alex Certify ಮಿತಿಗಿಂತ ಹೆಚ್ಚು ʼನೀರುʼ ಕುಡಿಯಬೇಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಿತಿಗಿಂತ ಹೆಚ್ಚು ʼನೀರುʼ ಕುಡಿಯಬೇಡಿ

ನೀರು ನಮ್ಮ ಜೀವನಕ್ಕೆ ಅತ್ಯಂತ ಮುಖ್ಯ. ನಮ್ಮ ದೇಹದಲ್ಲಿ ಶೇಕಡಾ 60 ಕ್ಕಿಂತ ಹೆಚ್ಚು ಮತ್ತು ನಮ್ಮ ಮಿದುಳಿನಲ್ಲಿ ಸುಮಾರು 75 ಪ್ರತಿಶತದಷ್ಟು ನೀರಿದೆ. ನೀರಿಲ್ಲದೆ ಮನುಷ್ಯ ಬದುಕಿರಲಾರ. ಆದ್ರೆ ಒಂದು ಮಿತಿಗಿಂತ ಹೆಚ್ಚು ನೀರು ಕುಡಿಯುವುದು ಅಪಾಯಕ್ಕೆ ದಾರಿ ಮಾಡಿಕೊಡುತ್ತದೆ.

ವೈಜ್ಞಾನಿಕ ಸಂಶೋಧನೆಯ ಪ್ರಕಾರ, ಅತಿಯಾಗಿ ನೀರನ್ನು ಕುಡಿಯೋದ್ರಿಂದ ಕೆಲವು ಸಂದರ್ಭಗಳಲ್ಲಿ ಸಾವು ಸಹ ಸಂಭವಿಸುವ ಸಾಧ್ಯತೆ ಇರುತ್ತದೆ. ಹೈಪೋನಾಟ್ರೇಮಿಯಾ ಎಂಬ ಸಮಸ್ಯೆ ಉಂಟಾಗಬಹುದು.

ಒಂದೇ ಬಾರಿಗೆ ಹೆಚ್ಚು ನೀರು ಕುಡಿದರೆ ಈ ಸಮಸ್ಯೆ ಉಂಟಾಗುತ್ತದೆ. ಹಿಪ್ನಾಟ್ರೀಮಿಯವು ದೇಹದಲ್ಲಿನ ಇಲೆಕ್ಟ್ರೋಲಾಯಿಟ್  ಅಸಮತೋಲನಕ್ಕೆ ಕಾರಣವಾಗುತ್ತದೆ. ರಕ್ತದಲ್ಲಿ ಸೋಡಿಯಂನ ಅಂಶ ಬಹಳ ಮುಖ್ಯ. ಆದರೆ ಹೆಚ್ಚು ನೀರು ಕುಡಿಯುವುದರಿಂದ ರಕ್ತದಲ್ಲಿನ ಸೋಡಿಯಂ ಪ್ರಮಾಣ ಕಡಿಮೆಯಾಗುತ್ತದೆ .

ಹೆಚ್ಚು ನೀರು ಕುಡಿದಾಗ ಮೂತ್ರಪಿಂಡಗಳು ಅಷ್ಟೂ ನೀರನ್ನು ಶುದ್ದೀಕರಿಸಲು ಸಾಧ್ಯವಿಲ್ಲ. ಇಂತಹ ಸಂದರ್ಭಗಳಲ್ಲಿ ನೀರು ರಕ್ತದ ಜೊತೆ ನೇರವಾಗಿ ಸೇರಿ ರಕ್ತವನ್ನು ದುರ್ಬಲಗೊಳಿಸಲು ಪ್ರಾರಂಭಿಸುತ್ತದೆ. ಇದು ಹೃದಯಕ್ಕೆ ಹಾಗೂ ಮಿದುಳಿಗೆ ಹಾನಿ ಉಂಟು ಮಾಡುತ್ತದೆ.

ನಿಮಗೆ ಬಾಯಾರಿದಾಗ ನೀರು ಕುಡಿಯಿರಿ. ನಿಮ್ಮ ದೇಹಕ್ಕೆ  ಅಷ್ಟೇ ಅಗತ್ಯವಿರುತ್ತದೆ. ಪ್ರತಿಯೊಬ್ಬ ವ್ಯಕ್ತಿಯ ದೇಹದಲ್ಲಿ ನೀರಿನ  ಅವಶ್ಯಕತೆ ಬೇರೆಯಾಗಿರುತ್ತೆ. ಸಾಮಾನ್ಯವಾಗಿ ದಿನಕ್ಕೆ  ಒಬ್ಬ ವ್ಯಕ್ತಿಗೆ ಕನಿಷ್ಠ ಮೂರರಿಂದ ನಾಲ್ಕು ಲೀಟರ್ ನೀರು ಬೇಕು. ಆದರೆ ನಿಮ್ಮ ದೇಹದ ಅಗತ್ಯತೆಗಳಿಗನುಸಾರ ನೀರು ಕುಡಿಯುವುದು ಉತ್ತಮ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...