alex Certify ಮದುಮೇಹಿಗಳು ಮಾವು ಸೇವಿಸುವುದು ಒಳ್ಳೆಯದಾ……? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮದುಮೇಹಿಗಳು ಮಾವು ಸೇವಿಸುವುದು ಒಳ್ಳೆಯದಾ……?

ಈಗಾಗಲೇ ಮಾವಿನ ಹಣ್ಣು ಮಾರುಕಟ್ಟೆಗೆ ದಾಂಗುಡಿ ಇಟ್ಟಿದೆ. ಮಧುಮೇಹಿಗಳು ಮಾವಿನ ಹಣ್ಣನ್ನು ಸೇವಿಸಬಹುದೇ, ಇದರಿಂದಾಗುವ ಒಳಿತು ಕೆಡುಕುಗಳೇನು ತಿಳಿಯೋಣ ಬನ್ನಿ.

ಶುಗರ್ ಸಮಸ್ಯೆ ಇರುವವರು ಮಧ್ಯಾಹ್ನ ಊಟವಾದ ಬಳಿಕ ಮಾವಿನ ಹಣ್ಣು ಸೇವಿಸಬಾರದು. ಇದರಿಂದ ರಕ್ತದಲ್ಲಿ ಸಕ್ಕರೆಯಂಶ ಹೆಚ್ಚುವ ಸಾಧ್ಯತೆ ಅಧಿಕ. ಹೀಗಾಗಿ ಬ್ರೇಕ್ ಫಾಸ್ಟ್ ಗೆ ಸಮಯದಲ್ಲಿ ಅಂದರೆ ಬೆಳಗ್ಗೆ ಇದನ್ನು ಸೇವಿಸುವುದರಿಂದ ಪ್ರೊಟೀನ್ ಅಂಶಗಳನ್ನು ನಿಮ್ಮ ದೇಹಕ್ಕೆ ಸಿಗುತ್ತವೆ.

ಮಾವಿನ ಹಣ್ಣನ್ನು ನೇರವಾಗಿ ತಿನ್ನಿ. ಅಂದರೆ ಜ್ಯೂಸ್, ಮಿಲ್ಕ್ ಶೇಕ್, ರಸಾಯನ ರೂಪದಲ್ಲಿ ಸೇವಿಸದಿರಿ. ಇದಕ್ಕೆ ಬೆರೆಸುವ ಕೃತಕ ಸಿಹಿ ಅಂದರೆ ಬೆಲ್ಲ ಅಥವಾ ಸಕ್ಕರೆ ನಿಮ್ಮ ಮಧುಮೇಹ ಸಮಸ್ಯೆ ಉಲ್ಬಣವಾಗುವಂತೆ ಮಾಡಬಹುದು.

ಮಾವಿನ ಹಣ್ಣಿನಲ್ಲಿ ನಾರಿನಂಶವಿದ್ದು ಸಾಕಷ್ಟು ಆಂಟಿ ಆಕ್ಸಿಡೆಂಟ್ ಗುಣಗಳಿವೆ. ಇವು ಸಕ್ಕರೆ ಕಾಯಿಲೆಯನ್ನು ನಿಯಂತ್ರಣದಲ್ಲಿ ಇಡುತ್ತದೆ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಹೀಗಿದ್ದು ಇಷ್ಟ ಎಂಬ ಕಾರಣಕ್ಕೆ ವಿಪರೀತ ಸೇವಿಸುವುದು ಒಳ್ಳೆಯದಲ್ಲ. ವಾರದಲ್ಲಿ ಎರಡರಿಂದ ಮೂರು ಹಣ್ಣು ಸೇವಿಸಿದರೆ ಸಾಕು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...