alex Certify ವಿಜಯ್ ದೇವರಕೊಂಡ ಜೊತೆ ಟರ್ಕಿಯಲ್ಲಿ ರಶ್ಮಿಕಾ ಮಂದಣ್ಣ ಸುತ್ತಾಟ : ಸಾಕ್ಷಿ ಸಮೇತ ಹಿಡಿದ ಫ್ಯಾನ್ಸ್..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಜಯ್ ದೇವರಕೊಂಡ ಜೊತೆ ಟರ್ಕಿಯಲ್ಲಿ ರಶ್ಮಿಕಾ ಮಂದಣ್ಣ ಸುತ್ತಾಟ : ಸಾಕ್ಷಿ ಸಮೇತ ಹಿಡಿದ ಫ್ಯಾನ್ಸ್..!

ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಜೋಡಿ ಪ್ರೀತಿಸುತ್ತಿದ್ದಾರೆ ಎಂಬ ವದಂತಿಗಳಿವೆ. ಅವರು ಆಗಾಗ್ಗೆ ಒಂದೇ ರೀತಿಯ ಚಿತ್ರಗಳನ್ನು ಪೋಸ್ಟ್ ಮಾಡಿ ಅಭಿಮಾನಿಗಳ ಕೈಗೆ ಸಿಕ್ಕಿಹಾಕಿಕೊಳ್ಳುತ್ತಾರೆ. ಇದೀಗ ಟರ್ಕಿಯಲ್ಲಿ ರಶ್ಮಿಕಾ-ವಿಜಯ್ ಸುತ್ತಾಟ ನಡೆಸಿದ್ದಾರೆ ಎನ್ನಲಾಗಿದ್ದು, ಇದಕ್ಕೆ ಕೆಲವು ಫೋಟೋಗಳು ಸಾಕ್ಷಿಯಾಗಿದೆ.

ಹೌದು. ರಶ್ಮಿಕಾ ಅವರ ಇತ್ತೀಚಿನ ಫೋಟೋ ಮತ್ತೆ ಅಂತಹ ವದಂತಿಗಳನ್ನು ಹುಟ್ಟುಹಾಕಿದೆ. ನಟಿ ಇತ್ತೀಚೆಗೆ ಟರ್ಕಿಯಲ್ಲಿ ರಜಾದಿನಗಳಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.ರಶ್ಮಿಕಾ ಮಂದಣ್ಣ ಪೋಸ್ಟ್ ಮಾಡಿದ ಫೋಟೋಗೂ ವಿಜಯ್ ಪೋಸ್ಟ್ ಮಾಡಿದ ಫೋಟೋವು ಒಂದೇ ಸ್ಥಳವಾಗಿದೆ ಎನ್ನಲಾಗಿದ್ದು, ಅಭಿಮಾನಿಗಳು ಮತ್ತೆ ಇಬ್ಬರನ್ನು ಕಾಳೆದಿದ್ದಾರೆ. ಇಬ್ಬರು ಒಟ್ಟಿಗೆ ಸುತ್ತಾಡಿ ಬೇರೆ ಬೇರೆ ದಿನ ಫೋಟೋ ಹಾಕಿದ್ದಾರೆ ಎಂದು ಕಮೆಂಟ್ ಮಾಡಿದ್ದಾರೆ. ರಶ್ಮಿಕಾ ಕ್ಲಿಕ್ಕಿಸಿಕೊಂಡ ಫೋಟೋದ ಬ್ಯಾಕ್ಗ್ರೌಂಡ್ ವಿಜಯ್ ದೇವರಕೊಂಡ ಟರ್ಕಿಯಿಂದ ಪೋಸ್ಟ್ ಮಾಡಿದ್ದ ಫೋಟೋದ ಬ್ಯಾಕ್ ಗ್ರೌಂಡ್ ಒಂದೇ ಇದೆ. ಮೊದಲೇ ಇಬ್ಬರ ಡೇಟಿಂಗ್ ಬಗ್ಗೆ ಸಾಕಷ್ಟು ಸುದ್ದಿಯಾಗಿದ್ದು, ಈ ಪೋಸ್ಟ್ನಿಂದ ಮತ್ತಷ್ಟು ಸಂಶಯ ಜಾಸ್ತಿಯಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...