alex Certify ಮಕ್ಕಳಿಗೆ ಕೇಶಮುಂಡನ ಮಾಡುವ ಮುನ್ನ ಈ ಎಚ್ಚರ ವಹಿಸದಿದ್ರೆ ಆಗಬಹುದು ಗಂಭೀರ ಸಮಸ್ಯೆ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಕ್ಕಳಿಗೆ ಕೇಶಮುಂಡನ ಮಾಡುವ ಮುನ್ನ ಈ ಎಚ್ಚರ ವಹಿಸದಿದ್ರೆ ಆಗಬಹುದು ಗಂಭೀರ ಸಮಸ್ಯೆ….!

ಮಗುವಿನ ಜನನದ ನಂತರ ಕ್ಷೌರ ಮಾಡುವುದು ವಾಡಿಕೆ. ಗಂಡು-ಹೆಣ್ಣೆಂಬ ಬೇಧವಿಲ್ಲದೆ ಮಕ್ಕಳಿಗೆ ಕೇಶಮುಂಡನ ಮಾಡಲಾಗುತ್ತದೆ. ಅನೇಕ ಮಕ್ಕಳು ಬಾಲ್ಯದಲ್ಲಿ ಕೂದಲು ದಟ್ಟವಾಗಿರುವುದಿಲ್ಲ. ಕೂದಲು ದಟ್ಟವಾಗಿ ಬೆಳೆಯಲಿ ಎಂಬ ಕಾರಣಕ್ಕೂ ಕೇಶಮುಂಡನ ಮಾಡಲಾಗುತ್ತದೆ. ಯಾಕೆಂದರೆ ಕೂದಲಿನ ಬೆಳವಣಿಗೆಗೆ ಶೇವಿಂಗ್ ಅತ್ಯುತ್ತಮವೆಂದು ಪರಿಗಣಿಸಲಾಗುತ್ತದೆ.

ಕೂದಲನ್ನು ಶೇವಿಂಗ್ ಮಾಡುವುದರಿಂದ ಯಾವುದೇ ಹಾನಿ ಇಲ್ಲ. ಆದರೆ ಮಕ್ಕಳಿಗೆ ಅದನ್ನು ಮಾಡುವ ಮೊದಲು ಸ್ವಲ್ಪ ಕಾಳಜಿಯನ್ನು ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಸಮಸ್ಯೆಯಾಗಬಹುದು. ಮಗುವಿನ ಕ್ಷೌರದ ಬಗ್ಗೆ ಪೋಷಕರಿಗೆ ಉತ್ಸಾಹ ಸಹಜ. ಅದಕ್ಕಾಗಿಯೇ ಒಂದು ದಿನವನ್ನು ಮೀಸಲಿಡುತ್ತಾರೆ. ಹಾಗಂತ ಯಾವುದೇ ಸಂದರ್ಭದಲ್ಲೂ ಆ ದಿನ ಕೂದಲು ತೆಗೆಸಿಯೇಬಿಡಬೇಕೆಂಬ ಹಠ ತೊಡಬೇಡಿ. ಏಕೆಂದರೆ ಮಗುವಿಗೆ ಆ ಸಮಯದಲ್ಲಿ ಶೀತ-ಕೆಮ್ಮು ಅಥವಾ ಜ್ವರ ಇದ್ದರೆ ಕೇಶಮುಂಡನ ಮಾಡಬೇಡಿ.

ಮಗುವಿನ ಕೂದಲನ್ನು ಕ್ಷೌರ ಮಾಡಲು ವೃತ್ತಿಪರರನ್ನೇ ಆಯ್ದುಕೊಳ್ಳಿ. ಅನುಭವ ಇಲ್ಲದೇ ಇರುವವರು ಮಾಡಿದರೆ ಕೂದಲಿನ ಜೊತೆಗೆ ಚರ್ಮವನ್ನೂ ಕತ್ತರಿಸಿಬಿಡುವ ಸಾಧ್ಯತೆ ಇರುತ್ತದೆ. ಕೂದಲು ತೆಗೆಯಲು  ಬಳಸುತ್ತಿರುವ ಬ್ಲೇಡ್ ಹೊಸದು ಮತ್ತು ಉತ್ತಮ ಗುಣಮಟ್ಟದ್ದಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಖಚಿತಪಡಿಸಿಕೊಳ್ಳಿ. ಹಳೆ ಬ್ಲೇಡ್‌ ಬಳಸಿದ್ರೆ ಸೋಂಕಿಗೆ ತುತ್ತಾಗುವ ಅಪಾಯವಿರುತ್ತದೆ.

