alex Certify ಮಹಿಳೆಯರಿಗೆ ಹೊಸ ಸುದ್ದಿ: ಬರ್ತಿದೆ ಗರ್ಭಧಾರಣೆ ತಡೆಯಲು ಗಿಡಮೂಲಿಕೆ ಔಷಧ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಹಿಳೆಯರಿಗೆ ಹೊಸ ಸುದ್ದಿ: ಬರ್ತಿದೆ ಗರ್ಭಧಾರಣೆ ತಡೆಯಲು ಗಿಡಮೂಲಿಕೆ ಔಷಧ

ಗರ್ಭಧಾರಣೆಯನ್ನು ತಡೆಯಬಲ್ಲ ಅಧಿಕೃತ ಗಿಡಮೂಲಿಕೆ ಔಷಧ ಸಧ್ಯದಲ್ಲೇ ಮಾರುಕಟ್ಟೆಗೆ ಬರಲಿದೆ. ಮಹಾರಾಷ್ಟ್ರದ ಫ್ರೊಫೆಸರ್‌ ಡಾ. ಆಶಾ ಭೌಸಾಹೇಬ್‌ ಕದಂ ಅವರ 10 ವರ್ಷಗಳ ಸಂಶೋಧನೆಯ ಫಲ ಇದು. ಇಷ್ಟು ವರ್ಷಗಳ ಪರಿಶ್ರಮದ ಬಳಿಕ ಅವರಿಗೆ ಈ ಔಷಧದ ಗಿಡಮೂಲಿಕೆ ಸೂತ್ರಕ್ಕಾಗಿ ಭಾರತ ಸರ್ಕಾರದಿಂದ ಪೇಟೆಂಟ್‌ ಸಿಕ್ಕಿದೆ.

ವಿಶ್ವಾಸಾರ್ಹ ಔಷಧೀಯ ಕಂಪನಿಯ ಸಹಯೋಗದೊಂದಿಗೆ ಈ ಮೆಡಿಸಿನ್‌ ಮಾರುಕಟ್ಟೆಗೆ ಬರಲಿದೆ. ಈ ಔಷಧವು ಟ್ಯಾಬ್ಲೆಟ್ ಮತ್ತು ದ್ರವ ರೂಪದಲ್ಲಿ ಲಭ್ಯವಿರುತ್ತದೆ. ಕುಟುಂಬ ಯೋಜನೆಯಲ್ಲಿ ಯಶಸ್ಸು ಸಾಧಿಸಲು ಇದು ಸಹಕರಿಸಲಿದೆ. ಗರ್ಭಾವಸ್ಥೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಈ ಗಿಡಮೂಲಿಕೆ ಔಷಧ ಅತ್ಯಂತ ನಿಖರವಾದ ಫಲಿತಾಂಶಗಳನ್ನು ನೀಡಲಿದೆ ಎಂಬ ವಿಶ್ವಾಸವಿದೆ.

ಈ ಸೂತ್ರವನ್ನು ವೈಜ್ಞಾನಿಕ ಮಾನದಂಡದ ಮೇಲೆ ಪರೀಕ್ಷಿಸಲಾಗಿದೆ ಅಂತಾ ಡಾ.ಕದಂ ತಿಳಿಸಿದ್ದಾರೆ. ಇದನ್ನು ಇಲಿಗಳ ಮೇಲೆ ಪ್ರಯೋಗಿಸಿದಾಗ ಶೇ.100ರಷ್ಟು ಯಶಸ್ಸು ಸಿಕ್ಕಿದೆ. ನಂತರ ಈ ಔಷಧವನ್ನು ಮಹಿಳೆಯರ ಮೇಲೆ ಪರೀಕ್ಷಿಸಲಾಯಿತು, ಇದರಲ್ಲಿ ಯಶಸ್ಸಿನ ಪ್ರಮಾಣವು ತುಂಬಾ ಉತ್ತಮವಾಗಿದೆ.

ಈ ಔಷಧದ ಸೂತ್ರವು ನೂರಕ್ಕೆ ನೂರರಷ್ಟು ಗಿಡಮೂಲಿಕೆಯದ್ದು ಅಂತಾ ಡಾ.ಕದಂ ಸ್ಪಷ್ಟಪಡಿಸಿದ್ದಾರೆ. ಔಷಧೀಯ ಸಸ್ಯಗಳ ಸಾರಗಳಿಂದ ಇದನ್ನು ತಯಾರಿಸಲಾಗುತ್ತದೆ. ಬುಡಕಟ್ಟು ಮಹಿಳೆಯರಿಗೆ ಈ ಸಸ್ಯಗಳ ಬಗ್ಗೆ ತಿಳಿದಿದ್ದು, ಅವರೂ ಇದನ್ನು ಬಳಸ್ತಾರಂತೆ.  ವಿವರವಾದ ಅಧ್ಯಯನದ ನಂತರ ಸೂತ್ರವನ್ನು ಸಿದ್ಧಪಡಿಸಲಾಗಿದೆ. ಸಸ್ಯಗಳ ಎಲೆಗಳು, ತೊಗಟೆ, ಬೀಜಗಳು ಇತ್ಯಾದಿಗಳನ್ನು ಬೆರೆಸಿ ನಾವು ಸೂತ್ರವನ್ನು ಸಿದ್ಧಪಡಿಸಿದ್ದೇವೆ. ಇದಾದ ನಂತರ, ಅದನ್ನು ಅನುಮೋದನೆಗಾಗಿ ಕೇಂದ್ರ ಸರ್ಕಾರದ ರಾಷ್ಟ್ರೀಯ ವಿಷಶಾಸ್ತ್ರ ಕೇಂದ್ರಕ್ಕೆ (ಪುಣೆ) ಸಲ್ಲಿಸಲಾಗಿತ್ತು. ಸೂಕ್ತ ಪರಿಶೀಲನೆಯ ಬಳಿಕವೇ ಅನುಮೋದನೆ ಸಿಕ್ಕಿದ್ದು, ಫೆಬ್ರವರಿ 18 ರಂದು ಪೇಟೆಂಟ್ ಸಹ ದೊರೆತಿರುವುದಾಗಿ ಕದಂ ಹೇಳಿದ್ದಾರೆ.

ಈ ಔಷಧಿಯನ್ನು ಗಿಡಮೂಲಿಕೆಗಳಿಂದ ತಯಾರಿಸಿರುವುದರಿಂದ ಮಹಿಳೆಯರ ಮೇಲೆ ಯಾವುದೇ ಅಡ್ಡಪರಿಣಾಮ ಬೀರುವುದಿಲ್ಲ. ಗರ್ಭಧಾರಣೆಯನ್ನು ತಪ್ಪಿಸಲು, ಈ ಔಷಧಿಯನ್ನು ದಿನಕ್ಕೆ ಒಮ್ಮೆ ತೆಗೆದುಕೊಳ್ಳಬೇಕು. ತಿಂಗಳಲ್ಲಿ 21 ದಿನ ಸೇವಿಸಬೇಕು. ಇಲ್ಲವಾದಲ್ಲಿ ಪ್ರತಿದಿನವೂ ಔಷಧ ಸೇವಿಸಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...