alex Certify ಮನೆಯಲ್ಲಿ ಮಾಡಿ ಸವಿಯಿರಿ ಮ್ಯಾಂಗೋ ಐಸ್ ಕ್ರೀಂ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆಯಲ್ಲಿ ಮಾಡಿ ಸವಿಯಿರಿ ಮ್ಯಾಂಗೋ ಐಸ್ ಕ್ರೀಂ

2 ಟೇಬಲ್ ಸ್ಪೂನ್ ಕಾರ್ನ್ ಫ್ಲೋರ್ ಅನ್ನು ಒಂದು ಬೌಲ್ ಗೆ ಹಾಕಿಕೊಳ್ಳಿ. ಅದಕ್ಕೆ 100 ಎಂ.ಎಲ್. ನಷ್ಟು ಹಾಲು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ನಂತರ ಗ್ಯಾಸ್ ಮೇಲೆ ಒಂದು ಪಾತ್ರೆ ಇಟ್ಟು ಅದಕ್ಕೆ ½ ಲೀಟರ್ ಹಾಲು ಹಾಕಿ ಚೆನ್ನಾಗಿ ಕುದಿಸಿಕೊಳ್ಳಿ,.

ನಂತರ 1/3 ಕಪ್ ಸಕ್ಕರೆ ಹಾಕಿ ಮಿಕ್ಸ್ ಮಾಡಿಕೊಳ್ಳಿ. ನಂತರ ಕಾರ್ನ್ ಪ್ಲೋರ್ ಮಿಶ್ರಣವನ್ನು ಹಾಕಿ ಚೆನ್ನಾಗಿ ಕೈಯಾಡಿಸಿ. ಈ ಮಿಶ್ರಣ ಹದ ದಪ್ಪಗಾಗುವರೆಗೆ ಬಿಡದೆ ಕೈಯಾಡಿಸಿ ತಣ್ಣಗಾಗಲು ಬಿಡಿ. ತಣಿದ ಮಿಶ್ರಣವನ್ನು ಒಂದು ಮಿಕ್ಸಿ ಜಾರಿಗೆ ಹಾಕಿಕೊಳ್ಳಿ, 2 ಟೇಬಲ್ ಸ್ಪೂನ್ ಹಾಲಿನ ಕನೆಯನ್ನು ಹಾಕಿ.

ನಂತರ 1 ಕಪ್ ಮಾವಿನಹಣ್ಣಿನ ಹೋಳುಗಳನ್ನು ಹಾಕಿ ಚೆನ್ನಾಗಿ ಮಿಕ್ಸಿ ಮಾಡಿಕೊಳ್ಳಿ. ನಂತರ ಒಂದು ಏರ್ ಟೈಟ್ ಕಂಟೈನರ್ ನಲ್ಲಿ ಈ ಮಿಶ್ರಣವನ್ನು ಹಾಕಿ 2 ಗಂಟೆಗಳ ಕಾಲ ಫ್ರೀಜರ್ ನಲ್ಲಿಡಿ.

ನಂತರ ಕೆಳಕ್ಕೆ ತೆಗೆದು ಮತ್ತೊಮ್ಮೆ ಮಿಕ್ಸಿ ಮಾಡಿಕೊಂಡು ಪುನಃ ಬಾಕ್ಸಿಗೆ ಹಾಕಿ ಅದರ ಮೇಲುಗಡೆಯೊಂದು ತೆಳುವಾದ ಕವರ್ ಇಟ್ಟು ಮುಚ್ಚಿ 8 ಗಂಟೆಗಳ ಕಾಲ ಫ್ರೀಜರ್ ನಲ್ಲಿಡಿ. ನಂತರ ತೆಗೆದು ರುಚಿಕರವಾದ ಐಸ್ ಕ್ರೀಂ ಸವಿಯಿರಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...