alex Certify ಮೊದಲ ಪತ್ನಿ ಸೇರಿ ಟ್ವಿಟರ್​ ಖಾತೆಯಿಂದ ಎಲ್ಲರನ್ನೂ ಅನ್​ಫಾಲೋ ಮಾಡಿದ ಪಾಕ್​ ಪ್ರಧಾನಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೊದಲ ಪತ್ನಿ ಸೇರಿ ಟ್ವಿಟರ್​ ಖಾತೆಯಿಂದ ಎಲ್ಲರನ್ನೂ ಅನ್​ಫಾಲೋ ಮಾಡಿದ ಪಾಕ್​ ಪ್ರಧಾನಿ..!

ಪಾಕಿಸ್ತಾನದ ಪ್ರಧಾನಿ ಇಮ್ರಾನ್​ ಖಾನ್​ ತಮ್ಮ ಮೊದಲ ಪತ್ನಿ ಜೆಮಿಮಾ ಗೋಲ್ಡ್​ಸ್ಮಿತ್​ ಸೇರಿದಂತೆ ಎಲ್ಲರನ್ನೂ ತಮ್ಮ ಟ್ವಿಟರ್​ ಖಾತೆಯಿಂದ ಅನ್​ಫಾಲೋ ಮಾಡಿದ್ದಾರೆ

ದಿ ನ್ಯೂಸ್​ ಇಂಟರ್​ನ್ಯಾಷನಲ್​ ನೀಡಿರುವ ವರದಿ ಪ್ರಕಾರ , ಸೋಮವಾರ ಸಂಜೆ ಪಾಕಿಸ್ತಾನದ ಪ್ರಧಾನಿ ಇಮ್ರಾನ್​ ಖಾನ್​ ತಮ್ಮ ಅಧಿಕೃತ ಟ್ವಿಟರ್​ ಖಾತೆಯಿಂದ ಎಲ್ಲರನ್ನೂ ಅನ್​ಫಾಲೋ ಮಾಡಿದ್ದಾರೆ. ಆದರೆ ಮೊದಲ ಪತ್ನಿ ಚಲನಚಿತ್ರ ನಿರ್ಮಾಪಕಿ ಜೆಮಿಮಾರನ್ನ ಅನ್​ಫಾಲೋ ಮಾಡಿರೋದು ಟ್ವೀಟಿಗರಿಗೆ ಆಶ್ಚರ್ಯ ಉಂಟು ಮಾಡಿದೆ. ಹೀಗಾಗಿ ಇದೇ ವಿಚಾರವನ್ನ ಮುಂದಿಟ್ಟುಕ್ಕೊಂಡು ಟ್ವೀಟಿಗರು ಇಮ್ರಾನ್​ ಖಾನ್​ರ ಕಾಲೆಳೆಯುತ್ತಿದ್ದಾರೆ.

2010ರಲ್ಲಿ ಟ್ವಿಟರ್ ಖಾತೆ ರಚಿಸಿದ್ದ ಇಮ್ರಾನ್​​ ಖಾನ್​ ತಮ್ಮ ಮೊದಲ ಪತ್ನಿಯಿಂದ ಬೇರ್ಪಟ್ಟು ಎರಡೆರಡು ಮದುವೆಯಾದ ಬಳಿಕವೂ ಟ್ವಿಟರ್​ನಲ್ಲಿ ತಮ್ಮ ಮೊದಲ ಪತ್ನಿಯನ್ನ ಫಾಲೋ ಮಾಡುತ್ತಲೇ ಇದ್ದರು .

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...