alex Certify ಬೆಲ್ಲ ಅಸಲಿಯೋ ನಕಲಿಯೋ ಪತ್ತೆ ಮಾಡಲು ಇಲ್ಲಿದೆ ಟಿಪ್ಸ್‌ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಲ್ಲ ಅಸಲಿಯೋ ನಕಲಿಯೋ ಪತ್ತೆ ಮಾಡಲು ಇಲ್ಲಿದೆ ಟಿಪ್ಸ್‌

ಬೆಲ್ಲ ಅತ್ಯಂತ ಆರೋಗ್ಯಕರ ಸಿಹಿ ಅನ್ನೋದು ನಮಗೆಲ್ಲಾ ಗೊತ್ತೇ ಇದೆ. ಸಕ್ಕರೆಯ ಬದಲು ಬೆಲ್ಲವನ್ನು ಬಳಸುವಂತೆ ವೈದ್ಯರು ಕೂಡ ಸಲಹೆ ಕೊಡ್ತಾರೆ. ಬೆಲ್ಲದಲ್ಲಿ ಕ್ಯಾಲ್ಸಿಯಂ, ಸತು, ಕಬ್ಬಿಣ, ಪೊಟ್ಯಾಸಿಯಮ್, ರಂಜಕ ಮತ್ತು ವಿಟಮಿನ್ ಬಿಯಂತಹ ಪೋಷಕಾಂಶಗಳು ಹೇರಳವಾಗಿ ಕಂಡುಬರುತ್ತವೆ. ದೇಹವನ್ನು ಡಿಟಾಕ್ಸ್‌ ಮಾಡಲು ಬೆಲ್ಲ ಸಹಕಾರಿಯಾಗಿದೆ.

ಆದರೆ ಬೆಲ್ಲಕ್ಕೆ ಬೇಡಿಕೆ ಹೆಚ್ಚುತ್ತಿದ್ದಂತೆ ಲಾಭದ ದುರಾಸೆಯಲ್ಲಿ  ಕಲಬೆರಕೆ ಕೂಡ ಹೆಚ್ಚಾಗುತ್ತಿದೆ. ಬೆಲ್ಲ ಅಸಲಿಯೋ ನಕಲಿಯೋ ಅನ್ನೋದನ್ನು ಪತ್ತೆ ಮಾಡೋದು ಸವಾಲೇ ಸರಿ. ರಾಸಾಯನಿಕ ಬೆರೆತ ಕಲಬೆರಕೆ ಬೆಲ್ಲ ಸೇವಿಸಿದ್ರೆ ಆರೋಗ್ಯಕ್ಕೆ ಸಮಸ್ಯೆಯೂ ಆಗಬಹುದು. ಹಾಗಾಗಿ ಬಣ್ಣವನ್ನು ನೋಡಿ ಬೆಲ್ಲದ ನಿಜವಾದ ಗುಣಮಟ್ಟವನ್ನು ಹೇಗೆ ಗುರುತಿಸಬಹುದು ಅನ್ನೋದನ್ನು ನೋಡೋಣ.

ಬೆಲ್ಲವು ಶುದ್ಧವಾಗಿದೆಯೇ ಅಥವಾ ಕಲಬೆರಕೆಯಾಗಿದೆಯೇ ಎಂದು ಗುರುತಿಸುವಲ್ಲಿ ಅದರ ಬಣ್ಣವು ಪ್ರಮುಖ ಪಾತ್ರ ವಹಿಸುತ್ತದೆ. ಕಡು ಕಂದು ಬಣ್ಣದಲ್ಲಿರುವ ಬೆಲ್ಲದ ಬಣ್ಣ ಉತ್ತಮವಾದದ್ದು. ಹಳದಿ ಅಥವಾ ತಿಳಿ ಕಂದು ಬಣ್ಣದ ಬೆಲ್ಲಕ್ಕೆ ರಾಸಾಯನಿಕಗಳನ್ನು ಸೇರಿಸುವ ಮೂಲಕ ಕಲಬೆರಕೆ ಮಾಡಲಾಗುತ್ತದೆ. ಅನೇಕ ಬಾರಿ ಕಬ್ಬಿನ ರಸವನ್ನು ಸೇರಿಸುವುದರಿಂದ ಬೆಲ್ಲದ ಬಣ್ಣವು ಕಡು ಕೆಂಪು ಬಣ್ಣಕ್ಕೆ ತಿರುಗುತ್ತದೆ.

