alex Certify ಬೆಚ್ಚಿಬೀಳಿಸುತ್ತೆ ಕೇವಲ 4 ದಿನಗಳಲ್ಲಿ ಉಕ್ರೇನ್​ನಿಂದ ಪಲಾಯನ ಮಾಡಿದವರ ಸಂಖ್ಯೆ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಚ್ಚಿಬೀಳಿಸುತ್ತೆ ಕೇವಲ 4 ದಿನಗಳಲ್ಲಿ ಉಕ್ರೇನ್​ನಿಂದ ಪಲಾಯನ ಮಾಡಿದವರ ಸಂಖ್ಯೆ..!

ಉಕ್ರೇನ್​ನ ಮೇಲೆ ರಷ್ಯಾವು ಮಿಲಿಟರಿ ಕಾರ್ಯಾಚರಣೆಯು ಕೈಗೊಂಡ ಬಳಿಕ ಯುದ್ಧ ಪೀಡಿತ ಉಕ್ರೇನ್​ನಿಂದ ಈವರೆಗೆ 5,00,000ಕ್ಕೂ ಅಧಿಕ ಮಂದಿ ಉಕ್ರೇನ್​ನಿಂದ ಪಲಾಯನ ಮಾಡಿದ್ದಾರೆ ಎಂದು ವಿಶ್ವಸಂಸ್ಥೆಯ ನಿರಾಶ್ರಿತರ ಸಂಸ್ಥೆಯು ಅಧಿಕೃತ ಮಾಹಿತಿಯನ್ನು ನೀಡಿದೆ.

ವಿಶ್ವಸಂಸ್ಥೆಯ ಹೈ ಕಮಿಷನರ್​​ ಫಿಲಿಪ್ಪೋ ಗ್ರ್ಯಾಂಡಿ ಈ ವಿಚಾರವಾಗಿ ಟ್ವೀಟ್​ ಮಾಡಿ ಅಂದಾಜು ಮಾಹಿತಿ ನೀಡಿದ್ದಾರೆ. ಈ ಸಂಖ್ಯೆಯು ಶೀಘ್ರದಲ್ಲಿಯೇ ಇನ್ನಷ್ಟು ಏರಿಕೆ ಕಾಣಲಿದೆ ಎಂದೂ ಅವರು ಅಂದಾಜಿಸಿದ್ದಾರೆ.

ಸದ್ಯಕ್ಕಿರುವ ಮಾಹಿತಿಯ ಪ್ರಕಾರ ಪೊಲೆಂಡ್​ಗೆ 2,81,000, ಹಂಗೇರಿಗೆ 84.500ಕ್ಕೂ ಅಧಿಕ ಮಂದಿ ಪಲಾಯನ ಮಾಡಿದ್ದಾರೆ ಎನ್ನಲಾಗಿದೆ. ಇನ್ನುಳಿದಂತೆ ಮಾಲ್ಡೋವಾಗೆ ಸುಮಾರು 36,400, ರೋಮೆನಿಯಾಗೆ 32,500 ಹಾಗೂ ಸ್ಲೋವೆಕಿಯಾಗೆ 30 ಸಾವಿರ ಜನರು ಪಲಾಯನ ಮಾಡಿದ್ದಾರೆ ಎನ್ನಲಾಗಿದೆ. ಇನ್ನುಳಿದವರು ಇನ್ನೂ ಅಂದಾಜಿಸಲು ಸಾಧ್ಯವಾಗದಂತೆ ವಿವಿಧ ದೇಶಗಳಿಗೆ ಚದುರಿ ಹೋಗಿದ್ದಾರೆ ಎಂದು ಅಂದಾಜಿಸಲಾಗಿದೆ.

ಉಕ್ರೇನ್​​ನ ನಿರಾಶ್ರಿತರಿಗೆ ಗಡಿ ಭಾಗದ ದೇಶಗಳಾದ ಪೋಲೆಂಡ್, ಹಂಗೇರಿ, ಬಲ್ಗೇರಿಯಾ, ಮೊಲ್ಡೊವಾ ಮತ್ತು ರೊಮೇನಿಯಾದ ನಾಯಕರು ಸ್ವಾಗತಿಸುತ್ತಿದ್ದಾರೆ. ರಷ್ಯಾವು ಉಕ್ರೇನ್​ನ ಪ್ರಮುಖ ನಗರಗಳ ಮೇಲೆ ದಾಳಿ ನಡೆಸುತ್ತಾ ಇರೋದ್ರಿಂದ ನಾಗರಿಕರ ವಾಸ ಕಷ್ಟಕರವಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...