alex Certify ಮದುವೆ ದಿನದಂದು ಕಲ್ಯಾಣಮಂಟಪಕ್ಕಿಂತ ಮೊದಲು ಮತಗಟ್ಟೆಗೆ ತೆರಳಿ ಮಾದರಿಯಾದ ವರ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮದುವೆ ದಿನದಂದು ಕಲ್ಯಾಣಮಂಟಪಕ್ಕಿಂತ ಮೊದಲು ಮತಗಟ್ಟೆಗೆ ತೆರಳಿ ಮಾದರಿಯಾದ ವರ….!

ಉತ್ತರ ಪ್ರದೇಶದಲ್ಲಿ ವಿಧಾನಸಭಾ ಚುನಾವಣೆಯ ಮತದಾನ ನಡೆಯುತ್ತಿದೆ. ಮುಜಾಫರ್​ ನಗರದಲ್ಲಿ ಮತದಾರರೊಬ್ಬರು ವರನ ಧಿರಿಸಿನಲ್ಲಿ ಕಲ್ಯಾಣ ಮಂಟಪಕ್ಕೆ ತೆರಳುವ ಬದಲು ನೇರವಾಗಿ ಮತದಾನಕ್ಕೆ ಆಗಮಿಸುವ ಮೂಲಕ ಪ್ರಜ್ಞಾವಂತ ನಾಗರೀಕರೆನಿಸಿದ್ದಾರೆ.

ಅಂಕುರ್ ಬಾಲ್ಯನ್​ರ ಮದುವೆ ಮತದಾನದ ದಿನವೇ ನಿಗದಿಯಾಗಿತ್ತು. ಆದರೆ ಮದುವೆ ಕಾರ್ಯಕ್ರಮಕ್ಕೆಂದು ಮತದಾನವನ್ನು ತಪ್ಪಿಸಬಾರದೆಂದು ವರ ಅಂಕುರ್​ ಮೊದಲು ಮತಗಟ್ಟೆಗೆ ತೆರಳಿ ಮತವನ್ನು ಚಲಾಯಿಸಿ ಬಳಿಕ ಕಲ್ಯಾಣ ಮಂಟಪಕ್ಕೆ ತೆರಳಿದ್ದಾರೆ.

ಇನ್ನು ಮತಗಟ್ಟೆಯಲ್ಲಿ ಈ ವಿಚಾರವಾಗಿ ಮಾತನಾಡಿದ ವರ ಅಂಕುರ್​ ಬಾಲ್ಯನ್​, ಮೊದಲು ಮತದಾನ, ಬಳಿಕ ಪತ್ನಿ, ಇದಾದ ಬಳಿಕ ಮಿಕ್ಕ ಕೆಲಸ ಎಂದು ಮಾಧ್ಯಮಗಳ ಎದುರು ಹೇಳಿದ್ದಾರೆ.
ಉತ್ತರ ಪ್ರದೇಶದಲ್ಲಿ ಇಂದು ಬೆಳಗ್ಗೆ 7 ಗಂಟೆಯಿಂದ ಮೊದಲ ಹಂತದ ಮತದಾನ ಆರಂಭಗೊಂಡಿದೆ. ಇದು ಸಂಜೆ 6 ಗಂಟೆಯವರೆಗೂ ನಡೆಯಲಿದೆ. ಚುನಾವಣಾ ಆಯೋಗವು ನೀಡಿರುವ ಮಾಹಿತಿಯ ಪ್ರಕಾರ ಉತ್ತರ ಪ್ರದೇಶದಲ್ಲಿ ಬೆಳಗ್ಗೆ 11 ಗಂಟೆವರೆಗೆ 20.3 ಪ್ರತಿಶತ ಮತದಾನವಾಗಿತ್ತು.

— ANI UP/Uttarakhand (@ANINewsUP) February 10, 2022

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...