alex Certify ಮುಖದ ಸೌಂದರ್ಯ ಹಾಳು ಮಾಡುವ ಬಿರುಕು ತುಟಿ ಸಮಸ್ಯೆಗೆ ಇಲ್ಲಿದೆ ಪರಿಹಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮುಖದ ಸೌಂದರ್ಯ ಹಾಳು ಮಾಡುವ ಬಿರುಕು ತುಟಿ ಸಮಸ್ಯೆಗೆ ಇಲ್ಲಿದೆ ಪರಿಹಾರ

ಸಾಮಾನ್ಯವಾಗಿ ಎಲ್ಲ ಮಹಿಳೆಯರಿಗೆ ತಾನು ತುಂಬಾ ಚಂದದ ಡ್ರೆಸ್​ ಹಾಕಿಕೊಳ್ಳಬೇಕು. ಅದಕ್ಕೆ ತಕ್ಕಂತ ಮೇಕಪ್,​ ಲಿಪ್​ಸ್ಟಿಕ್​ ಹಚ್ಚಬೇಕು ಅನ್ನೋ ಆಸೆ ಇದ್ದೇ ಇರುತ್ತೆ. ಆದರೆ ಮುಖದ ಸೌಂದರ್ಯವನ್ನ ಹೆಚ್ಚಿಸೋ ನಿಮ್ಮ ತುಟಿಗಳು ಆರೋಗ್ಯವಾಗಿಲ್ಲ ಅಂದರೆ ನೀವು ಅದೆಷ್ಟೇ ಮೇಕಪ್​ ಮಾಡಿದ್ರೂ ವ್ಯರ್ಥ. ಬಿರುಕು ಬಿಟ್ಟ ತುಟಿಗಳು ನಿಮ್ಮ ಮುಖದ ಅಂದವನ್ನ ಕೆಡಿಸಿಬಿಡುತ್ತವೆ.

ನಯವಾದ ತುಟಿಗಳನ್ನ ಹೊಂದಬೇಕು ಅಂದರೆ ತುಟಿಗಳ ಆರೈಕೆ ಮಾಡೋದೂ ಕೂಡ ಅಷ್ಟೇ ಅವಶ್ಯಕ. ಇದಕ್ಕೆ ಜಾಸ್ತಿ ಕಷ್ಟ ಪಡಬೇಕಾದದ್ದು ಏನೂ ಇಲ್ಲ. ಸ್ವಲ್ಪೇ ಸ್ವಲ್ಪ ಎಫರ್ಟ್ ಹಾಕಿದ್ರೆ ತೊಂಡೆ ಹಣ್ಣಿನಂತ ತುಟಿ ನಿಮ್ಮದಾಗಲಿದೆ.

ತುಟಿ ಒಣಗಿದ ಹಾಗೆ ಎನಿಸ್ತಾ ಇದ್ದಂತೆಯೇ ನಾವು ನಾಲಗೆಯಿಂದ ನೆಕ್ಕಿಕೊಳ್ತೇವೆ. ಇದು ಆ ಕ್ಷಣಕ್ಕೆ ನಿಮ್ಮ ತುಟಿ ಸರಿಯಾಯ್ತು ಅಂತಾ ಅನಿಸುತ್ತೆ. ಆದರೆ ನಿಮ್ಮ ಈ ಅಭ್ಯಾಸ ತುಟಿ ಆರೋಗ್ಯಕ್ಕೆ ಹಾನಿಕಾರಕ. ಎಂಜಲಿನಲ್ಲಿರುವ ಎಂಜೈಮ್​​ಗಳು ನಿಮ್ಮ ತುಟಿಯನ್ನ ಮೇಲಿರುವ ರಕ್ಷಣಾ ಕವಚಕ್ಕೆ ಹಾನಿ ಮಾಡುವ ಸಾಧ್ಯತೆ ಇದೆ.

ನಿಮ್ಮ ಆಹಾರ ಕ್ರಮ ಕೂಡ ನಿಮ್ಮ ತುಟಿಯ ಆರೋಗ್ಯವನ್ನ ಕಾಪಾಡಬಲ್ಲುದು. ವಿಟಮಿನ್​ ಇ ಅಂಶ ಹೇರಳವಾಗಿರುವ ಪದಾರ್ಥಗಳು ತುಟಿಯ ಕಾಂತಿಯನ್ನ ಹೆಚ್ಚಿಸೋಕೆ ಕಾರಣವಾಗುತ್ತೆ. ಅತೀ ಉಪ್ಪು ಹಾಗೂ ಖಾರದ ಪದಾರ್ಥಗಳು ತುಟಿಯನ್ನ ಒಣಗಿಸಿ ಬಿಡುತ್ತೆ. ಅತಿಯಾಗಿ ನೀರು ಕುಡಿಯೋದ್ರಿಂದ ತುಟಿಯ ಸೌಂದರ್ಯ ಇಮ್ಮಡಿಯಾಗಲಿದೆ.

