alex Certify ಬುಲ್ಲಿ ಬಾಯಿ ಪ್ರಕರಣ: ಬಂಧಿತ ನೀರಜ್​ ಬಗ್ಗೆ ತಂದೆಯಿಂದಲೇ ಸ್ಫೋಟಕ ಮಾಹಿತಿ ಬಹಿರಂಗ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬುಲ್ಲಿ ಬಾಯಿ ಪ್ರಕರಣ: ಬಂಧಿತ ನೀರಜ್​ ಬಗ್ಗೆ ತಂದೆಯಿಂದಲೇ ಸ್ಫೋಟಕ ಮಾಹಿತಿ ಬಹಿರಂಗ

ಆಸ್ಸಾಂನ ಜೋಹರತ್​ನಲ್ಲಿ 21 ವರ್ಷದ ನೀರಜ್​ ಬಿಷ್ಣೋಯ್​ ಎಂಬಾತನನ್ನು ವಿವಾದಾತ್ಮಕ ಬುಲ್ಲಿ ಬಾಯಿ ಆ್ಯಪ್​ ರಚನೆ ಮಾಡಿದ ಆರೋಪದ ಅಡಿಯಲ್ಲಿ ದೆಹಲಿ ಪೊಲೀಸರು ಗುರುವಾರ ಬಂಧಿಸಿದ್ದಾರೆ.

ಓಪನ್​ ಸ್ಟೋರ್ಸ್​ ಪ್ಲಾಟ್​ಫಾರ್ಮ್​ ಗಿಟ್​ಹಬ್​ನಲ್ಲಿರುವ ಬುಲ್ಲಿ ಬಾಯಿ ಅಪ್ಲಿಕೇಶನ್​ನ್ನು ವರ್ಚುವಲ್​ ಹರಾಜಿಗೆ ನೂರಾರು ಮುಸ್ಲಿಂ ಮಹಿಳೆಯರ ಫೋಟೋವನ್ನು ಅಕ್ರಮವಾಗಿ ಅಪ್​ಲೋಡ್​ ಮಾಡಲು ಬಳಕೆ ಮಾಡಲಾಗಿದೆ.

ನೀರಜ್​ ತಂದೆ ದಶರಥ್​ ಬಿಷ್ಣೋಯಿ ನೀಡಿರುವ ಮಾಹಿತಿಯ ಪ್ರಕಾರ ಅವರ ಪುತ್ರ ಓದಿನಲ್ಲಿ ಅತ್ಯಂತ ಜಾಣನಾಗಿದ್ದನು. ಲ್ಯಾಪ್​ಟಾಪ್​​ ಬಗ್ಗೆ ಅತಿಯಾದ ಆಸಕ್ತಿ ಹೊಂದಿದ್ದ ಈತನಿಗೆ ಕೆಲ ಸ್ನೇಹಿತರು ಸಹ ಇದ್ದರು ಎಂದಿದ್ದಾರೆ.

10ನೇ ತರಗತಿಯಲ್ಲಿ ಹೆಚ್ಚು ಅಂಕ ಪಡೆದವರಿಗೆ ಆಸ್ಸಾಂ ಸರ್ಕಾರ ವಿತರಿಸಿದ್ದ ಉಚಿತ ಲ್ಯಾಪ್​ಟಾಪ್​ ನನ್ನ ಪುತ್ರನಿಗೂ ಸಿಕ್ಕಿತ್ತು. ಇದಾದ ಬಳಿಕ ಆತ ಲ್ಯಾಪ್​ಟಾಪ್​ ಜೊತೆಯೇ ಹೆಚ್ಚಿನ ಕಾಲ ಕಳೆಯುತ್ತಿದ್ದ. ಕೋವಿಡ್ ಸಮಯದಲ್ಲಂತೂ ಆತ ಲ್ಯಾಪ್​ಟಾಪ್​ ಹಿಡಿದುಕೊಂಡು ರೂಮಿನಲ್ಲಿಯೇ ಇರುತ್ತಿದ್ದ ಎಂದು ದಶರಥ್​ ಬಿಷ್ಣೋಯಿ ಹೇಳಿದ್ದಾರೆ.

ಆತ ಬಾಲ್ಯದಿಂದಲೂ ತನ್ನ ಪಾಡಿಗೆ ತಾನು ಇರುತ್ತಿದ್ದ. ಆತ ಏನು ಮಾಡುತ್ತಿದ್ದಾನೆ ಎಂಬುದು ನಮಗೂ ತಿಳಿಯುತ್ತಿರಲಿಲ್ಲ. ಆತನಿಗೆ ಅಂತಹ ಹೇಳಿಕೊಳ್ಳುವ ಸ್ನೇಹಿತರ ಗ್ಯಾಂಗ್​ ಕೂಡ ಇರಲಿಲ್ಲ ಎಂದು ದಶರಥ್​ ಹೇಳಿದ್ದಾರೆ. ಬಂಧಿತ ನೀರಜ್​ ತಂದೆ ದಶರಥ್​ ಪಿಕಪ್​ ವಾಹನವನ್ನು ಹೊಂದಿದ್ದು ಇದರ ಮೂಲಕ ಜೀವನ ಸಾಗಿಸುತ್ತಿದ್ದಾರೆ.

ನೀರಜ್​ 11 ಹಾಗೂ 12ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ವೇಳೆಯಲ್ಲಿ ಅನೇಕ ಬಾರಿ ಆತನ ಕಾಲೇಜು ಪ್ರಾಂಶುಪಾಲರು ಆತನ ಲ್ಯಾಪ್​​​ಟಾಪ್​ ಸೀಝ್​ ಮಾಡಿದ್ದರು.

ಈ ಲ್ಯಾಪ್​ಟಾಪ್​ ಮರಳಿ ಪಡೆಯಲು ನಾನೇ ಅನೇಕ ಬಾರಿ ಕಾಲೇಜಿಗೆ ತೆರಳಿದ್ದೆ. ಆತ ಆ ಲ್ಯಾಪ್​ಟಾಪ್​ನಲ್ಲಿ ಏನು ಮಾಡುತ್ತಿದ್ದ ಎಂಬುದು ನಮಗೆ ತಿಳಿದಿರಲಿಲ್ಲ ಎಂದು ಹೇಳಿದರು.

ಈ ಅಪ್ಲಿಕೇಶನ್​ನ ಹಿಂದೆ ಯಾರಿದ್ದಾರೆ ಎಂಬುದೂ ನಮಗೆ ತಿಳಿದಿಲ್ಲ. ನಮ್ಮ ಮಗ ಆದಷ್ಟು ಬೇಗ ಮನೆಗೆ ವಾಪಸ್ಸಾಗಲಿ ಎಂಬುದಷ್ಟೇ ನಮ್ಮ ಪ್ರಾರ್ಥನೆಯಾಗಿದೆ. ಏಕೆಂದರೆ ಆತನಿಗೆ ಮುಂದಿನ ತಿಂಗಳು 2ನೇ ಸೆಮಿಸ್ಟರ್ ಪರೀಕ್ಷೆ ಇದೆ ಎಂದು ಹೇಳಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...