alex Certify ಮಲಯಾಳಂ ಹಾಡಿಗೆ ಬೊಂಬಾಟ್ ಆಗಿ ಹೆಜ್ಜೆ ಹಾಕಿದ ವೈದ್ಯರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಲಯಾಳಂ ಹಾಡಿಗೆ ಬೊಂಬಾಟ್ ಆಗಿ ಹೆಜ್ಜೆ ಹಾಕಿದ ವೈದ್ಯರು

ವೈದ್ಯರೆಂದರೆ ಬಹಳ ಗಾಂಭೀರ್ಯವಾಗಿ ಇರುವವರು ಅಂತಾನೇ ನೋಡಲಾಗುತ್ತದೆ. ಆದರೆ ವೈದ್ಯರೂ ಕೂಡ ಎಂಜಾಯ್ ಮಾಡುತ್ತಾರೆ, ಡಾನ್ಸ್ ಮಾಡೋದನ್ನು ಎಂದಾದ್ರೂ ನೋಡಿದ್ರಾ..? ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಇಬ್ಬರು ಡಾಕ್ಟರ್ಸ್ ಸಖತ್ ಆಗಿ ಕುಣಿದು ಕುಪ್ಪಳಿಸಿ, ಚಿಂದಿ ಉಡಾಯಿಸಿದ್ದಾರೆ.

ಕೇರಳದ ವಯನಾಡ್‌ನಲ್ಲಿರುವ ಆಸ್ಪತ್ರೆಯೊಂದರ ವೈದ್ಯರು, ಮಲಯಾಳಂನ ಪ್ರಸಿದ್ಧ ಹಾಡು ʼಪಾಲಾ ಪಲ್ಲಿ ತಿರುಪಳ್ಳಿʼಗೆ ಉತ್ಸಾಹದಿಂದ ಹೆಜ್ಜೆ ಹಾಕಿದ್ದಾರೆ. ಕೇರಳದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವೆ ವೀಣಾ ಜಾರ್ಜ್ ಅವರು ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಆನ್‌ಲೈನ್‌ನಲ್ಲಿ ವೈರಲ್ ಆಗಿರುವ ವಿಡಿಯೋವನ್ನು ವೀಣಾ ಜಾರ್ಜ್ ಅವರು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ.

ವಿಡಿಯೋದಲ್ಲಿ, ನಲ್ಲೂರ್ನಾಡ್ ಕ್ಯಾನ್ಸರ್ ಚಿಕಿತ್ಸಾ ಕೇಂದ್ರದ ಅಧೀಕ್ಷಕ ಡಾ. ಸವನ್ ಸಾರಾ ಮ್ಯಾಥ್ಯೂ ಮತ್ತು ವೈದ್ಯಾಧಿಕಾರಿ ಡಾ. ಸಫೀಜ್ ಅಲಿ ಉತ್ಸಾಹದಿಂದ ಹೆಜ್ಜೆ ಹಾಕಿರೋದನ್ನು ವಿಡಿಯೋದಲ್ಲಿ ನೋಡಬಹುದು. ಅವರು ಪೃಥ್ವಿರಾಜ್ ಸುಕುಮಾರನ್ ಅವರ ಪಾಲಾ ಪಲ್ಲಿ ತಿರುಪಲ್ಲಿಗೆ ಹೆಜ್ಜೆ ಹಾಕಿದ್ದಾರೆ.

ವೈದ್ಯರ ಈ ನೃತ್ಯದ ವಿಡಿಯೋವನ್ನು ಹಂಚಿಕೊಳ್ಳುವಾಗ, ಇವರು ಸಾವಿರಾರು ರೋಗಿಗಳಿಗೆ ಅತ್ಯುತ್ತಮ ಸೇವೆಯನ್ನು ಮಾಡುತ್ತಾರೆ ಎಂದು ವೀಣಾ ಜಾರ್ಜ್ ಹೇಳಿದ್ದಾರೆ. ಇದಲ್ಲದೆ, ಇಬ್ಬರೂ ಅತ್ಯುತ್ತಮ ವೈದ್ಯರು ಮತ್ತು ಶ್ರೇಷ್ಠ ನೃತ್ಯಗಾರರು ಎಂದು ಅವರು ತಿಳಿಸಿದ್ದಾರೆ.

ಆನ್‌ಲೈನ್‌ನಲ್ಲಿ ಹಂಚಿಕೊಂಡ ನಂತರ ವಿಡಿಯೋ 5 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ. ನೆಟ್ಟಿಗರು ಪ್ರದರ್ಶನವನ್ನು ಇಷ್ಟಪಟ್ಟಿದ್ದಾರೆ. ಕಾಮೆಂಟ್‌ಗಳ ವಿಭಾಗವನ್ನು ಪ್ರಶಂಸೆಯಿಂದ ತುಂಬಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...