alex Certify ಮುಂಬೈನಲ್ಲಿ ನೆರವೇರಿದೆ ಅಮೀರ್‌ ಪುತ್ರಿ ನಿಶ್ಚಿತಾರ್ಥ, ಪ್ರೀತಿಸಿದ ಯುವಕನೊಂದಿಗೆ ಉಂಗುರ ಬದಲಾಯಿಸಿಕೊಂಡ ಇರಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮುಂಬೈನಲ್ಲಿ ನೆರವೇರಿದೆ ಅಮೀರ್‌ ಪುತ್ರಿ ನಿಶ್ಚಿತಾರ್ಥ, ಪ್ರೀತಿಸಿದ ಯುವಕನೊಂದಿಗೆ ಉಂಗುರ ಬದಲಾಯಿಸಿಕೊಂಡ ಇರಾ

ಬಾಲಿವುಡ್‌ ನಟ ಅಮೀರ್ ಖಾನ್ ಪುತ್ರಿಯ ನಿಶ್ಚಿತಾರ್ಥ ನೆರವೇರಿದೆ. ತಾನು ಪ್ರೀತಿಸ್ತಾ ಇದ್ದ ಯುವಕನೊಂದಿಗೆ ಇರಾ ಖಾನ್‌ ಉಂಗುರ ಬದಲಾಯಿಸಿಕೊಂಡಿದ್ದಾಳೆ. ಇರಾ ಖಾನ್ ಫಿಟ್‌ನೆಸ್ ತರಬೇತುದಾರ ನೂಪುರ್ ಶಿಖಾರೆ ಜೊತೆಗೆ ಎಂಗೇಜ್ಮೆಂಟ್‌ ನೆರವೇರಿದೆ.

ಕಳೆದ ಎರಡು ವರ್ಷಗಳಿಂದ ಇರಾ ಹಾಗೂ ನೂಪುರ್‌ ಡೇಟಿಂಗ್ ಮಾಡುತ್ತಿದ್ದರು. ಈಗ ಅಂತಿಮವಾಗಿ ಮದುವೆಗೆ ಸಜ್ಜಾಗಿದ್ದಾರೆ. ಮುಂಬೈನಲ್ಲಿ ನಡೆದ ಸಮಾರಂಭದಲ್ಲಿ ಇರಾ ಮತ್ತು ನೂಪುರ್ ನಿಶ್ಚಿತಾರ್ಥ ಮಾಡಿಕೊಂಡರು. ಕುಟುಂಬದವರು ಹಾಗೂ ಆಪ್ತರ ಸಮ್ಮುಖದಲ್ಲಿ ಎಂಗೇಜ್ಮೆಂಟ್‌ ನೆರವೇರಿದೆ.

ಇರಾ ಗೌನ್‌ ತೊಟ್ಟು ಸಖತ್‌ ಬೋಲ್ಡ್‌ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾಳೆ. ನೂಪುರ್‌ ಶಿಖಾರೆ ಕೂಡ ಫುಲ್‌ ಟಿಪ್‌ ಟಾಪ್‌ ಲುಕ್‌ನಲ್ಲಿ ಗಮನ ಸೆಳೆದಿದ್ದಾರೆ. ಇರಾ ತಂದೆ ಅಮೀರ್ ಖಾನ್, ತಾಯಿ ರೀನಾ ದತ್ತಾ, ಅಜ್ಜಿ, ಸಹೋದರ ಮತ್ತು ಚಿಕ್ಕಮ್ಮ ಕಿರಣ್ ರಾವ್,  ಮಗ ಆಜಾದ್ ಸೇರಿದಂತೆ ಕುಟುಂಬಸ್ಥರೆಲ್ಲ ನಿಶ್ಚಿತಾರ್ಥದಲ್ಲಿ ಹಾಜರಿದ್ದರು.

ಇರಾ ಮತ್ತು ನೂಪುರ್‌ಗೆ ಎಲ್ಲರೂ ಶುಭಾಶಯ ಹೇಳಿದ್ದಾರೆ. ಬಿಳಿಯ ಧೋತಿ ಕುರ್ತಾದಲ್ಲಿ ಆಗಮಿಸಿದ ಅಮೀರ್ ಖಾನ್‌ರ  ಬಿಳಿ ಗಡ್ಡ ಮತ್ತು ಕೂದಲನ್ನು ನೋಡಿ ಎಲ್ಲರೂ ಬೆರಗಾಗಿದ್ದಾರೆ. ಅಮೀರ್‌ಗೆ ವಯಸ್ಸಾಗಿದೆ ಅನ್ನೋದನ್ನು ಫೋಟೋಗಳು ಸಾರಿ ಹೇಳ್ತಾ ಇವೆ. ಶೀಘ್ರದಲ್ಲೇ ಅಮೀರ್‌ ಖಾನ್‌ ಪುತ್ರಿಯ ಮದುವೆ ಕೂಡ ನೆರವೇರಲಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...