alex Certify ಚಲಿಸುತ್ತಿದ್ದ ಬೈಕ್​ನಲ್ಲಿ ಕುಳಿತು ಲ್ಯಾಪ್​ಟಾಪ್​ ನಲ್ಲಿ ಯುವತಿ ಕೆಲಸ; ನೆಟ್ಟಿಗರು ಶಾಕ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚಲಿಸುತ್ತಿದ್ದ ಬೈಕ್​ನಲ್ಲಿ ಕುಳಿತು ಲ್ಯಾಪ್​ಟಾಪ್​ ನಲ್ಲಿ ಯುವತಿ ಕೆಲಸ; ನೆಟ್ಟಿಗರು ಶಾಕ್​

ಆಧುನಿಕ ಜೀವನದ ಜಂಜಾಟದಲ್ಲಿ ವೈಯಕ್ತಿಕ ಜೀವನ ಹಾಗೂ ವೃತ್ತಿ ಕ್ಷೇತ್ರವನ್ನು ಸರಿದೂಗಿಸುವುದೇ ಒಂದು ಸವಾಲಿನ ಕೆಲಸವಾಗಿದೆ. ಈ ಮಾತಿಗೆ ಸ್ಪಷ್ಟ ಉದಾಹರಣೆ ಎಂಬಂಥ ಘಟನೆಯೊಂದು ಬೆಂಗಳೂರಿನ ಬೀದಿಯೊಂದರಲ್ಲಿ ಕಂಡು ಬಂದಿದೆ. ರೆಡ್ಡಿಟ್​ನಲ್ಲಿ ಈ ವಿಡಿಯೋವನ್ನು ಪೋಸ್ಟ್​ ಮಾಡಲಾಗಿದ್ದು ಸಖತ್​ ವೈರಲ್​ ಆಗಿದೆ. ಅನೇಕರು ಈ ವಿಡಿಯೋವನ್ನು ನೋಡಿ ನಕ್ಕಿದರೆ ಇನ್ನೂ ಹಲವರು ಈಗಿನ ಜಮಾನ ಮನುಷ್ಯನನ್ನು ಎಲ್ಲಿಗೆ ತಂದು ನಿಲ್ಲಿಸಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಚಲಿಸುತ್ತಿದ್ದ ಬೈಕ್​ನ ಮೇಲೆ ಕುಳಿತ ಯುವತಿಯೊಬ್ಬರು ಲ್ಯಾಪ್​ಟಾಪ್​ ಓಪನ್​ ಮಾಡಿಕೊಂಡು ಕೆಲಸ ಮಾಡುತ್ತಿರೋದನ್ನು ಈ ವಿಡಿಯೋದಲ್ಲಿ ಕಾಣಬಹುದಾಗಿದೆ. ಇಲ್ಲಿ ಗಮನಿಸಬೇಕಾದ ಮುಖ್ಯ ವಿಚಾರ ಏನೆಂದರೆ ಈ ಯುವತಿ ಹೆಲ್ಮೆಟ್​ ಧರಿಸಿಲ್ಲ. ಅತಿಯಾದ ಕೆಲಸ ಮನುಷ್ಯನನ್ನು ಯಾವ ಹಂತಕ್ಕೆ ತಲುಪಿಸಿದೆ ಎಂದು ಅನೇಕರು ಕಮೆಂಟ್​ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಮಾತ್ರ ಎಂದು ಈ ವಿಡಿಯೋಗೆ ಶೀರ್ಷಿಕೆ ನೀಡಲಾಗಿದೆ. ಈ ವಿಡಿಯೋ ರೆಡಿಟ್​ನಲ್ಲಿ ಅನೇಕರ ಗಮನ ಸೆಳೆದಿದೆ. ಜೀವಕ್ಕೆ ಸುರಕ್ಷತೆಯಿಲ್ಲದ ಕೆಲಸಗಳನ್ನು ಯಾಕೆ ಮಾಡಬೇಕು ಅಂತಾ ಅನೇಕರು ಪ್ರಶ್ನೆ ಮಾಡಿದ್ದಾರೆ. ಇನ್ನೂ ಕೆಲವರು, ಇದು ಸಾಯಲು ಹೊಸ ಆಯ್ಕೆಯಾಗಿದೆ ಅಷ್ಟೇ ಎಂದು ಕಿಡಿಕಾರಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...