alex Certify ಭಾರತದಲ್ಲಿ ಹೆಚ್ಚುತ್ತಿರುವ ಬೊಜ್ಜಿನ ಸಮಸ್ಯೆಗೂ 200 ವರ್ಷಗಳ ಬ್ರಿಟಿಷ್ ಆಳ್ವಿಕೆಗೂ ಇದೆ ಸಂಬಂಧ; ಸಂಶೋಧನೆಯಲ್ಲಿ ಕುತೂಹಲಕಾರಿ ಸಂಗತಿ ಬಹಿರಂಗ…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭಾರತದಲ್ಲಿ ಹೆಚ್ಚುತ್ತಿರುವ ಬೊಜ್ಜಿನ ಸಮಸ್ಯೆಗೂ 200 ವರ್ಷಗಳ ಬ್ರಿಟಿಷ್ ಆಳ್ವಿಕೆಗೂ ಇದೆ ಸಂಬಂಧ; ಸಂಶೋಧನೆಯಲ್ಲಿ ಕುತೂಹಲಕಾರಿ ಸಂಗತಿ ಬಹಿರಂಗ…..!

ಭಾರತದಲ್ಲಿ ಹೆಚ್ಚಿನ ಜನರು ಬೊಜ್ಜಿನ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಅತಿಯಾದ ಬೊಜ್ಜಿನಿಂದಾಗಿ ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಹೃದ್ರೋಗ ಕೂಡ ಹೆಚ್ಚಾಗುತ್ತಿದೆ. ಜನರು ತೂಕವನ್ನು ಕಡಿಮೆ ಮಾಡಲು ಡಯಟ್‌, ಜಿಮ್‌, ಯೋಗಾಸನ ಹೀಗೆ ನಾನಾ ಕಸರತ್ತುಗಳನ್ನು ಮಾಡುತ್ತಿದ್ದಾರೆ. ಅನಾರೋಗ್ಯಕರ ಆಹಾರ ಮತ್ತು ಅನಾರೋಗ್ಯಕರ ಜೀವನಶೈಲಿ ಬೊಜ್ಜಿನ ಸಮಸ್ಯೆಗೆ ಮುಖ್ಯ ಕಾರಣವೆಂದು ಪರಿಗಣಿಸಲಾಗಿದೆ. ಆದ್ರೀಗ ಮತ್ತೊಂದು ಅಚ್ಚರಿಯ ಸಂಗತಿ ಈಗ ಬೆಳಕಿಗೆ ಬಂದಿದೆ.

ಸ್ಥೂಲಕಾಯದ ಮೂಲ 200 ವರ್ಷಗಳ ಗುಲಾಮಗಿರಿ‘!

ಭಾರತದಲ್ಲಿ ಸ್ಥೂಲಕಾಯತೆ ಹೆಚ್ಚಲು ಸುಮಾರು 200 ವರ್ಷಗಳಷ್ಟು ಹಳೆಯದಾದ ಬ್ರಿಟಿಷ್ ಆಡಳಿತ ಕಾರಣ ಎಂದು ಸಂಶೋಧನೆಯೊಂದು ಬಹಿರಂಗಪಡಿಸಿದೆ. ಬ್ರಿಟಿಷರು ಭಾರತವನ್ನು 1757 ರಿಂದ 1947 ರವರೆಗೆ ಆಳಿದ್ದರು. ಈ ಅವಧಿಯಲ್ಲಿ, ಭಾರತದಲ್ಲಿ ಹಲವಾರು ಬರ, ಮತ್ತು ಪ್ರವಾಹದ ಸಮಸ್ಯೆ ತಲೆದೋರಿತ್ತು.

ಇತಿಹಾಸಕಾರರ ಪ್ರಕಾರ ಬ್ರಿಟಿಷ್ ಆಡಳಿತಗಾರರ ತಪ್ಪು ನೀತಿಗಳಿಂದ, ಭಾರತ, ಪಾಕಿಸ್ತಾನ ಮತ್ತು ಬಾಂಗ್ಲಾದೇಶಗಳು ಒಟ್ಟಾಗಿ 25 ದೊಡ್ಡ ಕ್ಷಾಮಗಳನ್ನು ಅನುಭವಿಸಿದವು. ಅದರಲ್ಲಿ 6 ಕೋಟಿಗೂ ಹೆಚ್ಚು ಜನರು ಪ್ರಾಣ ಕಳೆದುಕೊಂಡರು. ಆಶ್ಚರ್ಯಕರ ಸಂಗತಿಯೆಂದರೆ ಬ್ರಿಟಿಷರು ಬರುವ 2000 ವರ್ಷಗಳ ಮೊದಲು ಪಾಕಿಸ್ತಾನ, ಬಾಂಗ್ಲಾದೇಶ, ಶ್ರೀಲಂಕಾ ಮತ್ತು ಮ್ಯಾನ್ಮಾರ್ ಸೇರಿದಂತೆ ಭಾರತ ಉಪಖಂಡದಲ್ಲಿ 17 ಬಾರಿ ಬರಗಾಲ ಕಾಂಣಿಸಿಕೊಂಡಿತ್ತು.

