alex Certify ಮಕ್ಕಳಿಗೆ ಕೊಡಿ ಈ ಸೂಪರ್‌ಫುಡ್ಸ್‌, ಕಂಪ್ಯೂಟರ್‌ಗಿಂತ ವೇಗವಾಗಿ ಕೆಲಸ ಮಾಡುತ್ತೆ ಮೆದುಳು…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಕ್ಕಳಿಗೆ ಕೊಡಿ ಈ ಸೂಪರ್‌ಫುಡ್ಸ್‌, ಕಂಪ್ಯೂಟರ್‌ಗಿಂತ ವೇಗವಾಗಿ ಕೆಲಸ ಮಾಡುತ್ತೆ ಮೆದುಳು…..!

ಮಕ್ಕಳು ಚುರುಕಾಗಿರಬೇಕೆಂದು ಹೆತ್ತವರು ಬಯಸುವುದು ಸಹಜ. ಇದಕ್ಕಾಗಿ ಮೆದುಳಿನ ಸರಿಯಾದ ಬೆಳವಣಿಗೆ ಅಗತ್ಯ. ಮೊದಲಿನಿಂದಲೂ ಮಗುವಿನ ಆಹಾರದ ಬಗ್ಗೆ ಕಾಳಜಿ ವಹಿಸಿದರೆ ಪೋಷಕರ ಬಯಕೆ ಖಂಡಿತವಾಗಿಯೂ ಈಡೇರುತ್ತದೆ. ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಸಮತೋಲಿತ ಆಹಾರ ಅಗತ್ಯ. ಸಾಮಾನ್ಯವಾಗಿ ಚಿಕ್ಕ ಮಕ್ಕಳು ಮಸಾಲೆ ಅಥವಾ ಸಿಹಿ ಪದಾರ್ಥಗಳನ್ನು ತಿನ್ನಲು ಇಷ್ಟಪಡುತ್ತಾರೆ.ಆದರೆ ಇವು ಆರೋಗ್ಯಕ್ಕೆ ಒಳ್ಳೆಯದಲ್ಲ. ಮಕ್ಕಳಿಗೆ ತಿನ್ನಿಸಬೇಕಾದ ಸೂಪರ್‌ಫುಡ್‌ಗಳು ಯಾವುವು ಅನ್ನೋದನ್ನು ನೋಡೋಣ.

ಹಾಲು ಮಕ್ಕಳ ಬೆಳವಣಿಗೆಗೆ ಬೇಕಾದ ಎಲ್ಲಾ ಪೋಷಕಾಂಶಗಳು ಹಾಲಿನಲ್ಲಿವೆ. ವಿಟಮಿನ್ ಡಿ, ರಂಜಕ, ಕ್ಯಾಲ್ಸಿಯಂ ಮತ್ತು ಇತರ ಅನೇಕ ಪೋಷಕಾಂಶಗಳು ಇದರಲ್ಲಿವೆ. ಹಾಗಾಗಿ ಮಕ್ಕಳಿಗೆ ಚೆನ್ನಾಗಿ ಹಾಲು ಕುಡಿಸಿ. ಇದರಿಂದ ಮೆದುಳು ಚುರುಕಾಗುತ್ತದೆ.

ಮೊಟ್ಟೆಮೊಟ್ಟೆ ಎಲ್ಲಾ ವಯೋಮಾನದವರಿಗೂ ಸೂಪರ್ ಫುಡ್ ಇದ್ದಂತೆ. ಮಗುವಿಗೆ ಒಂದು ವರ್ಷ ತುಂಬುತ್ತಿದ್ದಂತೆ ಮೊಟ್ಟೆ ತಿನ್ನಿಸಲು ಆರಂಭಿಸಿ. ಇದರಲ್ಲಿ ಪ್ರೊಟೀನ್, ವಿಟಮಿನ್-ಬಿ, ವಿಟಮಿನ್-ಡಿ, ಒಮೆಗಾ-3 ಕೊಬ್ಬಿನಾಮ್ಲ ಮತ್ತು ಫೋಲಿಕ್ ಆಮ್ಲ ಹೇರಳವಾಗಿದೆ. ಇದು ಮಕ್ಕಳ ಸರಿಯಾದ ಮಾನಸಿಕ ಬೆಳವಣಿಗೆಗೆ ಕಾರಣವಾಗುತ್ತದೆ.

ಡ್ರೈ ಫ್ರೂಟ್ಸ್‌-  ಗೋಡಂಬಿ, ಬಾದಾಮಿ, ಒಣ ಅಂಜೂರ ಮತ್ತು ವಾಲ್‌ನಟ್ ಮಕ್ಕಳಿಗೆ ತುಂಬಾ ಪ್ರಯೋಜನಕಾರಿ. ಅವು ಮಕ್ಕಳ  ಮನಸ್ಸನ್ನು ಚುರುಕುಗೊಳಿಸುವುದಲ್ಲದೆ ದೇಹಕ್ಕೆ ಸಾಕಷ್ಟು ಶಕ್ತಿಯನ್ನು ನೀಡುತ್ತವೆ. ಡ್ರೈ ಫ್ರೂಟ್‌ಗಳನ್ನು ಅಲ್ಪ ಪ್ರಮಾಣದಲ್ಲಿ ನೀಡುವುದು ಉತ್ತಮ.

ಹಸಿರು ತರಕಾರಿಗಳುಹಸಿರು ತರಕಾರಿಗಳು ಮಕ್ಕಳ ಆರೋಗ್ಯಕ್ಕೆ ಅತ್ಯಗತ್ಯ. ಇವು ದೇಹಕ್ಕೆ ಹಲವಾರು ರೀತಿಯ ಪೋಷಕಾಂಶಗಳನ್ನು ಒದಗಿಸುತ್ತವೆ. ಮಕ್ಕಳ ದೈನಂದಿನ ಆಹಾರದಲ್ಲಿ ನೀವು ಪಾಲಕ್‌ ಸೊಪ್ಪು, ಕೋಸುಗಡ್ಡೆ, ಎಲೆಕೋಸು ಮುಂತಾದವುಗಳನ್ನು ಸೇರಿಸಬೇಕು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...