alex Certify ಬೆಳಗ್ಗೆದ್ದು ನೋಡಿದಾಗ ಅಪಾರ್ಟ್ಮೆಂಟ್ ನ ಮೆಟ್ಟಿಲು ಹಠಾತ್ತನೆ ಕಣ್ಮರೆ..! ಮಹಿಳೆ ಕಂಗಾಲು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಳಗ್ಗೆದ್ದು ನೋಡಿದಾಗ ಅಪಾರ್ಟ್ಮೆಂಟ್ ನ ಮೆಟ್ಟಿಲು ಹಠಾತ್ತನೆ ಕಣ್ಮರೆ..! ಮಹಿಳೆ ಕಂಗಾಲು

ಒಂದು ವೇಳೆ ನೀವು ಕಟ್ಟಡವೊಂದರ ಮೂರು ಅಥವಾ ನಾಲ್ಕನೇ ಮಹಡಿಯ ಮನೆಯಲ್ಲಿ ವಾಸಿಸುತ್ತಿದ್ದೀರಿ ಎಂಬುದನ್ನು ಕಲ್ಪಿಸಿಕೊಳ್ಳಿ. ಎಂದಿನಂತೆ ಒಂದು ದಿನ ಎದ್ದು ನೋಡಿದಾಗ ಕೆಳಕ್ಕಿಳಿದು ಹೋಗುವ ಮೆಟ್ಟಿಲು ಕಾಣೆಯಾದ್ರೆ ನೀವು ಹೇಗೆ ಪ್ರತಿಕ್ರಿಯಿಸುತ್ತೀರಿ..?

ಇಂತಹದ್ದೇ ಪರಿಸ್ಥಿತಿಯನ್ನು ಅಟ್ಲಾಂಟಾದಲ್ಲಿ ಮಹಿಳೆಯೊಬ್ಬಳು ಎದುರಿಸಿದ್ದಾಳೆ. ಟಿಕ್‌ಟಾಕ್‌ನಲ್ಲಿ ಇದರ ವಿಡಿಯೋವನ್ನು ಹಂಚಿಕೊಂಡಿದ್ದು, ಇದೀಗ ಭಾರಿ ವೈರಲ್ ಆಗಿದೆ.

ತನ್ನ ಅಪಾರ್ಟ್ ಮೆಂಟ್ ನ ಮುಂಭಾಗದ ಮೆಟ್ಟಿಲುಗಳು ಇದ್ದಕ್ಕಿದ್ದಂತೆ ಸಂಪೂರ್ಣವಾಗಿ ಕಣ್ಮರೆಯಾಗಿರುವುದನ್ನು ಕಂಡು ಆಕೆ ಅಚ್ಚರಿಗೊಂಡಿದ್ದಾಳೆ. ಅಯ್ಯೋ….. ತಾನು ಹೇಗಪ್ಪಾ ಕೆಳಗಿಳಿದು ಹೋಗಲಿ ಅಂತಾ ಮಂಡೆಬಿಸಿ ಮಾಡಿಕೊಂಡಿದ್ದಾಳೆ.

ವಿಡಿಯೋದಲ್ಲಿ, ಏಣಿಯನ್ನು ತೆಗೆದುಹಾಕಲಾಗಿದೆ ಅಥವಾ ದುರಸ್ತಿ ಉದ್ದೇಶಕ್ಕಾಗಿ ಕೆಡವಲಾಗಿದೆ ಎಂದು ವ್ಯಕ್ತಿಯೊಬ್ಬರು ಹೇಳಿದ್ದಾರೆ. ಆದರೆ, ಮುನ್ನೆಚ್ಚರಿಕೆ ನೀಡದೆ ಮೆಟ್ಟಿಲುಗಳನ್ನು ಕೆಡವಲಾಗಿದೆ. ಹೀಗಾಗಿ ಆಕೆ ಗಂಟೆಗಟ್ಟಲೇ ಮನೆಯಲ್ಲೇ ಸಿಲುಕಿಕೊಳ್ಳಬೇಕಾಯ್ತು.

ಕಟ್ಟಡದಲ್ಲಿ ಅಘೋಷಿತ ದುರಸ್ತಿ ನಡೆಸಲಾಗಿದೆ ಎಂದು ಟಿಕ್ ಟಾಕ್ ನಲ್ಲಿ ಮಹಿಳೆ ಹೇಳಿದ್ದಾಳೆ. ಇದರಿಂದ ಆಕೆ ಕೋಪಗೊಂಡಿದ್ದರೂ ಕೂಡ ಯಾವುದೇ ಕಾನೂನು ಕ್ರಮ ತೆಗೆದುಕೊಳ್ಳಲು ಯೋಜಿಸುತ್ತಿಲ್ಲವಂತೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...