ಎಪಿಜೆನೆಟಿಕ್ಸ್‌ ಸಂಶೋಧನೆ…

ಎಪಿಜೆನೆಟಿಕ್ಸ್ ಎನ್ನುವುದು ನಮ್ಮ ಡಿಎನ್‌ಎ ಮೇಲೆ ನಮ್ಮ ನಡವಳಿಕೆ ಮತ್ತು ಪರಿಸರದ ಪರಿಣಾಮವನ್ನು ಬಹಿರಂಗಪಡಿಸುವ ಅಧ್ಯಯನ.  ಎಪಿಜೆನೆಟಿಕ್ಸ್ ವಿಜ್ಞಾನಿಗಳ ಪ್ರಕಾರ 200 ವರ್ಷಗಳ ನಿರಂತರ ಕ್ಷಾಮದಿಂದಾಗಿ, ದಕ್ಷಿಣ ಏಷ್ಯಾದ ಜನರ ಡಿಎನ್‌ಎಯಲ್ಲಿ ಅನೇಕ ಬದಲಾವಣೆಗಳು ಸಂಭವಿಸಿದವು. ಈ ಕಾರಣದಿಂದಾಗಿ, ಅನೇಕ ತಲೆಮಾರುಗಳಿಂದ ಭಾರತೀಯರ ದೇಹವು ಹಸಿವಿಗೆ ಹೊಂದಿಕೊಳ್ಳುತ್ತದೆ. ಈ ಕಾರಣದಿಂದಾಗಿ, ಬೊಜ್ಜು, ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಹೃದ್ರೋಗದ ಅಪಾಯವು ಹೆಚ್ಚಾಗುತ್ತದೆ.

ಬೊಜ್ಜು ಮತ್ತು ಮಧುಮೇಹದ ಅಪಾಯ

ಅಮೆರಿಕದ ಮರ್ಸಿ ಹೆಲ್ತ್-ಸ್ಪ್ರಿಂಗ್‌ಫೀಲ್ಡ್‌ನ ಪ್ರಾದೇಶಿಕ ವೈದ್ಯಕೀಯ ಕೇಂದ್ರದ ಡಾ. ಮುಬೀನ್ ಸೈಯದ್ ಕೂಡ ಈ ಬಗ್ಗೆ ತಮ್ಮ ಅಧ್ಯಯನದಲ್ಲಿ ಉಲ್ಲೇಖ ಮಾಡಿದ್ದಾರೆ. ದಕ್ಷಿಣ ಏಷ್ಯನ್ನರು ಕಾರ್ಡಿಯೋಮೆಟಬಾಲಿಕ್ ಕಾಯಿಲೆಗೆ ಒಳಗಾಗುವ ಸಾಧ್ಯತೆಯು ಹಸಿವಿನ ಅಳವಡಿಕೆಯ ಪರಿಣಾಮವಾಗಿ ವಸಾಹತುಶಾಹಿ ಬರಗಾಲದ ಸಮಯದಲ್ಲಿ ಉಲ್ಬಣಗೊಂಡಿತು” ಎಂದು ಹೇಳಿದ್ದಾರೆ. ಕ್ಷಾಮದಿಂದಾಗಿ ಮಧುಮೇಹ ಮತ್ತು ಹೈಪರ್ಗ್ಲೈಸೀಮಿಯಾ ಅಪಾಯವು ಮಕ್ಕಳಲ್ಲಿ ದ್ವಿಗುಣಗೊಳ್ಳುತ್ತದೆ.

ಹೆಚ್ಚಿದ ಇನ್ಸುಲಿನ್ ಸಂವೇದನೆ

ಡಾ. ಮುಬೀನ್ ಸೈಯದ್ ಪ್ರಕಾರ, ಏಷ್ಯಾದ ಜನರ ದೇಹವು ಇನ್ಸುಲಿನ್ ನಿರೋಧಕವಾಗಿದೆ. ಈ ಕಾರಣದಿಂದಾಗಿ ಸ್ನಾಯುಗಳು, ಕೊಬ್ಬು ಮತ್ತು ಯಕೃತ್ತಿನ ಜೀವಕೋಶಗಳು ರಕ್ತದಿಂದ ಗ್ಲೂಕೋಸ್ ಅನ್ನು ಹೀರಿಕೊಳ್ಳಲು ಸಾಧ್ಯವಾಗುವುದಿಲ್ಲ ಮತ್ತು ಅದನ್ನು ಶಕ್ತಿಗಾಗಿ ಬಳಸಲಾಗುವುದಿಲ್ಲ. ಈ ವೈದ್ಯಕೀಯ ಸ್ಥಿತಿಯು ಮಧುಮೇಹ ಮತ್ತು ಸ್ಥೂಲಕಾಯತೆಗೆ ಪ್ರಮುಖ ಕಾರಣವಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...