alex Certify ಮಾರುತಿ ಸುಜುಕಿ ಗ್ರ್ಯಾಂಡ್​ ವಿಟಾರಾ SUV ಬುಕಿಂಗ್​ ಪ್ರಾರಂಭ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಾರುತಿ ಸುಜುಕಿ ಗ್ರ್ಯಾಂಡ್​ ವಿಟಾರಾ SUV ಬುಕಿಂಗ್​ ಪ್ರಾರಂಭ

ಮಾರುತಿ ಸುಜುಕಿ ಇಂಡಿಯಾ (ಎಂಎಸ್​ಐ) ತಮ್ಮ ಮುಂಬರುವ ಮಧ್ಯಮ ಗಾತ್ರದ ಎಸ್​ಯುವಿ ಮಾರುತಿ ಸುಜುಕಿ ಗ್ರಾಂಡ್​ ವಿಟಾರಾಗಾಗಿ ಬುಕಿಂಗ್​ ಸ್ವೀಕರಿಸಲು ಪ್ರಾರಂಭಿಸಿದ್ದಾರೆ.

ಆಸಕ್ತ ಖರೀದಿದಾರರು ಆರಂಭಿಕ ಮೊತ್ತ ರೂ. 11,000 ಪಾವತಿಸಿ ಹೊಸ ಎಸ್​ಯುವಿಯನ್ನು ಬುಕ್​ ಮಾಡಬಹುದು. ಇದು ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೋಸ್​, ಟಾಟಾ ಹ್ಯಾರಿಯರ್​ ಮತ್ತು ಇತರ ವಿಭಾಗದಲ್ಲಿ ಸ್ಪಧಿರ್ಸಲಿದೆ. ಹೊಸ ಮಾರುತಿ ಸುಜುಕಿ ಗ್ರ್ಯಾಂಡ್​ ವಿಟಾರಾ ಜುಲೈ 20 ರಂದು ಜಾಗತಿಕವಾಗಿ ಪಾದಾರ್ಪಣೆ ಮಾಡಲಿದೆ.

ಮುಂಬರುವ ಎಸ್​ಯುವಿಯ ಉತ್ಪಾದನೆಯು ಆಗಸ್ಟ್​ನಲ್ಲಿ ಪ್ರಾರಂಭವಾಗಲಿದೆ ಮತ್ತು ಈ ಕಾರು ಹಬ್ಬದ ಋತುವಿನಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ. ಮಾರುತಿ ಸುಜುಕಿ ಗ್ರಾಂಡ್​ ವಿಟಾರಾ ಈ ತಿಂಗಳ ಆರಂಭದಲ್ಲಿ ಅನಾವರಣಗೊಂಡ ಟೊಯೋಟಾ ಅರ್ಬನ್​ ಕ್ರೂಸರ್​ ಹೈರೈಡರ್​ ಎಸ್​ಯುವಿಯ ಸುಜುಕಿಯಂತೆ ತೋರುತ್ತದೆ.

ಟೊಯೊಟಾ ಮತ್ತು ಸುಜುಕಿ ನಡುವಿನ ಜಾಗತಿಕ ಸಹಯೋಗದ ಒಪ್ಪಂದದ ಪ್ರಕಾರ ಮಾರುತಿ ಸುಜುಕಿ ಗ್ರಾಂಡ್​ ವಿಟಾರಾ ಎಸ್​ಯುವಿಯನ್ನು ಟೊಯೊಟಾ ಕಿಲೋರ್ಸ್ಕರ್​ ಮೋಟಾರ್ಸ್​ ಕರ್ನಾಟಕ ಮೂಲದ ಘಟಕದಲ್ಲಿ ಉತ್ಪಾದಿಸಲಾಗುವುದು.

ಈ ಮಾದರಿಯು ಭಾರತೀಯ ಪರಿಸ್ಥಿತಿಗಳಿಗೆ ಸೂಕ್ತವಾಗಿರುತ್ತದೆ ಮತ್ತು ಪೆಟ್ರೋಲ್​ ಪವರ್​ಟ್ರೇನ್​ಗೆ ಸಂಯೋಜಿತವಾದ ಹೈಬ್ರಿಡ್​ ವ್ಯವಸ್ಥೆಯನ್ನು ಒಳಗೊಂಡಿರುತ್ತದೆ. ಪ್ರಮುಖವಾಗಿ ಇಂಧನ ದಕ್ಷತೆಯನ್ನು ನೀಡುತ್ತದೆ ಎಂದು ಹೇಳಿಕೊಂಡಿರುವ ಕಂಪನಿ ಅಂಕಿಅಂಶಗಳನ್ನು ಪ್ರಸ್ತುತಪಡಿಸಿಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...