alex Certify ಭಾರತಕ್ಕೂ ಬರ್ತಿರೋ ʼಗೂಗಲ್‌ ಪ್ಲೇ ಪಾಸ್‌ʼ ನಲ್ಲಿದೆ ಇಷ್ಟೆಲ್ಲಾ ವಿಶೇಷತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭಾರತಕ್ಕೂ ಬರ್ತಿರೋ ʼಗೂಗಲ್‌ ಪ್ಲೇ ಪಾಸ್‌ʼ ನಲ್ಲಿದೆ ಇಷ್ಟೆಲ್ಲಾ ವಿಶೇಷತೆ

ಈಗಾಗ್ಲೇ ಹಲವಾರು ದೇಶಗಳಲ್ಲಿ ಲಭ್ಯವಿರೋ ಗೂಗಲ್‌ ಪ್ಲೇ ಪಾಸ್‌ ಭಾರತಕ್ಕೂ ಬರ್ತಿದೆ. ವಿಶೇಷವಾದ ಅಪ್ಲಿಕೇಶನ್‌ಗಳು, ಜಾಹೀರಾತು ಮುಕ್ತ ಗೇಮ್ಸ್‌, ಇನ್‌ ಆಪ್‌ ಪರ್ಚೇಸ್‌, ಮುಂಗಡ ಪಾವತಿಗೆ ಗೂಗಲ್‌ ಪ್ಲೇ ಪಾಸ್‌ ಅವಕಾಶ ಕಲ್ಪಿಸಲಿದೆ. ಈ ವಾರಾಂತ್ಯದಲ್ಲಿ ಭಾರತದ ಆಂಡ್ರಾಯ್ಡ್‌ ಬಳಕೆದಾರರಿಗೆ ಗೂಗಲ್‌ ಪ್ಲೇ ಪಾಸ್‌ ಲಭ್ಯವಾಗಲಿದೆ.

ಗ್ರಾಹಕರು ಒಂದು ತಿಂಗಳು ಫ್ರೀಯಾಗಿ ಇದನ್ನು ಬಳಸಿಕೊಳ್ಳಬಹುದು. ನಂತರ ತಿಂಗಳಿಗೆ 99 ರೂಪಾಯಿ ಅಥವಾ ವಾರ್ಷಿಕ 899 ರೂಪಾಯಿ ಕೊಟ್ಟು ಚಂದಾದಾರರಾಗಬಹುದು. 109 ರೂಪಾಯಿಗೆ ಒಂದು ತಿಂಗಳ ಪ್ರಿಪೇಯ್ಡ್‌ ಪ್ಲಾನ್‌ ಕೂಡ ಇದೆ. ಗೂಗಲ್‌ ಫ್ಯಾಮಿಲಿ ಗ್ರೂಪ್‌ ಅನ್ನೋ ಸ್ಕೀಮ್‌ ಒಂದನ್ನು ಸಹ ಪರಿಚಯಿಸಲಾಗಿದೆ. ಇದರಲ್ಲಿ ಗೂಗಲ್‌ ಪ್ಲೇ ಪಾಸ್‌ ಸಬ್‌ ಸ್ಕ್ರಿಪ್ಷನ್‌ ಅನ್ನು ಐವರೊಂದಿಗೆ ಹಂಚಿಕೊಳ್ಳಬಹುದು.

ಈ ಪಾಸ್‌ ಮೂಲಕ ಅತ್ಯುತ್ತಮ ಗುಣಮಟ್ಟದ ಗೇಮ್‌ ಹಾಗೂ ಆಪ್‌ ಗಳನ್ನು ಗೂಗಲ್‌ ಗ್ರಾಹಕರಿಗೆ ನೀಡ್ತಾ ಇದೆ. ಭಾರತದ ಸೇರಿದಂತೆ 59 ದೇಶಗಳ ಡೆವಲಪರ್‌ ಗಳು ಅಭಿವೃದ್ಧಿಪಡಿಸಿರುವ ಸಾವಿರಕ್ಕೂ ಹೆಚ್ಚು ಗೇಮ್‌, ಪಝಲ್‌ ಸೇರಿದಂತೆ ಹಲವು ಆಪ್ಷನ್ಸ್‌ ಇದರಲ್ಲಿದೆ. ಆಂಡ್ರಾಯ್ಡ್‌ ಫೋನ್‌ನಲ್ಲಿ ನಿಮ್ಮ ಗೂಗಲ್‌ ಪ್ಲೇ ಸ್ಟೋರ್‌ ಅಪ್ಲಿಕೇಶನ್ ಅನ್ನು ನವೀಕರಿಸಿಕೊಳ್ಳಿ. ನಂತರ ಪ್ಲೇ ಸ್ಟೋರ್ ಅಪ್ಲಿಕೇಶನ್ ಅನ್ನು ತೆರೆಯಿರಿ. ಮೇಲಿನ ಬಲಭಾಗದಲ್ಲಿರುವ ಪ್ರೊಫೈಲ್ ಐಕಾನ್ ಅನ್ನು ಒತ್ತುವ ಮೂಲಕ ‘ಪ್ಲೇ ಪಾಸ್’ ಪಡೆಯಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...