alex Certify ಭಾರಿ ಬೆಲೆಗೆ ಮಾರಾಟವಾಯ್ತು ‘ಸೂರ್ಯ’ ಹೆಸರಿನ ಈ ಎತ್ತು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭಾರಿ ಬೆಲೆಗೆ ಮಾರಾಟವಾಯ್ತು ‘ಸೂರ್ಯ’ ಹೆಸರಿನ ಈ ಎತ್ತು…!

ಅತ್ಯಂತ ಮುತುವರ್ಜಿಯಿಂದ ಸಾಕುವ ಜಾನುವಾರುಗಳಿಗೆ ಮಾರುಕಟ್ಟೆಯಲ್ಲಿ ಅಪಾರ ಬೆಲೆ ಸಿಗುತ್ತದೆ. ಅದರಲ್ಲೂ ಕೃಷಿ ಕಾರ್ಯಗಳಿಗೆ ಸಹಾಯಕವಾಗುವ ಎತ್ತುಗಳಿಗೆ ಬಲು ಬೇಡಿಕೆಯಿದೆ.

ಇದೀಗ ‘ಸೂರ್ಯ’ ಹೆಸರಿನ ಒಂದು ಎತ್ತು ಭಾರೀ ಬೆಲೆಗೆ ಮಾರಾಟವಾಗುವ ಮೂಲಕ ಎಲ್ಲರ ಗಮನ ಸೆಳೆದಿದೆ. ಈ ಎತ್ತು ಬರೋಬ್ಬರಿ 11.50 ಲಕ್ಷ ರೂಪಾಯಿಗಳಿಗೆ ಮಾರಾಟವಾಗಿದೆ.

ಬಾಗಲಕೋಟೆ ಜಿಲ್ಲೆಯ ರಬಕವಿ – ಬನಹಟ್ಟಿ ತಾಲೂಕಿನ ಚಿಮ್ಮಡ ಗ್ರಾಮದ ಶಿವಲಿಂಗಪ್ಪ, ಮಾಯಪ್ಪ ಎಂಬ ಸಹೋದರರು ಈ ಎತ್ತನ್ನು ಸಾಕಿದ್ದು, ಇದೀಗ ಅದನ್ನು ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಇಟ್ನಳ್ಳಿ ಗ್ರಾಮದ ಸದಾಶಿವ ಡಂಗೆ ಖರೀದಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...