alex Certify ಮದುವೆಯಾದ್ಮೇಲೂ ಪುರುಷರು ಫ್ಲರ್ಟ್‌ ಮಾಡೋದ್ಯಾಕೆ…? ಅದಕ್ಕೆ ನಿಜವಾದ ಕಾರಣ ಏನು ಗೊತ್ತಾ…..? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮದುವೆಯಾದ್ಮೇಲೂ ಪುರುಷರು ಫ್ಲರ್ಟ್‌ ಮಾಡೋದ್ಯಾಕೆ…? ಅದಕ್ಕೆ ನಿಜವಾದ ಕಾರಣ ಏನು ಗೊತ್ತಾ…..?

ಮದುವೆಯಾದ್ಮೇಲೂ ಅದೆಷ್ಟೋ ಪುರುಷರು ಬೇರೆ ಮಹಿಳೆಯರ ಜೊತೆ ಸ್ನೇಹದಿಂದ ಇರಲು ಪ್ರಯತ್ನಿಸ್ತಾರೆ. ಸಿಲ್ಲಿ ಜೋಕ್‌ ಮಾಡುತ್ತ ಫ್ಲರ್ಟ್‌ ಮಾಡ್ತಿರ್ತಾರೆ. ಈ ಅಭ್ಯಾಸ ತಮಾಷೆಯಾಗಿ ಕಂಡರೂ ಪತ್ನಿಗೆ ಇದು ಖಂಡಿತವಾಗಿಯೂ ಇಷ್ಟವಾಗುವುದಿಲ್ಲ. ಪತಿ-ಪತ್ನಿ ನಡುವಣ ಸಂಬಂಧ ಹಾಳಾಗಲು ಕಾರಣವಾಗುತ್ತದೆ.

ಕೆಲವು ಗಂಡಸರು ಸ್ವಾಭಾವಿಕವಾಗಿ ಸ್ನೇಹಪರರಾಗಿರ್ತಾರೆ. ಅದನ್ನೇ ಫ್ಲರ್ಟಿಂಗ್‌ ಎನ್ನಲು ಸಾಧ್ಯವಿಲ್ಲ. ಇನ್ನು ಕೆಲವರಿಗೆ ಪತ್ನಿಯಿದ್ದರೂ ಬೇರೆ ಮಹಿಳೆಯರ ಕಡೆಗೆ ದೃಷ್ಟಿ ಹಾಯಿಸೋ ಚಟವಿರುತ್ತದೆ. ಅದ್ಯಾಕೆ ಅನ್ನೋದನ್ನು ನೋಡೋಣ.

ಹೆಚ್ಚಿನ ಪುರುಷರು ಮದುವೆಯಾದ್ರೂ ತಮಗೆ ಮೊದಲಿನಂತೆಯೇ ಡಿಮ್ಯಾಂಡ್‌ ಇರಬೇಕು ಅಂತಾ ಬಯಸ್ತಾರೆ. ತಾನಿನ್ನೂ ಆಕರ್ಷಕವಾಗಿ ಕಾಣಿಸುತ್ತಿದ್ದೇನೆ ಅನ್ನೋದನ್ನ ಖಚಿತಪಡಿಸಿಕೊಳ್ಳಲೂ ಫ್ಲರ್ಟ್‌ ಮಾಡ್ತಾರೆ. ಇದು ಅವರ ಆತ್ಮವಿಶ್ವಾಸ ಹೆಚ್ಚಿಸುತ್ತದೆ. ಅನೇಕ ಬಾರಿ ಪತ್ನಿ ತನ್ನ ಕಡೆ ಹೆಚ್ಚು ಗಮನಹರಿಸ್ತಿಲ್ಲ ಅನ್ನೋ ಭಾವನೆ ಬರುವುದುಂಟು. ಇದಕ್ಕೆ ಹಲವು ಕಾರಣಗಳಿವೆ.

ಮದುವೆ ನಂತರ ಮನೆ ನಿರ್ವಹಣೆಯಲ್ಲಿ ಮಹಿಳೆಯರು ನಿರತರಾಗುವುದರಿಂದ ಗಂಡನ ಕಡೆಗೆ ಗಮನ ಕಡಿಮೆಯಾಗಬಹುದು. ಕೆಲವು ಪುರುಷರು ತಮ್ಮ ಬದುಕು ಬಹಳ ರೋಮಾಂಚನಕಾರಿಯಾಗಿರಬೇಕೆಂದು ಬಯಸ್ತಾರೆ. ಇದಕ್ಕಾಗಿ ಫ್ಲರ್ಟ್‌ ಮಾಡಲು ಶುರು ಮಾಡ್ತಾರೆ. ಇದು ಬಹಳ ಅಪಾಯಕಾರಿ.

ಅನೇಕ ಪುರುಷರು ತಮ್ಮ ಹೆಂಡತಿಯ ಮುಂದೆ ಇತರ ಮಹಿಳೆಯರೊಂದಿಗೆ ಸ್ನೇಹದಿಂದಿರಲು ಪ್ರಯತ್ನಿಸ್ತಾರೆ. ಹೆಂಡತಿಯನ್ನು ಕೀಟಲೆ ಮಾಡಲು ಅಥವಾ ಅವಳಲ್ಲಿ ಅಸೂಯೆ ಹುಟ್ಟಿಸಲು ಈ ರೀತಿ ಮಾಡುತ್ತಿರಬಹುದು. ಆದ್ರೆ ಹೀಗೆ ಮಾಡುವುದರಿಂದ ನಿಮ್ಮ ಮದುವೆಯೇ ಮುರಿದು ಬೀಳಬಹುದು.

ಹೆಚ್ಚಿನ ಪುರುಷರು ಮದುವೆಯ ನಂತರ ಇತರ ಮಹಿಳೆಯೊಂದಿಗೆ ದೈಹಿಕ ಸಂಬಂಧವನ್ನು ಹೊಂದಲು ಬಯಸುತ್ತಾರೆ. ಇದೇ ಕಾರಣದಿಂದಾಗಿ ತಮ್ಮ ಜೀವನ ಸಂಗಾತಿಗೆ ಮೋಸ ಮಾಡುತ್ತಾರೆ. ಇದಕ್ಕಾಗಿಯೇ ಸುಳ್ಳು ಹೇಳುವ ಅಭ್ಯಾಸ ಮಾಡಿಕೊಳ್ತಾರೆ. ಅದೇನೇ ಆಗಿದ್ರೂ ಮದುವೆಯ ನಂತರ ಫ್ಲರ್ಟ್‌ ಮಾಡೋದು ಸರಿಯಲ್ಲ.

ಇದು ವೈವಾಹಿಕ ಜೀವನದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಅನೇಕ ಸಂದರ್ಭಗಳಲ್ಲಿ ಸಂಬಂಧವು ಮುರಿದುಹೋಗುತ್ತದೆ. ಮದುವೆಯ ನಂತರ ನಿಮ್ಮ ಬದುಕು ಚೆನ್ನಾಗಿ, ಸಂತೋಷವಾಗಿರಬೇಕೆಂದರೆ ಫ್ಲರ್ಟಿಂಗ್‌ ಮಾಡಬೇಡಿ, ಬೇರೆ ಮಹಿಳೆಯರನ್ನು ಕಣ್ಣೆತ್ತಿಯೂ ನೋಡಬೇಡಿ. ‌

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...