alex Certify ಮನೆಯಲ್ಲಿ ಭೀಕರ ಸ್ಫೋಟ; ಓರ್ವ ಬಾಲಕ ಸಾವು – ಮೂವರ ಸ್ಥಿತಿ ಗಂಭೀರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆಯಲ್ಲಿ ಭೀಕರ ಸ್ಫೋಟ; ಓರ್ವ ಬಾಲಕ ಸಾವು – ಮೂವರ ಸ್ಥಿತಿ ಗಂಭೀರ

ಪಾಟ್ನಾ: ಮನೆಯೊಂದರಲ್ಲಿ ಸಂಭವಿಸಿದ ಬೀಕರ ಸ್ಫೋಟದಲ್ಲಿ 17 ವರ್ಷದ ಬಾಲಕ ಸಾವನ್ನಪ್ಪಿರುವ ಘಟನೆ ಬಿಹಾರದ ಭಾಗಲ್ ಪುರ ಜಿಲ್ಲೆಯ ಬಾಬರ್ ಗಂಜ್ ಪ್ರದೇಶದಲ್ಲಿ ನಡೆದಿದೆ.

ಹುಸಾನಾಬಾದ್ ಖುರೇಷಿಯಲ್ಲಿನ ಎರಡು ಅಂತಸ್ಥಿನ ಕಟ್ಟಡದ ಮನೆಯಲ್ಲಿ ಈ ಸ್ಫೋಟ ಸಂಭವಿಸಿದ್ದು, 17 ವರ್ಷದ ಬಾಲಕ ಮೃತಪಟ್ಟಿದ್ದಾನೆ. ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಮನೆಯಲ್ಲಿದ್ದ ಸಿಲಿಂಡರ್ ಸ್ಫೋಟಗೊಂಡು ದುರಂತ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ. ಸ್ಫೋಟದ ತೀವ್ರತೆಗೆ ಮನೆಯ ಒಂದು ಭಾಗ ಸಂಪೂರ್ಣ ಕುಸಿದಿದೆ. ಸ್ಥಳಕ್ಕೆ ಧಾವಿಸಿರುವ ಪೊಲೀಸರು ತನಿಖೆ ನಡೆಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...