alex Certify ಭಾರತಕ್ಕೂ ಇದೆ ವಿಶ್ವದ ಅತ್ಯಂತ ದುಬಾರಿ ಹಸುವಿನೊಂದಿಗೆ ವಿಶೇಷ ನಂಟು; ದಂಗಾಗಿಸುತ್ತೆ ಈ ಗೋವಿನ ಬೆಲೆ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭಾರತಕ್ಕೂ ಇದೆ ವಿಶ್ವದ ಅತ್ಯಂತ ದುಬಾರಿ ಹಸುವಿನೊಂದಿಗೆ ವಿಶೇಷ ನಂಟು; ದಂಗಾಗಿಸುತ್ತೆ ಈ ಗೋವಿನ ಬೆಲೆ….!

ಜಗತ್ತಿನಲ್ಲಿ ಹಲವಾರು ಬಗೆಯ ಸಾಕುಪ್ರಾಣಿಗಳಿವೆ, ಅವುಗಳ ಬಗ್ಗೆ ವಿಭಿನ್ನ ನಂಬಿಕೆಗಳಿವೆ. ಕೆಲವನ್ನು ದೇವತೆಗಳಿಗೂ ಹೋಲಿಸುತ್ತಾರೆ. ಭಾರತದಲ್ಲಿ ಗೋವಿಗೆ ದೇವರ ಸ್ಥಾನಮಾನ ನೀಡಲಾಗಿದೆ. ಜನರು ಹಸುಗಳನ್ನು ಗೌರವಿಸುತ್ತಾರೆ ಮತ್ತು ಪೂಜಿಸುತ್ತಾರೆ. ಜಗತ್ತಿನಲ್ಲಿ ಅನೇಕ ತಳಿಯ ಹಸುಗಳನ್ನು ನಾವು ಕಾಣಬಹುದು. ಇವುಗಳಲ್ಲೇ ಅತ್ಯಂತ ದುಬಾರಿ ಹಸುವೊಂದಿದೆ, ಅದರ ಬೆಲೆ ಅಚ್ಚರಿ ಹುಟ್ಟಿಸುವಂತಿದೆ.

ವಿಶ್ವದ ಅತ್ಯಂತ ದುಬಾರಿ ಹಸು ಇರೋದು ಬ್ರೆಜಿಲ್‌ನಲ್ಲಿ. ಈ ಹಸುವಿನ ಬೆಲೆ ಪ್ರಪಂಚದ ಇತರ ತಳಿಗಳ ಹಸುಗಳಿಗಿಂತ ಹೆಚ್ಚು. ಈ ಹಣದಲ್ಲಿ ನೀವು ಐಷಾರಾಮಿ ಕಾರು, ಬಂಗಲೆ ಮತ್ತಿತರ ಅನೇಕ ವಸ್ತುಗಳನ್ನು ಖರೀದಿಸಬಹುದು. ಈ ಹಸುವಿಗೆ ಭಾರತದೊಂದಿಗೆ ವಿಶೇಷ ಸಂಬಂಧವಿದೆ. ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ಹೆಸರನ್ನು ಈ ತಳಿಗೆ ಇಡಲಾಗಿದೆ. ಇಲ್ಲಿಂದ ಈ ತಳಿಯನ್ನು ಬ್ರೆಜಿಲ್‌ಗೆ ಕಳುಹಿಸಲಾಯಿತು. ನೆಲ್ಲೂರು ತಳಿಯ ಈ ಹಸುವಿಗೆ ನಾಲ್ಕೂವರೆ ವರ್ಷ.

ವಯಾಟಿನಾ-19 ಎಫ್ ಐ ವಿ ಮಾರಾ ಎಮೋವಿಸ್ ತಳಿಯ ನಾಲ್ಕೂವರೆ ವರ್ಷದ ಹಸು ವಿಶ್ವದ ಅತ್ಯಂತ ದುಬಾರಿ ಗೋವು ಎನಿಸಿಕೊಂಡಿದೆ. ಈ ಜಾತಿಯ ನೂರಾರು ಹಸುಗಳು ಬ್ರೆಜಿಲ್‌ನಲ್ಲಿ ಕಂಡುಬರುತ್ತವೆ.  ಬ್ರೆಜಿಲ್‌ನ ಅರಾಂಡುವಿನಲ್ಲಿ ನಡೆದ ಹರಾಜಿನಲ್ಲಿ ಹಸುವಿನ ಮೂರನೇ ಮಾಲೀಕತ್ವವನ್ನು ಇತ್ತೀಚೆಗೆ 6.99 ಮಿಲಿಯನ್ ರಿಯಲ್‌ಗಳಿಗೆ (11 ಕೋಟಿ ರೂ.) ಮಾರಾಟ ಮಾಡಲಾಗಿದೆ. ಇದರಿಂದಾಗಿ ಅದರ ಒಟ್ಟು ವೆಚ್ಚ 4.3 ಮಿಲಿಯನ್ ಡಾಲರ್‌ ಅಂದ್ರೆ ಸುಮಾರು 35 ಕೋಟಿ ಆಗಿದೆ.

Viatina-19 FIV ಮಾರಾ ಇಮೊವಿಸ್ ಅನ್ನು ಕಳೆದ ವರ್ಷ ವಿಶ್ವದ ಅತ್ಯಂತ ದುಬಾರಿ ಹಸು ಎಂದು ಘೋಷಿಸಲಾಯಿತು. ಬ್ರೆಜಿಲ್ ಒಂದರಲ್ಲೇ ಈ ತಳಿಯ ಸುಮಾರು 160 ಮಿಲಿಯನ್ ಹಸುಗಳಿವೆ. ಈ ಹಸುಗಳು ಹೊಳೆಯುವ ಬಿಳಿ ತುಪ್ಪಳ, ಸಡಿಲವಾದ ಚರ್ಮವನ್ನು ಹೊಂದಿರುತ್ತವೆ. ನೆಲ್ಲೂರಿನ ಹಸುಗಳು ಬಿಸಿ ವಾತಾವರಣಕ್ಕೆ ಚೆನ್ನಾಗಿ ಹೊಂದಿಕೊಳ್ಳುತ್ತವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...