alex Certify ಮುಕ್ತ ವಿವಿ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಏಕಕಾಲದಲ್ಲಿ ಎರಡು ‘ಪದವಿ’ ಪಡೆಯಲು ಅವಕಾಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮುಕ್ತ ವಿವಿ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಏಕಕಾಲದಲ್ಲಿ ಎರಡು ‘ಪದವಿ’ ಪಡೆಯಲು ಅವಕಾಶ

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ಒಂದು ಇಲ್ಲಿದೆ. ರಾಷ್ಟ್ರೀಯ ಮೌಲ್ಯಾಂಕನ ಮತ್ತು ಮಾನ್ಯತಾ ಮಂಡಳಿ (ನ್ಯಾಕ್), ಮುಕ್ತ ವಿವಿಗೆ ಎ ಪ್ಲಸ್ ಮಾನ್ಯತೆ ನೀಡಿದ್ದು, ಹೀಗಾಗಿ ಏಕಕಾಲದಲ್ಲಿ ಈ ಎರಡು ಪದವಿ ಪಡೆಯುವ ಅವಕಾಶ ಲಭ್ಯವಾಗಲಿದೆ.

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಶರಣಪ್ಪ ವಿ ಹಲಸೆ ಮೈಸೂರಿನ ಮುಕ್ತ ಗಂಗೋತ್ರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದು, ದೇಶದಲ್ಲಿ ಒಟ್ಟು 16 ಮುಕ್ತ ವಿಶ್ವವಿದ್ಯಾಲಯಗಳಿವೆ. ಈ ಪೈಕಿ ಗುಜರಾತಿನ ಅಂಬೇಡ್ಕರ್ ಮುಕ್ತ ವಿಶ್ವವಿದ್ಯಾಲಯಕ್ಕೆ ಎ ಪ್ಲಸ್ ಪ್ಲಸ್ ಮಾನ್ಯತೆ ಲಭಿಸಿದೆ ಎಂದರು.

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯಕ್ಕೆ 0.19 ಅಂಕಗಳ ಅಂತರದಲ್ಲಿ ಮೊದಲ ಸ್ಥಾನ ತಪ್ಪಿದೆ. ಆದರೆ ಈ ಬಾರಿ ಎ ಪ್ಲಸ್ ಸಾಧನೆ ಮಾಡಿದ ರಾಜ್ಯದ ಮೊದಲ ವಿಶ್ವವಿದ್ಯಾಲಯ ಎಂಬ ಹೆಗ್ಗಳಿಕೆಗೆ ಮುಕ್ತ ವಿವಿ ಪಾತ್ರವಾಗಿದೆ ಎಂದರು. ಏ ಪ್ಲಸ್ ಮಾನ್ಯತೆ ಸಿಕ್ಕಿರುವುದರಿಂದ ಆನ್ಲೈನ್ ಕೋರ್ಸ್ ಆರಂಭಿಸಬಹುದಾಗಿದೆ ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...