ಮಲಗುವ ಮುನ್ನ ತುಟಿಗೆ ಲಿಪ್​ಬಾಮ್​ ಹಚ್ಚೋದನ್ನ ಮರೆಯದಿರಿ. ಬೆಳಗ್ಗೆ ಎದ್ದೊಡನೆಯೇ ಹತ್ತಿ ಇಲ್ಲವೇ ಮೃದುವಾದ ಬಟ್ಟೆ ಉಪಯೋಗಿಸಿ ತುಟಿಯ ಮೇಲೆ ಮಸಾಜ್​ ಮಾಡಿ. ಇದು ನಿಮ್ಮ ತುಟಿಯಲ್ಲಿ ರಕ್ತದ ಹರಿವನ್ನ ಹೆಚ್ಚಿಸೋದ್ರ ಜೊತೆಗೆ ತುಟಿ ಇನ್ನಷ್ಟು ಮೃದು ಆಗೋಕೆ ಸಹಾಯಕಾರಿ.

ನೀವು ಯಾವ ಅಲಂಕಾರಿಕ ವಸ್ತುವನ್ನ ಬಳಸ್ತೀರಾ ಅನ್ನೋದು ಕೂಡ ನಿಮ್ಮ ತುಟಿಯ ಆರೋಗ್ಯವನ್ನ ನಿರ್ಧಾರ ಮಾಡುತ್ತೆ. ಹೀಗಾಗಿ ಯಾವ ಲಿಪ್​ ಬಾಮ್​​ಗಳಲ್ಲಿ ವಿಟಮಿನ್​ ಇ, ಆಲ್ಮಂಡ್​ ಅಥವಾ ತೆಂಗಿನೆಣ್ಣೆ ,ಪೆಟ್ರೋಲಿಯಂ ಜೆಲ್ಲಿ ಹೇರಳವಾಗಿರುತ್ತದೆಯೋ ಅಂತಹ ಬಾಮ್​ಗಳನ್ನೇ ಬಳಕೆ ಮಾಡಿ. ಲಿಪ್​ಬಾಮ್​ನ ಬೆಲೆ ಹೆಚ್ಚಿದಂತೆ ಅದು ಚರ್ಮಕ್ಕೆ ಒಳ್ಳೆಯದು ಅನ್ನೋ ವಿಚಾರವನ್ನ ಮೊದಲು ತಲೆಯಿಂದ ತೆಗೆದು ಹಾಕಿ. ಕೆಲವೊಮ್ಮೆ ಕಡಿಮೆ ಬೆಲೆಯ ಲಿಪ್​ಬಾಮ್​ಗಳೇ ನಿಮ್ಮ ಚರ್ಮದ ಆರೋಗ್ಯಕ್ಕೆ ಹಿತವಾಗಿರಬಹುದು. ಹೀಗಾಗಿ ಯೋಚಿಸಿ ಶಾಪಿಂಗ್​ ಮಾಡಿ.

ಎಲ್ಲಕ್ಕಿಂತ ಮುಖ್ಯವಾಗಿ ನಿತ್ಯ ಮಲಗುವ ಮುನ್ನ ಮೇಕಪ್​ ರಿಮೂವ್​ ಮಾಡೋದನ್ನ ಮರೆಯದಿರಿ. ಕಾಟನ್​ಗೆ ಸ್ವಲ್ಪ ತೆಂಗಿನೆಣ್ಣೆ ತಾಗಿಸಿ ಅದರಿಂದ ಮೃದುವಾಗಿ ತುಟಿಗಳ ಮೇಲೆ ಮಸಾಜ್​ ಮಾಡುತ್ತಾ ಲಿಪ್​ಸ್ಟಿಕ್​ಗಳನ್ನ ತೆಗೆಯಿರಿ. ಯಾವುದೇ ಕಾರಣಕ್ಕೂ ತುಟಿಗಳ ಮೇಲೆ ಗಟ್ಟಿಯಾಗಿ ಉಜ್ಜಬೇಡಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...