alex Certify ಬಿಡುಗಡೆಗೂ ಮುನ್ನವೇ ರಶ್ಮಿಕಾ ಮಂದಣ್ಣ ಅಭಿನಯದ ಚಿತ್ರದಿಂದ 120 ಕೋಟಿ ರೂ. ಗಳಿಕೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಿಡುಗಡೆಗೂ ಮುನ್ನವೇ ರಶ್ಮಿಕಾ ಮಂದಣ್ಣ ಅಭಿನಯದ ಚಿತ್ರದಿಂದ 120 ಕೋಟಿ ರೂ. ಗಳಿಕೆ…!

ನಟಿ‌ ರಶ್ಮಿಕಾ ಮಂದಣ್ಣ ಕನ್ನಡ ಹೊರತುಪಡಿಸಿದ್ರೆ ಬೇರೆ ಭಾಷೆಯಲ್ಲೇ ಹೆಚ್ಚು ಬ್ಯುಸಿಯಾಗಿದ್ದಾರೆ. ಒಂದಾದ ಮೇಲೊಂದರಂತೆ ಸಿನಿಮಾ ಮಾಡ್ತಾ ಇರುವ ಮಂದಣ್ಣ, ಎಲ್ಲಾ ಸಿನಿಮಾಗಳಲ್ಲೂ ಸಕ್ಸಸ್ ಕಾಣ್ತಾ ಇದ್ದಾರೆ. ಇದೀಗ ರಿಲೀಸ್ ಗೂ ಮುನ್ನವೇ ಇವರ ಸಿನಿಮಾ ಒಂದು ನೂರಾರು ಕೋಟಿ ಹಣ ಬಾಚಿದೆ.

ಹೌದು, ದಳಪತಿ ವಿಜಯ್​ ಜೊತೆಗೆ ವಾರಿಸು ಸಿನಿಮಾದಲ್ಲಿ ರಶ್ಮಿಕಾ ಸ್ಕ್ರೀನ್ ಶೇರ್ ಮಾಡಿದ್ದಾರೆ. ಸಾಕಷ್ಟು ಕುತೂಹಲದ ಜೊತೆಗೆ ಈ ಸಿನಿಮಾ ನಿರೀಕ್ಷೆಯನ್ನೂ ಹೆಚ್ಚಿಸಿದೆ. ಒಂದು ಕಡೆ ದಳಪತಿ ಫ್ಯಾನ್ ಆದ್ರೆ ಮತ್ತೊಂದೆಡೆ ರಶ್ಮಿಕಾ ಫ್ಯಾನ್ ಕೂಡ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಇದೀಗ ಈ ಸಿನಿಮಾ ರಿಲೀಸ್ ಗೂ ಮುನ್ನವೇ 120 ಕೋಟಿ ಹಣ ಗಳಿಸಿದೆ.

ಹೌದು, ಈ ಸಿನಿಮಾ ಅಮೆಜಾನ್​ ಪ್ರೈಂ ಹಕ್ಕು ಪಡೆದುಕೊಂಡಿದೆ. ಒಟಿಟಿ ಹಕ್ಕುಗಳನ್ನು ಸುಮಾರು 60 ಕೋಟಿ ರೂಪಾಯಿ ನೀಡಿ ಕೊಂಡುಕೊಂಡಿದೆ ಎನ್ನಲಾಗಿದೆ. ಇನ್ನು ಟಿವಿ ಪ್ರಸಾರ ಹಕ್ಕುಗಳನ್ನು ಸನ್​ ನೆಟ್​ವರ್ಕ್​​ ಸಂಸ್ಥೆ 50 ಕೋಟಿ ರೂಪಾಯಿ ಕೊಟ್ಟು ಕೊಂಡ್ಕೊಂಡಿದೆ. ಇದೆ ಜೊತೆಗೆ ಆಡಿಯೋ ಹಕ್ಕುಗಳು ಕೂಡ 10 ಕೋಟಿ ರೂಪಾಯಿಗೆ ಮಾರಾಟ ಆಗಿದ್ದಾವಂತೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...