alex Certify ಬ್ಲಾಕ್ ಹೆಡ್ಸ್ ನಿವಾರಣೆಗೆ ಇಲ್ಲಿದೆ ಮನೆ ಮದ್ದು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬ್ಲಾಕ್ ಹೆಡ್ಸ್ ನಿವಾರಣೆಗೆ ಇಲ್ಲಿದೆ ಮನೆ ಮದ್ದು

ನಮ್ಮ ಅಂದದ ಮುಖಕ್ಕೆ ಕಪ್ಪು ಚುಕ್ಕೆ ಅಂದ್ರೆ ಬ್ಲಾಕ್ ಹೆಡ್ಸ್. ಬೇಡ ಅಂದ್ರೂ ಆಗಾಗ ಕಾಣಿಸಿಕೊಳ್ಳುವ ಬ್ಲಾಕ್ ಹೆಡ್ಸ್ ನಿಂದ ಅದೆಷ್ಟೋ ಮಂದಿ ಮುಜುಗರಕ್ಕೊಳಗಾಗ್ತಾರೆ.

ಬ್ಲಾಕ್ ಹೆಡ್ಸ್ ಅಂದ್ರೆ ಎಣ್ಣೆ, ಕೊಳಕು, ಸತ್ತ ಚರ್ಮದ ಜೀವಕೋಶಗಳು ಮತ್ತು ಇತರೆ ಕಲ್ಮಶಗಳನ್ನೊಳಗೊಂಡ ಕೂದಲುಗಳ ಕಿರು ಚೀಲ. ಸಾಮಾನ್ಯವಾಗಿ ಇದು ಮುಖ, ಮೂಗು, ಗಲ್ಲ, ಎದೆ, ಬೆನ್ನು ಮತ್ತು ಭುಜದ ಮೇಲೆ ಕಾಣಿಸಿಕೊಳ್ಳುತ್ತದೆ.

ಅದನ್ನು ರಿಮೂವ್ ಮಾಡಲು ಪದೇ ಪದೇ ಪಾರ್ಲರ್ ಗೆ ಹೋಗೋದು ಅಂದ್ರೆ ಕಷ್ಟದ ಕೆಲಸ. ಹಾಗಾಗಿ ಮನೆಯಲ್ಲೇ ನಾವು ನೈಸರ್ಗಿಕ ವಿಧಾನಗಳಿಂದ ಅದನ್ನು ತೊಡೆದು ಹಾಕಬಹುದು. ದಾಲ್ಚಿನಿ ಹಾಗೂ ಮೊಟ್ಟೆಯ ಬಿಳಿಭಾಗ ಚಮತ್ಕಾರವನ್ನೇ ಮಾಡಬಲ್ಲದು.

ದಾಲ್ಚಿನಿ : ಇದರಲ್ಲಿ ಆ್ಯಂಟಿ ಬ್ಯಾಕ್ಟೀರಿಯಾ ಗುಣವಿದೆ. ಇದನ್ನು ಫೇಸ್ ಮಾಸ್ಕ್ ಆಗಿಯೂ ಬಳಸಬಹುದು. ಮೊಡವೆಗಳನ್ನು ಕೂಡ ಇದು ಕಡಿಮೆ ಮಾಡುತ್ತದೆ. ನಿಮ್ಮ ಚರ್ಮವನ್ನು ಮೃದುವಾಗಿಸುತ್ತದೆ.

ಬೇಕಿಂಗ್ ಸೋಡಾ : ಇದು ತಾಜಾತನಕ್ಕಾಗಿ ಫ್ರಿಡ್ಜ್ ನಲ್ಲಿ ಇಡುವುದಕ್ಕೆ ಮಾತ್ರವಲ್ಲ, ಇದರಿಂದ ಹಲವು ಪ್ರಯೋಜನಗಳಿವೆ. ಮೊಡವೆಗೆ ಕಾರಣವಾಗಬಲ್ಲ ಪಿಎಚ್ ಅಸಮತೋಲನವನ್ನು ತಟಸ್ಥಗೊಳಿಸುತ್ತದೆ. ಇದರಲ್ಲಿ ಆ್ಯಂಟಿಸೆಪ್ಟಿಕ್ ಅಂಶಗಳಿರುವುದರಿಂದ ಮೊಡವೆಯ ಗಾತ್ರವನ್ನು ಕಡಿಮೆ ಮಾಡುತ್ತದೆ.