ಮಗುವಿನ ಕೂದಲನ್ನು ತೆಗೆಯುವವರ ಕೈಗಳು ಸ್ವಚ್ಛವಾಗಿರಬೇಕು. ಆತನಿಗೆ ಯಾವುದೇ ಚರ್ಮದ ಕಾಯಿಲೆ ಇರಬಾರದು ಮತ್ತು ಉಗುರುಗಳನ್ನು ಕತ್ತರಿಸಿಕೊಂಡಿರಬೇಕು. ಇವನ್ನೆಲ್ಲ ಪೋಷಕರು ಗಮನಿಸುವುದು ಉತ್ತಮ. ಕೂದಲು ತೆಗೆಯುವ ಮೊದಲು ಮಕ್ಕಳಿಗೆ ಆಹಾರವನ್ನು ನೀಡಿ ಅಥವಾ ಹಾಲು ಕುಡಿಸಿ. ಯಾಕೆಂದರೆ ಕೇಶಮುಂಡನದ ಸಮಯದಲ್ಲಿ ಮಗು ಹಸಿವಿನಿಂದ ಅಳಲು ಪ್ರಾರಂಭಿಸುತ್ತದೆ.

ಕೂದಲನ್ನು ಬೋಳಿಸಿದ ನಂತರ, ಮಗುವಿಗೆ ಶುದ್ಧ ನೀರಿನಿಂದ ಸ್ನಾನ ಮಾಡಿಸಿ. ಈ ರೀತಿ ಮಾಡುವುದರಿಂದ ದೇಹದಲ್ಲಿ ಅಂಟಿಕೊಂಡಿರುವ ಕೂದಲು ಸಂಪೂರ್ಣವಾಗಿ ಸ್ವಚ್ಛಗೊಳಿಸಲ್ಪಡುತ್ತದೆ. ಮಕ್ಕಳ ನೆತ್ತಿ ಸೂಕ್ಷ್ಮವಾಗಿರುತ್ತದೆ, ಆದ್ದರಿಂದ ತಲೆ ಬೋಳಿಸಿದ ಬಳಿಕ ಶಾಂಪೂ ಬಳಸಬೇಡಿ, ಬದಲಿಗೆ ಹಾಲನ್ನು ಅನ್ವಯಿಸಿ.

ಕೂದಲನ್ನು ತೆಗೆದ ತಕ್ಷಣ ಮಗುವಿನ ತಲೆಗೆ ಎಣ್ಣೆಯಿಂದ ಮಸಾಜ್ ಮಾಡಬೇಡಿ. ಸ್ವಲ್ಪ ಸಮಯ ಬಿಟ್ಟು ಎಣ್ಣೆ ಹನಿಸುವುದು ಸೂಕ್ತ. ಕೂದಲು ತೆಗೆದ ಬಳಿಕ ಮಗುವಿನ ನೆತ್ತಿಯಲ್ಲಿ ಚರ್ಮದ ಸಮಸ್ಯೆಗಳು ಕಾಣಿಸಿಕೊಳ್ಳಲು ಪ್ರಾರಂಭಿಸಿದರೆ, ತಡಮಾಡದೆ ಉತ್ತಮ ಚರ್ಮರೋಗ ವೈದ್ಯರಿಗೆ ತೋರಿಸಿ ಮತ್ತು ಅಗತ್ಯ ಪರೀಕ್ಷೆಗಳನ್ನು ಮಾಡಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...