alex Certify ಬೆಚ್ಚಿಬೀಳಿಸುವಂತಿದೆ ಶ್ವಾನದ ಹುಟ್ಟುಹಬ್ಬಕ್ಕೆ ಈ ಮಹಿಳೆ ಖರ್ಚು ಮಾಡಿದ ಹಣ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಚ್ಚಿಬೀಳಿಸುವಂತಿದೆ ಶ್ವಾನದ ಹುಟ್ಟುಹಬ್ಬಕ್ಕೆ ಈ ಮಹಿಳೆ ಖರ್ಚು ಮಾಡಿದ ಹಣ…!

ಬೀಜಿಂಗ್: ಮುದ್ದಿನ ಸಾಕುಪ್ರಾಣಿಗಳ ಹುಟ್ಟುಹಬ್ಬವನ್ನು ಆಚರಿಸೋದು ಇತ್ತೀಚೆಗೆ ಸಾಮಾನ್ಯವಾಗಿದೆ. ತೀರಾ ಇತ್ತೀಚೆಗಷ್ಟೇ ಭಾರತದಲ್ಲಿ ಕುಟುಂಬವೊಂದು ಕೋಳಿಯ ಹುಟ್ಟುಹಬ್ಬವನ್ನು ಆಚರಿಸಿ ಸುದ್ದಿಯಾಗಿತ್ತು.

ಸಾಕುಪ್ರಾಣಿಗಳ ಹುಟ್ಟುಹಬ್ಬದ ಸೆಲೆಬ್ರೇಷನ್ ನಲ್ಲೂ, ಕೇಕ್ ಕಟ್ ಮಾಡುವುದು, ಅದ್ಧೂರಿ ಅಲಂಕಾರ ಸೇರಿದಂತೆ ಭರ್ಜರಿ ಔತಣಕೂಟ ಏರ್ಪಡಿಸಲಾಗುತ್ತದೆ. ಆದರೆ, ಇಲ್ಲೊಬ್ಬಳು ತನ್ನ ಮುದ್ದಿನ ಶ್ವಾನದ ಬರ್ತ್ ಡೇಗೆ ಮಾಡಿರುವ ಖರ್ಚು ಕೇಳಿ ಎಲ್ಲರೂ ಹುಬ್ಬೇರಿಸಿದ್ದಾರೆ.

ಹೌದು, ಚೀನಾದ ಮಹಿಳೆಯೊಬ್ಬರು ತಮ್ಮ ಮುದ್ದಿನ ನಾಯಿಯ 10ನೇ ಹುಟ್ಟುಹಬ್ಬದಂದು ಸುಮಾರು 100,000 ಯುವಾನ್ (ರೂ. 11 ಲಕ್ಷ) ಖರ್ಚು ಮಾಡಿದ್ದಾರೆ. ಮಧ್ಯ ಚೀನಾದ ಹುನಾನ್ ಪ್ರಾಂತ್ಯದ ಚಾಂಗ್‌ಶಾದ ಮೇಲಿರುವ ಜಿಯಾಂಗ್‌ಜಿಯಾಂಗ್ ನದಿ ದಂಡೆಯಲ್ಲಿ ಡೌಡೌ ಶ್ವಾನದ ಮಾಲಕಿ ಅದ್ಧೂರಿ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ. ಇದಕ್ಕಾಗಿ ಆಕೆ 520 ಡ್ರೋನ್ ಗಳನ್ನು ಬಾಡಿಗೆಗೆ ಪಡೆದಿದ್ದಳು.

ನಾಗರಿಕ ವಸತಿ ಪ್ರದೇಶದಲ್ಲಿ ಅನಧಿಕೃತವಾಗಿ ಡ್ರೋನ್ ಗಳನ್ನು ಹಾರಿಸಿದ್ದಲ್ಲದೆ, ತನ್ನ ನಾಯಿಗಾಗಿ ಬೆಳಕಿನ ಪ್ರದರ್ಶನವನ್ನೂ ನೀಡಿದ್ದಾಳೆ. ಆಗಸದಲ್ಲಿ ಕೆಲಹೊತ್ತು ಅತ್ಯದ್ಭುತವಾದ, ಸುಂದರವಾದ ಬೆಳಕಿನ ಪ್ರದರ್ಶನ ಏರ್ಪಟ್ಟಿತ್ತು. ಆದರೆ, ಸಂಭ್ರಮವೇ ಆಕೆಗೆ ಮುಳುವಾದಂತಿದೆ. ಏಕೆಂದರೆ ಯಾವುದೇ ಪರವಾನಗಿ ಪಡೆಯದೆ ಮಹಿಳೆ ಈ ರೀತಿ ಬೆಳಕಿನ ಪ್ರದರ್ಶನ ಮಾಡಿರುವುದು ಪೊಲೀಸರ ಕಣ್ಣು ಕೆಂಪಗಾಗಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...