alex Certify ಬೆಚ್ಚಿಬೀಳಿಸುವಂತಿದೆ 2 ಸಾವಿರ ರೂ.ಗೆ ಖರೀದಿಸಿದ ರೇಖಾಚಿತ್ರದ ನಿಜವಾದ ಬೆಲೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಚ್ಚಿಬೀಳಿಸುವಂತಿದೆ 2 ಸಾವಿರ ರೂ.ಗೆ ಖರೀದಿಸಿದ ರೇಖಾಚಿತ್ರದ ನಿಜವಾದ ಬೆಲೆ…!

ಯಾರ್ಡ್ (ಪ್ರಾಂಗಣ) ಮಾರಾಟದಿಂದ ಕೇವಲ $ 30 (ರೂ. 2,000) ಕ್ಕೆ ಖರೀದಿಸಿದ ಚಿತ್ರವು ವಾಸ್ತವವಾಗಿ 74 ಕೋಟಿ ರೂ.ಗಿಂತಲೂ ಹೆಚ್ಚು ಮೌಲ್ಯವಾಗಿ ಹೊರಹೊಮ್ಮಿದೆ.

ಈ ಚಿತ್ರವು 16ನೇ ಶತಮಾನದ ಜರ್ಮನ್ ನವೋದಯ ಕಲಾವಿದ ಆಲ್ಬ್ರೆಕ್ಟ್ ಡ್ಯೂರರ್ ಅವರದ್ದಾಗಿದೆ. ವರದಿಗಳ ಪ್ರಕಾರ, ಇದನ್ನು ಆರಂಭದಲ್ಲಿ 2017 ರಲ್ಲಿ ಯಾರ್ಡ್ ಮಾರಾಟದಲ್ಲಿ ಖರೀದಿಸಲಾಯಿತು. ಕಲಾಕೃತಿಯು ಈಗ ಲಂಡನ್ ಮೂಲದ ಹರಾಜು ಮನೆಯಾದ ಆಗ್ನ್ಯೂಸ್ ಗ್ಯಾಲರಿಯ ಸ್ವಾಧೀನದಲ್ಲಿದೆ.

1529ರಲ್ಲಿ ನಿಧನರಾದ ಡ್ಯೂರರ್, ಜರ್ಮನ್ ನವೋದಯದ ಪ್ರಮುಖ ವ್ಯಕ್ತಿಗಳಲ್ಲಿ ಒಬ್ಬರು ಮತ್ತು ಅವರ ಕಾಲದ ಶ್ರೇಷ್ಠ ಕಲಾವಿದ ಎಂದು ಪರಿಗಣಿಸಲ್ಪಟ್ಟರು. ಈ ರೇಖಾಚಿತ್ರವನ್ನು ದಿ ವರ್ಜಿನ್ ಅಂಡ್ ಚೈಲ್ಡ್ ಎಂದು ಹೆಸರಿಸಲಾಗಿದೆ. ಆಗ್ನ್ಯೂಸ್ ತನ್ನ ಪತ್ರಿಕಾ ಪ್ರಕಟಣೆಯಲ್ಲಿ, ಡ್ಯೂರರ್ ಅವರ ಅಜ್ಞಾತ ಕೃತಿಗಳನ್ನು ಕಂಡುಹಿಡಿಯುವುದು ಬಹಳ ಅಪರೂಪ ಎಂದು ಹೇಳಿದೆ. ಏಕೆಂದರೆ ಅವರ ಪರಂಪರೆಯನ್ನು ಪ್ರಪಂಚದಾದ್ಯಂತದ ವಿದ್ವಾಂಸರು ಬಹಳ ವಿವರವಾಗಿ ಅಧ್ಯಯನ ಮಾಡಿದ್ದಾರೆ.

ಬೋಸ್ಟನ್ ಮೂಲದ ಕಲಾ ಸಂಗ್ರಾಹಕ ಮತ್ತು ಗ್ಯಾಲರಿಯ ಸಲಹೆಗಾರ ಕ್ಲಿಫರ್ಡ್ ಸ್ಕೋರರ್ ಅವರು, 2019ರಲ್ಲಿ ಮ್ಯಾಸಚೂಸೆಟ್ಸ್ ಪುಸ್ತಕದಂಗಡಿಯಲ್ಲಿದ್ದಾಗ ಕಲಾಕೃತಿಯ ಮೇಲೆ ಮೊದಲು ಎಡವಿ ಬಿದ್ದ ವ್ಯಕ್ತಿ. ವರದಿಗಳ ಪ್ರಕಾರ, ಪುಸ್ತಕದ ಅಂಗಡಿಯ ಮಾಲೀಕರು ತನ್ನ ಸ್ನೇಹಿತ ಖರೀದಿಸಿದ ರೇಖಾಚಿತ್ರವನ್ನು ನೋಡಲು ಕೇಳಿದ್ದರು. ಪುಸ್ತಕ ಮಾರಾಟಗಾರನು ಡ್ಯೂರರ್‌ನ ಮೂಲವಾಗಿರಬಹುದೆಂದು ಊಹಿಸಿದ ನಂತರ ರೇಖಾಚಿತ್ರವನ್ನು ಸ್ಕೋರರ್‌ಗೆ ಮಾರಾಟ ಮಾಡಿದ.

ಆದರೆ, ಕೆಲವೇ ವಾರಗಳಲ್ಲಿ ಡ್ರಾಯಿಂಗ್ ಡ್ಯೂರರ್ ಅವರದ್ದು ಎಂದು ಗೊತ್ತಾದಾಗ ಸ್ಕೋರರ್ ಆಘಾತಕ್ಕೊಳಗಾಗಿದ್ದರಂತೆ. ಅಲ್ಲದೆ, ಕಲಾಕೃತಿಯನ್ನು ಪರಿಶೀಲಿಸಲು ಅವರು ಮೂರು ವರ್ಷಗಳ ಪ್ರಯಾಣವನ್ನು ಕೈಗೊಂಡಿದ್ದರು. ಸ್ಕೋರರ್ ಅವರು ಪ್ರಪಂಚದಾದ್ಯಂತದ 17 ತಜ್ಞರನ್ನು ಭೇಟಿಯಾಗಿ ಸತ್ಯಾಸತ್ಯತೆಯನ್ನು ದೃಢಪಡಿಸಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...