alex Certify ಮತ್ತೊಂದು ಮಗುವನ್ನು ದತ್ತು ಪಡೆದ ಬಾಲಿವುಡ್​ ನಟಿ ಸುಶ್ಮಿತಾ ಸೇನ್​​​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮತ್ತೊಂದು ಮಗುವನ್ನು ದತ್ತು ಪಡೆದ ಬಾಲಿವುಡ್​ ನಟಿ ಸುಶ್ಮಿತಾ ಸೇನ್​​​..!

ಕಳೆದ ಅನೇಕ ವರ್ಷಗಳಿಂದ ಬಾಲಿವುಡ್​ ನಟಿ ಸುಶ್ಮಿತಾ ಸೇನ್​​ ತಮ್ಮ ಮಾನವೀಯ ಕಾರಣಗಳಿಂದಾಗಿ ಸ್ಪೂರ್ತಿದಾಯಕ ಜೀವನವನ್ನು ನಡೆಸುತ್ತಾ ಬಂದಿದ್ದಾರೆ. ಕೇವಲ 24 ವರ್ಷ ಪ್ರಾಯದವರಿದ್ದಾಗಲೇ ಹೆಣ್ಣು ಮಗಳು ರೇನಿಯನ್ನು ದತ್ತು ಪಡೆಯುವ ಮೂಲಕ ಮಾದರಿ ಎನಿಸಿದ್ದರು.

ಇನ್ನು ಮದುವೆಯೇ ಆಗದ ನಟಿ ಸುಶ್ಮಿತಾ ಸೇನ್ 2010ರಲ್ಲಿ ಎರಡನೇ ಮಗು ಅಲಿಸಾಹ್​ ರನ್ನು ದತ್ತು ಪಡೆದಿದ್ದಾರೆ. ಇದೀಗ ಸುಶ್ಮಿತಾ ಸೇನ್​ ಮೂರನೇ ಮಗುವನ್ನು ದತ್ತು ಪಡೆದಿದ್ದಾರೆ ಎನ್ನಲಾಗಿದೆ.

ಮೂರನೇ ಮಗುವಿನೊಂದಿಗೆ ಸುಶ್ಮಿತಾ ಸೇನ್​ ಇರುವ ಸಾಕಷ್ಟು ಫೋಟೋಗಳು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. ಈ ನಡುವೆ ಸುಶ್ಮಿತಾ ಸೇನ್​ರ ಈ ಮಾನವೀಯ ಕಾರ್ಯಕ್ಕೆ ನೆಟ್ಟಿಗರು ಪ್ರಶಂಸೆಯ ಸುರಿಮಳೆಯನ್ನೇ ಹರಿಸುತ್ತಿದ್ದಾರೆ.

ಕೆಲವರಂತೂ ನಿಮಗೆ ಎದ್ದು ನಿಂತು ಚಪ್ಪಾಳೆ ತಟ್ಟಬೇಕು ಎಂದು ಹೇಳಿದ್ದಾರೆ. ಇದೇ ರೀತಿ ಮಾದರಿಯಾಗಿ ಜೀವನ ನಡೆಸಿ ಎಂದು ಅನೇಕರು ನಟಿ ಸುಶ್ಮಿತಾ ಸೇನ್​ರಿಗೆ ಹಾರೈಸಿದ್ದಾರೆ.

ಮೂಲಗಳ ಪ್ರಕಾರ ನಟಿ ಸುಶ್ಮಿತಾ ಸೇನ್ ಗಂಡು ಮಗುವನ್ನು ದತ್ತು ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ. ಹಳದಿ ಬಣ್ಣದ ಟೀ ಶರ್ಟ್​ ಹಾಗೂ ಕೆಂಪು ಬಣ್ಣದ ಮಾಸ್ಕ್​ ಧರಿಸಿರುವ ಗಂಡು ಮಗು ಇದೀಗ ಕ್ಯಾಮರಾ ಕಣ್ಣುಗಳಲ್ಲಿ ಸೆರೆಯಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...