್ರದೊಂದಿಗೆ ಸಂಪೂರ್ಣವಾಗಿ ಹೊಂದಾಣಿಕೆಯಾಗುತ್ತದೆ. ಈ ಉಡುಗೊರೆ ಬಾಟಲಿ ಸಾಮಾಜಿಕ ಸಂಪರ್ಕಗಳನ್ನು ಪ್ರೇರೇಪಿಸುತ್ತದೆ. ಜನರು ಈ ದೀಪಾವಳಿಯಲ್ಲಿ ಭೇಟಿಯಾಗಲು, ಸ್ವಾಗತಿಸಲು, ಸಂಪರ್ಕಿಸಲು (ಲಾಕ್ ಮಾಡಿದ) ಕೋಕ್ ಅನ್ನು ಹಂಚಿಕೊಳ್ಳುತ್ತಾರೆʼʼ ಎಂದ್ರು.

ಕಳೆದ ಎರಡು ವರ್ಷಗಳಲ್ಲಿ ಕೊರೊನಾ ಸಾಂಕ್ರಾಮಿಕದಿಂದಾಗಿ ಹಬ್ಬಗಳಲ್ಲಿ ಪರಸ್ಪರ ಭೇಟಿಯಾಗಿ ಶುಭಕೋರಲು ಸಾಧ್ಯವಾಗುತ್ತಿರಲಿಲ್ಲ. ಜನರು ‘ವರ್ಚುವಲ್ ಶುಭಾಶಯಗಳನ್ನು’ ಆಶ್ರಯಿಸಿದ್ದರು. ಆದರೆ ಈ ಬಾರಿ ದೀಪಾವಳಿಯಲ್ಲಿ, ಕೋಕಾ-ಕೋಲಾ ಜನರಲ್ಲಿ ಒಗ್ಗಟ್ಟಿನ ಭಾವನೆಯನ್ನು ಹುಟ್ಟುಹಾಕಲು ಪ್ರಯತ್ನಿಸುತ್ತದೆ. ಪ್ರೀತಿಪಾತ್ರರ ಜೊತೆಗೆ ವೈಯಕ್ತಿಕವಾಗಿ ಹಬ್ಬಗಳನ್ನು ಆಚರಿಸುವ ನಿಜವಾದ ಮ್ಯಾಜಿಕ್ ಅನ್ನು ಮರಳಿ ತರಲು ಪ್ರಯತ್ನಿಸುತ್ತದೆ ಅಂತಾ ಕಂಪನಿ ಹೇಳಿಕೊಂಡಿದೆ.

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...