alex Certify ಮೈಕ್‌ ಟೈಸನ್‌ ಬಳಿ ಹೊಡೆಸಿಕೊಂಡ ನೆನಪು ಬಿಚ್ಚಿಟ್ಟ ವಿಜಯ್​ ದೇವರಕೊಂಡ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೈಕ್‌ ಟೈಸನ್‌ ಬಳಿ ಹೊಡೆಸಿಕೊಂಡ ನೆನಪು ಬಿಚ್ಚಿಟ್ಟ ವಿಜಯ್​ ದೇವರಕೊಂಡ

Vijay Deverakonda recalls getting beaten by Mike Tyson during Liger shoot,  says it shook him - Movies Newsವಿಜಯ್​ ದೇವರಕೊಂಡರ ಮುಂಬರುವ ಸಿನಿಮಾ ಲೈಗರ್​ ಮೂಲಕ ಬಾಕ್ಸಿಂಗ್​ ದಂತಕತೆ ಮೈಕ್​ ಟೈಸನ್​ ಭಾರತೀಯ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಸದ್ಯ ಈ ಸಿನಿಮಾ ಪೋಸ್ಟ್​ ಪ್ರೊಡಕ್ಷನ್​ ಹಂತದಲ್ಲಿದೆ.

ವಿಜಯ್​ ದೇವರಕೊಂಡ ಮುಂಬರುವ ಸಿನಿಮಾ ಜೆಜಿಎಂ ಪತ್ರಿಕಾಗೋಷ್ಠಿಯಲ್ಲಿ ಈ ವಿಚಾರವಾಗಿ ಮಾಹಿತಿ ಹಂಚಿಕೊಂಡಿದ್ದು, ಲೈಗರ್​ ಚಿತ್ರೀಕರಣ ಸಂದರ್ಭದಲ್ಲಿ ತಾವು ಮೈಕ್​ ಟೈಸನ್​ ಎದುರು ಸೋತಿದ್ದೇನೆ ಎಂದು ಹೇಳಿದರು. ಅಲ್ಲದೇ ಇದೊಂದು ಅದ್ಭುತ ಅನುಭವವಾಗಿತ್ತು ಎಂದು ಹೇಳಿದ್ದಾರೆ.

ವಿಜಯ್​ ದೇವರಕೊಂಡ ಅಭಿನಯದ ಬಹುನಿರೀಕ್ಷಿತ ಸಿನಿಮಾ ಲೈಗರ್​ ಇದೇ ವರ್ಷ ಆಗಸ್ಟ್​ 25ರಂದು ತೆರೆಕಾಣಲಿದೆ. ಈ ಸಿನಿಮಾದಲ್ಲಿ ದೇವರಕೊಂಡ ಬಾಕ್ಸರ್​ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ಮೈಕ್​ ಟೈಸನ್​ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ತಮ್ಮ ಮುಂಬರುವ ಸಿನಿಮಾದ ಬಗ್ಗೆ ಘೋಷಣೆ ಮಾಡಲು ನಿನ್ನೆ ವಿಜಯ್​ ದೇವರಕೊಂಡ ಮಾಧ್ಯಮಗಳ ಎದುರು ಹಾಜರಾದರು. ಈ ವೇಳೆ ತಮ್ಮ ಶೂಟಿಂಗ್​ ಅನುಭವವನ್ನು ಹಂಚಿಕೊಂಡ ದೇವರಕೊಂಡ, ಟೈಸನ್​ ಜೊತೆ ಕೆಲಸ ಮಾಡಿದ್ದು ನಿಜಕ್ಕೂ ಒಂದು ಒಳ್ಳೆಯ ಅನುಭವವಾಗಿದೆ. ನಾನು ಅವರ ಬಳಿ ಹೊಡೆತ ತಿಂದಿದ್ದೇನೆ. ಆದರೆ ಅದು ನನ್ನ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ಇದಕ್ಕೂ ಹೆಚ್ಚನ್ನು ನಾನು ಬಹಿರಂಗಪಡಿಸುವುದಿಲ್ಲ. ಆದರೆ ಇವೆಲ್ಲ ನನ್ನ ಜೀವನದ ಅದ್ಭುತ ನೆನಪುಗಳು ಎಂದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...