alex Certify ‘ಭದ್ರತಾ ಲೋಪ’ದಲ್ಲಿ ಪಂಜಾಬ್​ ಪೊಲೀಸ್​ ಇಲಾಖೆ ಪಾತ್ರ…! ಮತ್ತೊಂದು ಸ್ಫೋಟಕ ಮಾಹಿತಿ ಬಹಿರಂಗ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಭದ್ರತಾ ಲೋಪ’ದಲ್ಲಿ ಪಂಜಾಬ್​ ಪೊಲೀಸ್​ ಇಲಾಖೆ ಪಾತ್ರ…! ಮತ್ತೊಂದು ಸ್ಫೋಟಕ ಮಾಹಿತಿ ಬಹಿರಂಗ

ಪ್ರಧಾನಿ ಮೋದಿ ರಸ್ತೆ ಮಾರ್ಗದಲ್ಲಿ ಪ್ರಯಾಣದ ವೇಳೆಯಲ್ಲಿ ಉಂಟಾದ ಭದ್ರತಾ ಲೋಪವು ಜಾಗತಿಕ ಮಟ್ಟದಲ್ಲಿ ಸುದ್ದಿ ಮಾಡುತ್ತಿದೆ. ಪ್ರಧಾನಿ ಮೋದಿಯವರ ರಸ್ತೆ ಪ್ರಯಾಣ ಬಗ್ಗೆ ಪಂಜಾಬ್​ ಪೊಲೀಸರಿಗೆ ಮೊದಲೇ ಮಾಹಿತಿ ನೀಡಲಾಗಿತ್ತು.

ಪಂಜಾಬ್​​ ರಾಜ್ಯ ಪೊಲೀಸ್​ ಮುಖ್ಯಸ್ಥರಿಂದ ಭದ್ರತೆ ಬಗ್ಗೆ ಮಾಹಿತಿ ಪಡೆದ ನಂತರವೇ ಪ್ರಧಾನಿ ಮೋದಿ ಬೆಂಗಾವಲು ಪಡೆಯು ರಸ್ತೆ ಮಾರ್ಗದಲ್ಲಿ ಹೊರಟಿತ್ತು ಎಂದು ಪಂಜಾಬ್​ನಲ್ಲಿ ಭದ್ರತಾ ಲೋಪ ನಡೆದ 1 ದಿನಗಳ ಬಳಿಕ ಸರ್ಕಾರಿ ಮೂಲಗಳು ಮಾಹಿತಿ ನೀಡಿವೆ.

ನಿನ್ನೆ ಫಿರೋಜ್​ಪುರದಲ್ಲಿ ರಾಜಕೀಯ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಲು ಪ್ರಧಾನಿ ಮೋದಿ ತೆರಳುತ್ತಿದ್ದ ವೇಳೆಯಲ್ಲಿ ಪಂಜಾಬ್​ನ ಬಟಿಂಡಾದಲ್ಲಿ ಅವರು ಸುಮಾರು 20 ನಿಮಿಷಗಳ ಕಾಲ ರೈತರಿಂದ ರಸ್ತೆ ತಡೆ ಅನುಭವಿಸಿದರು.

ಫ್ಲೈ ಓವರ್​ನಲ್ಲಿ 20 ನಿಮಿಷಗಳ ಕಾಲ ಪ್ರತಿಭಟನಾಕಾರರು ಪ್ರಧಾನಿ ಮೋದಿ ವಾಹನ ಸಂಚಾರಕ್ಕೆ ಅಡಚಣೆಯುಂಟು ಮಾಡಿದರು. ಈ ಸಂಬಂಧ ಸಾಕಷ್ಟು ಫೋಟೋಗಳು ಈಗಾಗಲೇ ಸೋಶಿಯಲ್​ ಮೀಡಿಯಾಗಳಲ್ಲಿ ವೈರಲ್​ ಆಗಿದೆ. ಕೊನೆಗೆ ರ್ಯಾಲಿಗಳನ್ನು ರದ್ದು ಮಾಡಿದ ಪ್ರಧಾನಿ ಮೋದಿ ಪಂಜಾಬ್​ನಿಂದ ಹಿಂದಿರುಗಿದ್ದಾರೆ.

ಪಂಜಾಬ್​ ಸರ್ಕಾರ ಹಾಗೂ ಪೊಲೀಸ್​ ಇಲಾಖೆಯ ಆಡಳಿತ ವೈಫಲ್ಯದ ಬಗ್ಗೆ ಬಿಜೆಪಿ ಕಿಡಿಕಾರಿದೆ. ಹಾಗೂ ಪಂಜಾಬ್​ನ ಗೃಹ ಸಚಿವ ಸುಖಜಿಂದರ್​ ಸಿಂಗ್​ ರಾಂಧವಾ ಹಾಗೂ ಪಂಜಾಬ್ ಪೊಲೀಸ್​ ಮುಖ್ಯಸ್ಥರನ್ನು ವಜಾಗೊಳಿಸಬೇಕು ಎಂಬ ಕೂಗು ಕೇಳಿ ಬರ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...