alex Certify ಮಶ್ರೂಮ್‌ ಸೇವನೆಯಿಂದ ಸಿಗುವ ʼಆರೋಗ್ಯʼ ಲಾಭ ತಿಳಿದರೆ ಬೆರಗಾಗ್ತೀರಾ…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಶ್ರೂಮ್‌ ಸೇವನೆಯಿಂದ ಸಿಗುವ ʼಆರೋಗ್ಯʼ ಲಾಭ ತಿಳಿದರೆ ಬೆರಗಾಗ್ತೀರಾ…..!

ಅಣಬೆ ಇದು ಮಳೆಗಾಲದಲ್ಲಿ ಹೆಚ್ಚಾಗಿ ಸಿಗುತ್ತದೆ. ಇದರಿಂದ ಮಾಡುವ ಖಾದ್ಯಗಳೆಲ್ಲವೂ ರುಚಿಯಾಗಿರುತ್ತದೆ. ಹಾಗೇ ಇದು ಹಲವಾರು ರೋಗಗಳನ್ನು ಕೂಡ ಕಡಿಮೆ ಮಾಡುತ್ತದೆ. ಅದರಲ್ಲೂ ಮುಖ್ಯವಾಗಿ ಮಧುಮೇಹ ನಿಯಂತ್ರಣಕ್ಕೆ ಸಹಾಯಕಾರಿ.

ಇದರಲ್ಲಿರುವ ಫ್ರೀ ಬಯೋಟಿಕ್ ಅಂಶವು ಜೀರ್ಣ ಶಕ್ತಿಯನ್ನು ಹೆಚ್ಚಿಸುತ್ತದೆ. ಲಿವರ್ ಗೆ ಸಂಬಂಧಿಸಿದ ಅನೇಕ ರೋಗಗಳಿಂದ ಮುಕ್ತಿ ಕೊಡುತ್ತದೆ. ಇದು ದೇಹವನ್ನು ಸದೃಢಗೊಳಿಸುತ್ತದೆ.

ಹೃದಯಕ್ಕೆ ಸಂಬಂದಿಸಿದ ಕಾಯಿಲೆಗಳಿಗೆ ಗುಡ್ ಬೈ ಹೇಳಲು ನೀವು ಅಣಬೆಯನ್ನು ನಿಯಮಿತವಾಗಿ ಬಳಸಬಹುದು. ಇದು ದೇಹದ ಚಯಾಪಚಯಕ್ರಿಯೆಯನ್ನು ಸರಾಗಗೊಳಿಸುತ್ತದೆ.

ಚಿಕ್ಕ ಕರುಳಿನ ಕಾರ್ಯವನ್ನು ಸುಧಾರಿಸುತ್ತದೆ. ದೇಹದ ತೂಕವನ್ನೂ ಕಡಿಮೆ ಮಾಡಿಕೊಳ್ಳಲು ಸಹಕಾರಿ. ಹಾಗೇ ಅಣಬೆಯಲ್ಲಿರುವ ಹಲವಾರು ಪೌಷ್ಟಿಕಾಂಶಗಳು ಮತ್ತು ಪ್ರೊಟೀನ್ ಅಂಶಗಳು ಬಿಪಿ ಮತ್ತು ಶುಗರ್ ಲೆವೆಲ್ ಅನ್ನು ನಿಯಂತ್ರಿಸುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...