alex Certify ‘ಮೇರಾ ಯಾರ್‌’ಗೆ ಆಕರ್ಷಕವಾಗಿ ಕುಣಿದ ಬಾಲಕಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಮೇರಾ ಯಾರ್‌’ಗೆ ಆಕರ್ಷಕವಾಗಿ ಕುಣಿದ ಬಾಲಕಿ…!

Little girl dances to Dhvani Bhanushali's Mera Yaar in viral video. Fabulous,  says Internet - Trending News Newsಸಾಮಾಜಿಕ ಜಾಲತಾಣದಲ್ಲಿ ಕೆಲವು ಮಂದಿ ಬಳಕೆದಾರರು ಹಾಡು, ನೃತ್ಯದಂತಹ ವಿಡಿಯೋಗಳನ್ನು ಆಗಾಗ್ಗೆ ಪೋಸ್ಟ್ ಮಾಡುತ್ತಿರುತ್ತಾರೆ. ಅದರಲ್ಲೂ ಸಿಂಹಳೀಯ ಮನಿಕೆ ಮಗೆ ಹಿತೆ ಹಾಡಿಗೆ ಹಲವಾರು ಮಂದಿ ತಮ್ಮದೇ ಶೈಲಿಯಲ್ಲಿ ನೃತ್ಯ ಮಾಡಿರುವಂತಹ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದ್ದವು.

ಇದೀಗ ಬಾಲಕಿಯೊಬ್ಬಳು ಧ್ವನಿ ಭಾನುಶಾಲಿ ಅವರ ಟ್ರೆಂಡಿಂಗ್ ಹಾಡಿನ ಮೇರಾ ಯಾರ್‌ಗೆ ನೃತ್ಯ ಮಾಡಿರುವ ವಿಡಿಯೋ ಇನ್ಸ್ಟಾಗ್ರಾಂನಲ್ಲಿ ವೈರಲ್ ಆಗಿದ್ದು, ನೆಟ್ಟಿಗರ ಗಮನ ಸೆಳೆದಿದೆ.

ಇದೀಗ ಇನ್ಸ್ಟಾಗ್ರಾಂನಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿರುವ ಬಾಲಕಿಯನ್ನು ಸಿಯಾ ಮಕ್ವಾನಾ ಎಂದು ಗುರುತಿಸಲಾಗಿದೆ. ಬಾಲಕಿಯು ಹಾಡಿಗೆ ಆಕರ್ಷಕವಾಗಿ ಕುಣಿದಿದ್ದಾಳೆ. ಆಕೆ ಮುಖದಲ್ಲಿ ಮುಗುಳ್ನಗೆ ತುಂಬಿ, ಹೆಜ್ಜೆ ಹಾಕಿದ್ದು, ನೆಟ್ಟಿಗರ ಹೃದಯ ಗೆದ್ದಿದೆ.

ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಿದ ನಂತರ ಈ ವಿಡಿಯೋ ಸುಮಾರು 10 ಲಕ್ಷ ವೀಕ್ಷಣೆಗಳನ್ನು ಗಳಿಸಿದೆ. ನೆಟಿಜನ್‌ಗಳು ಸಿಯಾ ಅವರ ಅದ್ಭುತ ನೃತ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪುಟ್ಟ ಹುಡುಗಿ ನಿಜಕ್ಕೂ ಅಸಾಧಾರಣ ಪ್ರತಿಭೆಯಾಗಿದ್ದು, ಚೆನ್ನಾಗಿ ಡಾನ್ಸ್ ಮಾಡಿದ್ದಾಳೆ ಅಂತೆಲ್ಲಾ ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...