alex Certify ಬೇಸ್‌ಬಾಲ್ ಆಟಕ್ಕೆ ಅಡ್ಡಿಪಡಿಸಿದ ಅಳಿಲು: ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೇಸ್‌ಬಾಲ್ ಆಟಕ್ಕೆ ಅಡ್ಡಿಪಡಿಸಿದ ಅಳಿಲು: ವಿಡಿಯೋ ವೈರಲ್

ಆಟಗಾರರು ಮೈದಾನದಲ್ಲಿ ಬಹುಮುಖ್ಯ ಪಂದ್ಯವನ್ನಾಡುತ್ತಿರಬೇಕಾದ್ರೆ ಯಾವುದೇ ಪ್ರಾಣಿಗಳ ಪ್ರವೇಶವು ಪ್ರೇಕ್ಷಕರಿಗೆ ಮನರಂಜನೆಯುನ್ನುಂಟು ಮಾಡುತ್ತಿದೆ. ಇತ್ತೀಚೆಗೆ ಲೀಗ್ ಫುಟ್ಬಾಲ್ ಕಪ್ ಪಂದ್ಯವೊಂದರಲ್ಲಿ ಪೊಲೀಸ್ ನಾಯಿ ಮೈದಾನ ಪ್ರವೇಶಿಸಿ ತಾನು ಆಟಗಾರರ ಜೊತೆ ಸೇರಿಕೊಂಡಿತ್ತು. ಇದೀಗ ಅಳಿಲೊಂದು ಬೇಸ್‌ಬಾಲ್ ಆಟಕ್ಕೆ ಅಡ್ಡಿಪಡಿಸಿದೆ.

ಶನಿವಾರ ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಬೇಸ್‌ಬಾಲ್ ಆಟಕ್ಕೆ ಅಳಿಲು ಅಡ್ಡಿಪಡಿಸಿದೆ. ಕೊಲಂಬಸ್ ಕ್ಲಿಪ್ಪರ್ಸ್ ಮತ್ತು ಬಫಲೋ ಬೈಸನ್ಸ್ ನಡುವಿನ ಬೇಸ್‌ಬಾಲ್ ಪಂದ್ಯ ನಡೆಯುತ್ತಿತ್ತು. ಈ ವೇಳೆ ಆಟಕ್ಕೆ ಅಳಿಲು ಅಡ್ಡಿಪಡಿಸಿದ ನಂತರ ಹಲವಾರು ನಿಮಿಷಗಳ ಕಾಲ ಪಂದ್ಯವನ್ನು ಸ್ಥಗಿತಗೊಳಿಸಲಾಯಿತು.

ಮೈನರ್ ಲೀಗ್ ಬೇಸ್‌ಬಾಲ್‌ನ ಅಧಿಕೃತ ಪುಟದಿಂದ ಹಂಚಿಕೊಂಡ ವಿಡಿಯೋದಲ್ಲಿ, ಪ್ರೇಕ್ಷಕರು ಆಶ್ಚರ್ಯದಿಂದ ನೋಡುತ್ತಿರುವಂತೆ ಅಳಿಲು ಮೈದಾನ ಪ್ರವೇಶಿಸಿದೆ. ಅದನ್ನು ಹಿಡಿಯಲು ಆಟಗಾರರು ಮತ್ತು ಗ್ರೌಂಡ್ ಕೀಪರ್‌ಗಳು ಪ್ರಯತ್ನಿಸುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು.

ಗ್ರೌಂಡ್ ಕೀಪರ್‌ಗಳು ಬಲೆ ಮತ್ತು ಬಕೆಟ್‌ಗಳನ್ನು ಬಳಸಿ ಅಳಿಲು ಹಿಡಿಯಬೇಕಾದ್ರೆ ಅವರು ಅಬ್ಬಾ.. ಅಂತೂ ಸಿಕ್ತು ಅನ್ನೋ ನಿಟ್ಟುಸಿರುಬಿಟ್ಟಿದ್ದಾರೆ. ಮೈದಾನದ ತುಂಬಾ ಓಡಾಡಿದ ಅಳಿಲು ಬಲೆಗೆ ಬೀಳುವಲ್ಲಿ ಯಶಸ್ವಿಯಾಯಿತು. ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ನೆಟ್ಟಿಗರಿಗೆ ಮನರಂಜನೆ ನೀಡಿದೆ.

— Minor League Baseball (@MiLB) May 29, 2022

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...