alex Certify ಮಕ್ಕಳು ಹಾಲು ಕುಡಿಯಲು ತಕರಾರು ಮಾಡ್ತಾರಾ…? ಈ ಉಪಾಯ ಮಾಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಕ್ಕಳು ಹಾಲು ಕುಡಿಯಲು ತಕರಾರು ಮಾಡ್ತಾರಾ…? ಈ ಉಪಾಯ ಮಾಡಿ

Essential Tips on How to Get Your Child to Drink Milk

ಮಕ್ಕಳ ತುಂಟತನವನ್ನು ಪಾಲಕರು ಹೇಗಾದ್ರೂ ಸಹಿಸಿಕೊಳ್ತಾರೆ. ಆದ್ರೆ ಮಕ್ಕಳಿಗೆ ಆಹಾರ ತಿನ್ನಿಸುವುದು ಅದ್ರಲ್ಲೂ ಹಾಲು ಕುಡಿಸುವುದು ಬಲುದೊಡ್ಡ ಕೆಲಸ. ಮಕ್ಕಳಿಗೆ ಹಾಲು ಇಷ್ಟವಾಗುವುದಿಲ್ಲ. ಹಾಲಿನ ಗ್ಲಾಸ್ ನೋಡುತ್ತಿದ್ದಂತೆ ಬಲುದೂರ ಓಡಲು ಶುರು ಮಾಡ್ತಾರೆ. ಮಕ್ಕಳಿಗೆ ಹಾಲು ಕುಡಿಸುವುದು ಒಂದು ಕಲೆ. ಈ ಕೆಲ ಉಪಾಯಗಳ ಮೂಲಕ ನೀವು ಮಕ್ಕಳು ಹಾಲು ಕುಡಿಯುವಂತೆ ಮಾಡಬಹುದು.

ಕೆಲ ಮಕ್ಕಳಿಗೆ ಹಾಲಿನ ವಾಸನೆ ಆಗುವುದಿಲ್ಲ. ಹಾಗಾಗಿ ಅವ್ರಿಗೆ ಹಾಲು ಕುಡಿಸುವುದು ಬಹಳ ಕಷ್ಟ. ಇಂಥ ಸಂದರ್ಭದಲ್ಲಿ ಹಾಲಿನ ಬದಲು ಹಾಲಿನ ಉತ್ಪನ್ನಗಳನ್ನು ಅವ್ರಿಗೆ ನೀಡಿ. ಹಾಲಿನ ಬದಲು ಖೀರ್ ಅಥವಾ ಬೇರೆ ಹಾಲಿನ ಉತ್ಪನ್ನವನ್ನು ಮಕ್ಕಳಿಗೆ ನೀಡಿ.

ಮಾರುಕಟ್ಟೆಯಲ್ಲಿ ಹಾಲಿಗೆ ಬೆರೆಸಿ ನೀಡುವ ಸಾಕಷ್ಟು ರೆಡಿಮೆಡ್ ಡ್ರಿಂಕ್ ಪುಡಿಗಳು ಸಿಗುತ್ತವೆ. ಅದನ್ನು ಹಾಲಿಗೆ ಹಾಕಿ ಕೊಡಿ. ಹೊರಗಿನದು ಬೇಡ ಎನ್ನುವವರು ಬಾದಾಮಿ, ಪಿಸ್ತಾ ಸೇರಿದಂತೆ ಒಣ ಹಣ್ಣುಗಳ ಪುಡಿ ಮಾಡಿ ಅದನ್ನು ಹಾಲಿಗೆ ಹಾಕಿ ನೀಡಿ. ಇದು ಹಾಲಿನ ವಾಸನೆಯನ್ನು ಕಡಿಮೆ ಮಾಡುತ್ತದೆ. ಜೊತೆಗೆ ಹಾಲಿನ ರುಚಿ ಹೆಚ್ಚಿಸುತ್ತದೆ.

ಹಾಲಿನ ಬದಲು ಮಿಲ್ಕ್ ಶೇಕ್ ಕೂಡ ನೀಡಬಹುದು.ಇದು ರುಚಿಕರ ಮಾತ್ರವಲ್ಲ. ಆರೋಗ್ಯಕರವೂ ಹೌದು. ಮಿಲ್ಕ್ ಶೇಕ್ ಮಾಡುವ ವೇಳೆ ಋತುವಿನಲ್ಲಿ ಬೆಳೆಯುವ ಹಣ್ಣುಗಳನ್ನು ಹಾಕಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...