alex Certify ಬ್ಯಾಟರಿ ತೆಗೆದು ಮನೆಯಲ್ಲೇ ಚಾರ್ಜ್‌ ಮಾಡಬಹುದಾದ ಎಲೆಕ್ಟ್ರಿಕ್‌ ಸ್ಕೂಟರ್‌ಗಳು, ಅದ್ಭುತವಾಗಿದೆ ಇವುಗಳ ಫೀಚರ್ಸ್‌……! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬ್ಯಾಟರಿ ತೆಗೆದು ಮನೆಯಲ್ಲೇ ಚಾರ್ಜ್‌ ಮಾಡಬಹುದಾದ ಎಲೆಕ್ಟ್ರಿಕ್‌ ಸ್ಕೂಟರ್‌ಗಳು, ಅದ್ಭುತವಾಗಿದೆ ಇವುಗಳ ಫೀಚರ್ಸ್‌……!

ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಮಾರಾಟವು ವೇಗವಾಗಿ ಹೆಚ್ಚುತ್ತಿದೆ. ಆದರೆ ಅನೇಕರಿಗೆ ಎಲೆಕ್ಟ್ರಿಕ್ ವಾಹನಗಳನ್ನು ಚಾರ್ಜ್ ಮಾಡಲು ಸ್ಥಳಾವಕಾಶವಿಲ್ಲದಿರುವುದೇ ಸಮಸ್ಯೆ. ಇದಕ್ಕಾಗಿ ಪ್ರತ್ಯೇಕ ವ್ಯವಸ್ಥೆ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಬಂದಿದೆ. ನಗರಗಳಲ್ಲಿ ಹೆಚ್ಚಿನವರು ತಮ್ಮ ವಾಹನಗಳನ್ನು ಮನೆಯ ಹೊರಗೆ ನಿಲ್ಲಿಸುತ್ತಾರೆ.

ಎಲೆಕ್ಟ್ರಿಕ್ ವಾಹನವನ್ನು ಹೊರಗೆ ನಿಲ್ಲಿಸಿದರೆ ಚಾರ್ಜ್‌ ಮಾಡುವುದು ಕಷ್ಟ. ಇದನ್ನರಿತ ಅನೇಕ ದ್ವಿಚಕ್ರ ವಾಹನ ಕಂಪನಿಗಳು, ಬ್ಯಾಟರಿ ತೆಗೆದು ಮನೆಯಲ್ಲಿಯೇ ಚಾರ್ಜ್‌ ಮಾಡಬಹುದಾದಂತಹ ಎಲೆಕ್ಟ್ರಿಕ್‌ ಸ್ಕೂಟರ್‌ಗಳನ್ನು ಪರಿಚಯಿಸಿವೆ. ಬ್ಯಾಟರಿಯನ್ನು ಸ್ಕೂಟರ್‌ನಿಂದ ತೆಗೆದು, ಮನೆಯಲ್ಲಿ ಚಾರ್ಜ್‌ ಮಾಡಿಕೊಂಡು ಮರಳಿ ಜೋಡಿಸಬಹುದು. ಅಂತಹ ಸ್ಕೂಟರ್‌ಗಳು ಯಾವುವು ಅನ್ನೋದನ್ನು ನೋಡೋಣ.  

ಹೀರೋ ವಿದಾಬೆಲೆ 1.45 ಲಕ್ಷ ರೂ.

ಹೀರೋ ಮೋಟೋಕಾರ್ಪ್‌ನ ಎಲೆಕ್ಟ್ರಿಕ್‌ ಸ್ಕೂಟರ್ ವಿದಾನಲ್ಲಿ ತೆಗೆಯಬಹುದಾದ ಬ್ಯಾಟರಿಯನ್ನು ಅಳವಡಿಸಲಾಗಿದೆ. ಇದರ ಬೆಲೆ 1.45 ಲಕ್ಷ ರೂಪಾಯಿ. ಇದರ ವ್ಯಾಪ್ತಿ 165 ಕಿ.ಮೀ. ಗರಿಷ್ಠ ವೇಗ ಗಂಟೆಗೆ 80 ಕಿಮೀ ಎಂದು ಕಂಪನಿ ಹೇಳಿಕೊಂಡಿದೆ.

ಬೌನ್ಸ್ ಇನ್ಫಿನಿಟಿ ಬೆಲೆ 64,299 ರೂ.

ಬೌನ್ಸ್ ಇನ್ಫಿನಿಟಿ ಸ್ಕೂಟರ್‌,  2kWh, 48V, 39Ah ಬದಲಾಯಿಸಬಹುದಾದ ಬ್ಯಾಟರಿ ಪ್ಯಾಕ್‌ನೊಂದಿಗೆ ಬರುತ್ತದೆ. ಇದರ ಗರಿಷ್ಠ ವೇಗ ಗಂಟೆಗೆ 65 ಕಿ.ಮೀ. ಪೂರ್ಣ ಚಾರ್ಜ್ ಮಾಡಿದರೆ 85 ಕಿ.ಮೀ ಓಡುತ್ತದೆ. ಇಕೋ ಮತ್ತು ಸ್ಪೋರ್ಟ್ ಎಂಬ ಎರಡು ರೈಡ್ ಮೋಡ್‌ಗಳು ಇದರಲ್ಲಿವೆ.

Hero Optima CX – ಬೆಲೆ 62,190 ರೂ.

ಆಪ್ಟಿಮಾ ಸಿಎಕ್ಸ್ ಎಲೆಕ್ಟ್ರಿಕಲ್‌ ಸ್ಕೂಟರ್‌ನಲ್ಲಿ ಕೂಡ ರಿಮೂವೇಬಲ್‌ ಬ್ಯಾಟರಿಯನ್ನು ಅಳವಡಿಸಲಾಗಿದೆ. ಸ್ಕೂಟರ್‌ನ ಬ್ಯಾಟರಿಯನ್ನು ಪೂರ್ತಿಯಾಗಿ ಚಾರ್ಜ್ ಮಾಡಲು 4-5 ಗಂಟೆ ಬೇಕು. ಇದು 140 ಕಿಮೀ ವ್ಯಾಪ್ತಿಯನ್ನು ನೀಡಬಲ್ಲದು. Hero Optima CX ನ ಗರಿಷ್ಠ ವೇಗ ಕೇವಲ 45 ಕಿಮೀ.

ಸಿಂಪಲ್ ಎನರ್ಜಿ ಒನ್ಬೆಲೆ 1.10 ಲಕ್ಷ ರೂ.

ಬೆಂಗಳೂರು ಮೂಲದ ಸಿಂಪಲ್ ಎನರ್ಜಿಯ ಮೊದಲ ಎಲೆಕ್ಟ್ರಿಕ್ ಸ್ಕೂಟರ್‌ ಇದು. 4.8kWh ಬ್ಯಾಟರಿ ಪ್ಯಾಕ್ ಅನ್ನು ಹೊಂದಿದೆ. ಇದನ್ನು ಎರಡು ಭಾಗಗಳಾಗಿ ವಿಂಗಡಿಸಲಾಗಿದೆ, ಅದರ ಒಂದು ಭಾಗವನ್ನು ತೆಗೆಯಬಹುದು. ಇದರ ವ್ಯಾಪ್ತಿಯು 236 ಕಿಮೀ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...