alex Certify ಬೇಸಿಗೆಯಲ್ಲಿ ದೇಹವನ್ನು ತಂಪಾಗಿಡುವ ಬಸಳೆ ಸೊಪ್ಪಿನ ‘ತಂಬುಳಿ’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೇಸಿಗೆಯಲ್ಲಿ ದೇಹವನ್ನು ತಂಪಾಗಿಡುವ ಬಸಳೆ ಸೊಪ್ಪಿನ ‘ತಂಬುಳಿ’

ಸಮ್ಮರ್ ಸೀಸನ್ ನಲ್ಲಿ ನೀರಿನ ದಾಹ ನಿವಾರಣೆಗೆ ತಂಬುಳಿಗಿಂತ ಉತ್ತಮ ವ್ಯಂಜನ ಮತ್ತೊಂದಿಲ್ಲ. ತಂಬುಳಿಯಲ್ಲಿ ಹಲವು ಬಗೆ. ಆದರೆ ಬೇಸಿಗೆಯಲ್ಲಿ ದೇಹವನ್ನು ತಂಪಾಗಿಡುವ ಬಸಳೆ ಸೊಪ್ಪಿನ ತಂಬುಳಿ ಸವಿಯಲೇ ಬೇಕು. ಈ ತಂಬುಳಿ ಮಾಡುವ ವಿಧಾನ ಇಲ್ಲಿದೆ.

ಬೇಕಾಗುವ ಸಾಮಗ್ರಿಗಳು

ಬಸಳೆ ಸೊಪ್ಪು 10 ಎಲೆ
ಕಾಳು ಮೆಣಸು 10
ಜೀರಿಗೆ 1 ಟೀ ಚಮಚ
ಮಜ್ಜಿಗೆ ಅರ್ಧ ಲೀಟರ್
ತುಪ್ಪ 1 ಟೀ ಚಮಚ
ತೆಂಗಿನಕಾಯಿ ತುರಿ 2 ಟೀ ಚಮಚ
ಉಪ್ಪು ರುಚಿಗೆ ತಕ್ಕಷ್ಟು
ಒಗ್ಗರಣೆಗೆ ಸಾಸಿವೆ, ಒಣ ಮೆಣಸಿನ ಕಾಯಿ, ತುಪ್ಪ.

ಮಾಡುವ ವಿಧಾನ

ಮೊದಲಿಗೆ ಬಾಣಲೆಯಲ್ಲಿ ತುಪ್ಪವನ್ನು ಬಿಸಿ ಮಾಡಿ ಅದರಲ್ಲಿ ಜೀರಿಗೆ ಮತ್ತು ಕಾಳುಮೆಣಸನ್ನು ಹಾಕಿ ಹುರಿಯಿರಿ. ನಂತರ ಅದಕ್ಕೆ ಬಸಳೆ ಸೊಪ್ಪು ಹಾಕಿ ಬಾಡಿಸಿ. ಈ ಮಿಶ್ರಣ ಆರಿದ ನಂತರ ಮಿಕ್ಸಿ ಜಾರಿಗೆ ಹಾಕಿ. ಉಪ್ಪು, ಸ್ವಲ್ಪ ಮಜ್ಜಿಗೆ ಅಥವಾ ನೀರು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ನಂತರ ಈ ಮಿಶ್ರಣಕ್ಕೆ ಉಳಿದ ಮಜ್ಜಿಗೆ ಬೆರೆಸಿ ಒಗ್ಗರಣೆಯನ್ನು ಹಾಕಿ ಬಸಳೆ ಸೊಪ್ಪಿನ ತಂಬುಳಿ ಟೇಸ್ಟ್ ಮಾಡಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...