alex Certify ಮೊಟ್ಟ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡ ಮುಕೇಶ್​ ಅಂಬಾನಿ ಮೊಮ್ಮಗ; ಇದರ ಹಿಂದಿದೆ ಈ ಕಾರಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೊಟ್ಟ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡ ಮುಕೇಶ್​ ಅಂಬಾನಿ ಮೊಮ್ಮಗ; ಇದರ ಹಿಂದಿದೆ ಈ ಕಾರಣ

ಕೋಟ್ಯಾಧಿಪತಿ ಉದ್ಯಮಿ ಮುಕೇಶ್​ ಅಂಬಾನಿ ಮೊಮ್ಮಗ ಪೃಥ್ವಿ ಇಂದು ಮುಂಬೈನ ನರ್ಸರಿ ಶಾಲೆಗೆ ತೆರಳಿದ್ದು ತಾಯಿ ಶ್ಲೋಕಾ ಅಂಬಾನಿ ಜೊತೆಯಲ್ಲಿ ಕ್ಯಾಮರಾ ಕಣ್ಣಿಗೆ ಬಿದ್ದಿದ್ದಾನೆ. 2020ರ ಡಿಸೆಂಬರ್​​ನಲ್ಲಿ ಮುಕೇಶ್​ ಅಂಬಾನಿ ಹಿರಿಯ ಪುತ್ರ ಆಕಾಶ್​ ಅಂಬಾನಿ ಹಾಗೂ ಶ್ಲೋಕಾ ಅಂಬಾನಿ ದಂಪತಿಗೆ ಜನಿಸಿದ ಪೃಥ್ವಿ ಇಂದು ನರ್ಸರಿ ಶಾಲೆಗೆ ದಾಖಲಾತಿ ಪಡೆದಿದ್ದಾರೆ.

ಪೃಥ್ವಿ ಅಂಬಾನಿಯ ನರ್ಸರಿ ಶಾಲೆಯ ಮೊದಲ ದಿನದ ಫೋಟೊಗಳು ಸೋಶಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ. ಪೃಥ್ವಿ ತನ್ನ ತಾಯಿಯನ್ನು ಬಿಗಿದಪ್ಪಿಕೊಂಡಿರುವುದನ್ನು ಫೋಟೊಗಳಲ್ಲಿ ಕಾಣಬಹುದಾಗಿದೆ. ಮತ್ತೊಂದು ಫೋಟೋದಲ್ಲಿ ಪೃಥ್ವಿ ತನ್ನ ಪ್ಲೇ ಸ್ಕೂಲ್​ನಲ್ಲಿ ಇರುವುದನ್ನು ಕಾಣಬಹುದಾಗಿದೆ.

ಶ್ಲೋಕಾ ತನ್ನ ಪುತ್ರ ಪೃಥ್ವಿಯನ್ನು ಮುಂಬೈನ ಮಲಬಾರ್​ ಹಿಲ್​ನಲ್ಲಿರುವ ಸನ್ ಫ್ಲವರ್ ಶಾಲೆಯಿಂದ ಕರೆದುಕೊಂಡು ಬಂದಿದ್ದಾರೆ. ಅಂದ ಹಾಗೆ ಶ್ಲೋಕಾ ಹಾಗೂ ಆಕಾಶ್​ ಕೂಡ ಇದೇ ಶಾಲೆಯ ಹಳೆಯ ವಿದ್ಯಾರ್ಥಿಗಳು ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...