ಮೊಟ್ಟೆಯ ಬಿಳಿಭಾಗ : ಇದು ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ. ಇದರಲ್ಲಿ ಅಲ್ಬುಮಿನ್ ಮತ್ತು ಪ್ರೋಟೀನ್ ಹೇರಳವಾಗಿರುವುದರಿಂದ ಸ್ಕಿನ್ ಟೋನಿಂಗ್ ಗೆ ಬೆಸ್ಟ್. ಮುಖದ ಮೇಲಿನ ನೆರಿಗೆಯನ್ನು ಕೂಡ ಕಡಿಮೆ ಮಾಡುತ್ತದೆ. ಆಯ್ಲಿ ಸ್ಕಿನ್ ಹೊಂದಿರುವವರಿಗೆ ಇದು ಉತ್ತಮ ಮನೆ ಮದ್ದು, ನಿಮ್ಮ ಮುಖದ ಮೇಲಿನ ರಂಧ್ರಗಳನ್ನು ಕಡಿಮೆ ಮಾಡುತ್ತದೆ.

ಜೇನುತುಪ್ಪ : ಇದರಲ್ಲಿ ಆ್ಯಂಟಿ ಸೆಪ್ಟಿಕ್ ಹಾಗೂ ಆ್ಯಂಟಿ ಬ್ಯಾಕ್ಟೀರಿಯಲ್ ಅಂಶಗಳಿವೆ. ಜೇನುತುಪ್ಪ ಬ್ಲಾಕ್ ಹೆಡ್ಸ್ ನಿವಾರಣೆಗೆ ಸೂಕ್ತ. ಅದರಲ್ಲೂ ಮೊಡವೆ ಸಂಬಂಧಿತ ಬ್ಲಾಕ್ ಹೆಡ್ಸ್ ಇದ್ರೆ ಜೇನುತುಪ್ಪ ಹಚ್ಚಿಕೊಳ್ಳಿ. ಇದು ಮುಖದ ಮೇಲಿನ ರಂಧ್ರಗಳನ್ನು ಹೈಡ್ರೇಟ್ ಮಾಡಿ, ಮುಖವನ್ನು ಬೆಳ್ಳಗಾಗಿಸುತ್ತದೆ.

ಗ್ರೀನ್ ಟೀ : ಡಯಟ್ ಕಾನ್ಷಿಯಸ್ ಇದ್ದವರು ಗ್ರೀನ್ ಟೀ ಕುಡಿಯುತ್ತಾರೆ. ಇದನ್ನು ಮುಖಕ್ಕೆ ಹಚ್ಚಿದರೆ ನಿಮ್ಮ ಚರ್ಮ ಮೃದುವಾಗುತ್ತದೆ. ಚರ್ಮದಲ್ಲಿರುವ ಎಣ್ಣೆ ಅಂಶವನ್ನು ಕಡಿಮೆ ಮಾಡುತ್ತದೆ, ತುರಿಕೆ ಇದ್ದರೆ ಅದು ಕೂಡ ಕಡಿಮೆಯಾಗುತ್ತದೆ. ಸನ್ ಬರ್ನ್ ನಿಂದ ಪಾರಾಗಲು ನೀವು ಗ್ರೀನ್ ಟೀ ಬಳಸಬಹುದು. ನಿಮ್ಮ ಮುಖದ ಮೇಲೆ ವಯಸ್ಸಾದ ಚಿಹ್ನೆ ಕಾಣಿಸಿಕೊಳ್ಳದಂತೆ ನಿಮ್ಮನ್ನು ಯಂಗ್ ಆಗಿಡುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...