alex Certify ಬೆಚ್ಚಿ ಬೀಳಿಸುವಂತಿದೆ ಸುನಾಮಿ ಭೀಕರತೆಯ ಈ ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಚ್ಚಿ ಬೀಳಿಸುವಂತಿದೆ ಸುನಾಮಿ ಭೀಕರತೆಯ ಈ ವಿಡಿಯೋ

ಇಂಟರ್ನೆಟ್​ನಲ್ಲಿ ಒಂದಿಲ್ಲೊಂದು ಆಶ್ಚರ್ಯಕರ ಫೋಟೋಗಳು ಹಾಗೂ ವಿಡಿಯೋಗಳು ವೈರಲ್​ ಆಗ್ತಾನೇ ಇರುತ್ತದೆ. ಇದೀಗ ಇಂಟರ್ನೆಟ್​ನಲ್ಲಿ ಸುನಾಮಿಯ ಭಯಂಕರ ದೃಶ್ಯದ ವಿಡಿಯೋವೊಂದು ಹರಿದಾಡುತ್ತಿದ್ದು ಈ ವಿಡಿಯೋ ನೋಡಿದ ನೆಟ್ಟಿಗರು ಅಬ್ಬಾ ಎಂದಿದ್ದಾರೆ. TheFigen ಎಂಬ ಬಳಕೆದಾರರು ಟ್ವಿಟರ್​ನಲ್ಲಿ ಶೇರ್​ ಮಾಡಿರುವ ಫೋಟೋದಲ್ಲಿ ಸುನಾಮಿಯ ರಭಸಕ್ಕೆ ವ್ಯಾನ್​ಗಳು. ಕಾರುಗಳು, ದೊಡ್ಡ ದೊಡ್ಡ ಹಡಗುಗಳು ಕೊಚ್ಚಿ ಹೋಗುತ್ತಿರುವುದನ್ನು ಕಾಣಬಹುದಾಗಿದೆ.

ರೆಸ್ಟಾರೆಂಟ್​ನ ಒಳಗಡೆ ಅಲುಗಾಡುತ್ತಿರುವದನ್ನೂ ಈ ವಿಡಿಯೋದಲ್ಲಿ ಕಾಣಬಹುದಾಗಿದೆ. ಸುನಾಮಿಯ ರಭಸಕ್ಕೆ ಕುರ್ಚಿಗಳು, ಮೇಜುಗಳು ಹಾಗೂ ದೀಪಗಳು ಕೆಳಗೆ ಬಿದ್ದಿವೆ. ಜನರು ತಮ್ಮ ಬಲದ ಮೇಲೆ ತಾವು ನಿಂತುಕೊಳ್ಳಲು ಸಹ ಹೆಣಗಾಡುತ್ತಿರೋದನ್ನು ಕಾಣಬಹುದಾಗಿದೆ. ಕಟ್ಟಡದ ಬಾಲ್ಕನಿಯಲ್ಲಿ ನಿಂತ ಅನೇಕರು ಈ ಭಯಾನಕ ದೃಶ್ಯಗಳನ್ನು ಚಿತ್ರೀಕರಿಸಿದ್ದಾರೆ.

ಜಪಾನ್​ನಲ್ಲಿ 2011ರಲ್ಲಿ ಸಂಭವಿಸಿದೆ ಸುನಾಮಿಯ ಶಕ್ತಿ ಎಂದು ಈ ವಿಡಿಯೋಗೆ ಶೀರ್ಷಿಕೆ ನೀಡಲಾಗಿದೆ. ಈ ವಿಡಿಯೋ ಆರು ಲಕ್ಷಕ್ಕೂ ಅಧಿಕ ವೀವ್ಸ್​ ಸಂಪಾದಿಸಿದೆ.

— Figen (@TheFigen) July 10, 2022

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...