alex Certify ಭೀಕರ ಸರಣಿ ಅಪಘಾತ; ಹಲವರ ಸ್ಥಿತಿ ಗಂಭೀರ; ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಟ್ರಾಫಿಕ್ ಜಾಮ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭೀಕರ ಸರಣಿ ಅಪಘಾತ; ಹಲವರ ಸ್ಥಿತಿ ಗಂಭೀರ; ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಟ್ರಾಫಿಕ್ ಜಾಮ್

ಬೆಂಗಳೂರು: ಬ್ರೇಕ್ ಫೇಲ್ ಆದ ಕಂಟೇನರ್ ಹಲವು ವಾಹನಗಳಿಗೆ ಡಿಕ್ಕಿ ಹೊಡೆದು ಸಂಭವಿಸಿದ ಭೀಕರ ಸರಣಿ ಅಪಘಾತದಲ್ಲಿ ಅನೇಕ ವಾಹನ ಸವಾರರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನೆಲಮಂಗಲ ರಸ್ತೆಯಲ್ಲಿ ನಡೆದಿದೆ.

ನೆಲಮಂಗಲ ಸಮೀಪ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಈ ಅಪಘಾತ ಸಂಭವಿಸಿದೆ. ಬೆಂಗಳೂರಿನಿಂದ ತುಮಕೂರು ಕಡೆ ತೆರಳುತ್ತಿದ್ದ ಸರಕು ತುಂಬಿದ್ದ ಕಂಟೇನರ್ ಬ್ರೇಕ್ ಫೇಲ್ ಆಗಿ ಈ ದುರಂತ ಸಂಭವಿಸಿದೆ. 3 ಕಂಟೇನರ್, ಗೂಡ್ಸ್ ವಾಹನ, 3 ಕಾರು, 2 ಬೈಕ್ ಗಳ ನಡುವೆ ಡಿಕ್ಕಿ ಸಂಭವಿಸಿದ್ದು, ರಸ್ತೆಬದಿ ಸೌತೆಕಾಯಿ ಮಾರುತ್ತಿದ್ದ ತಳ್ಳುವ ಗಾಡಿಗೆ ಗುದ್ದಿದೆ.

ಅಪಘಾತದ ರಭಸಕ್ಕೆ ಗೂಡ್ಸ್ ವಾಹನ ಚಾಲಕ ಕೆಳಗೆಬಿದ್ದು ಗಾಯಗೊಂಡಿದ್ದಾನೆ. ಇತರ ವಾಹನ ಸವಾರರು ಕೂಡ ಗಾಯಗೊಂಡಿದ್ದಾರೆ. ಸರಣಿ ಅಪಘಾತದಿಂದಾಗಿ ನೆಲಮಂಗಲ ರಸ್ತೆಯಲ್ಲಿ ಸಂಪೂರ್ಣ ಟ್ರಾಫಿಕ್ ಜಾಮ್ ಸಂಭವಿಸಿದ್ದು, ಸುಗಮ ಸಂಚಾರಕ್ಕೆ ಪೊಲಿಸರು ಹರಸಾಹಸಪಡುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...