ಗೋಲ್ಡನ್ ಬ್ರೌನ್ ನಿಂದ ಡಾರ್ಕ್ ಬ್ರೌನ್ ವರೆಗೆ ಪ್ರತಿ ಬಣ್ಣದ ಬೆಲ್ಲ ಮಾರುಕಟ್ಟೆಯಲ್ಲಿ ಲಭ್ಯವಿರುತ್ತದೆ. ನೀವು ಕಡು ಕಂದು ಬೆಲ್ಲವನ್ನು ಮಾತ್ರ ಖರೀದಿಸಬೇಕು, ಏಕೆಂದರೆ ಅದು ಕಲಬೆರಕೆಯಾಗಿರುವುದಿಲ್ಲ. ರಾಸಾಯನಿಕ ಬಳಕೆಯಿಂದಾಗಿ ಬೆಲ್ಲದ ಬಣ್ಣವು ಬಿಳಿ, ತಿಳಿ ಹಳದಿ ಅಥವಾ ಕೆಂಪು ಬಣ್ಣಕ್ಕೆ ತಿರುಗುತ್ತದೆ. ಬೆಲ್ಲದಲ್ಲಿ ಕಲಬೆರಕೆ ಮಾಡಲು ಕ್ಯಾಲ್ಸಿಯಂ ಕಾರ್ಬೋನೇಟ್ ಮತ್ತು ಸೋಡಿಯಂ ಬೈಕಾರ್ಬೊನೇಟ್‌ ಅನ್ನು ಸಾಮಾನ್ಯವಾಗಿ ಬಳಸಲಾಗುತ್ತದೆ. ಬೆಲ್ಲದ ತೂಕವನ್ನು ಹೆಚ್ಚಿಸಲು ಕ್ಯಾಲ್ಸಿಯಂ ಕಾರ್ಬೋನೇಟ್ ಅನ್ನು ಬಳಸಲಾಗುತ್ತದೆ.

ಅದೇ ಸಮಯದಲ್ಲಿ ಬೆಲ್ಲವನ್ನು ಹೊಳೆಯುವಂತೆ ಮಾಡಲು ಸೋಡಿಯಂ ಬೈಕಾರ್ನೊನೇಟ್ ಅನ್ನು ಬಳಸಲಾಗುತ್ತದೆ, ಇದರಿಂದಾಗಿ ಬೆಲ್ಲವು ಹಳದಿಯಾಗಿ ಕಾಣುತ್ತದೆ. ಬೆಲ್ಲದಲ್ಲಿ ಕಲಬೆರಕೆಯನ್ನು ಪತ್ತೆಹಚ್ಚಲು ನೀವು ಇನ್ನೊಂದು ವಿಧಾನವನ್ನು ಅಳವಡಿಸಿಕೊಳ್ಳಬಹುದು. ಬೆಲ್ಲದ ತುಂಡನ್ನು ತೆಗೆದುಕೊಂಡು ಸ್ವಲ್ಪ ನೀರಿನಲ್ಲಿ ಹಾಕಿ. ಬೆಲ್ಲವು ಕಲಬೆರಕೆಯಾಗಿದ್ದರೆ ಕಲಬೆರಕೆ ಪದಾರ್ಥವು ಪಾತ್ರೆಯ ಕೆಳಭಾಗದಲ್ಲಿ ಕುಳಿತುಕೊಳ್ಳುತ್ತದೆ.  ಬೆಲ್ಲವು ಶುದ್ಧವಾಗಿದ್ದರೆ ಅದು ಸಂಪೂರ್ಣವಾಗಿ ನೀರಿನಲ್ಲಿ ಕರಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...