alex Certify ಬಿಟಿಎಸ್ ನ ಅಪ್ಪಟ ಅಭಿಮಾನಿ ರಶ್ಮಿಕಾ ಮಂದಣ್ಣ, ಕೆ-ಪಾಪ್ ಹಾಡುಗಳಂದ್ರೆ ಇಷ್ಟ ಎಂದ ನ್ಯಾಷನಲ್ ಕ್ರಶ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಿಟಿಎಸ್ ನ ಅಪ್ಪಟ ಅಭಿಮಾನಿ ರಶ್ಮಿಕಾ ಮಂದಣ್ಣ, ಕೆ-ಪಾಪ್ ಹಾಡುಗಳಂದ್ರೆ ಇಷ್ಟ ಎಂದ ನ್ಯಾಷನಲ್ ಕ್ರಶ್

Pushpa The Rise Actor Rashmika Mandanna Reveals She Listens and Dances On BTS Songsನ್ಯಾಷನಲ್ ಕ್ರಶ್ ಎಂದೇ ದೇಶದೆಲ್ಲೆಡೆ ಫೇಮಸ್ ಆಗಿರುವ ಕನ್ನಡತಿ ರಶ್ಮಿಕಾ ಮಂದಣ್ಣ ಬಗ್ಗೆ ತಿಳಿದುಕೊಳ್ಳಲು ಅಭಿಮಾನಿಗಳು ಕಾತರರಾಗಿರುತ್ತಾರೆ. ರಶ್ಮಿಕಾ ಸಹ ಅಷ್ಟೇ, ತಮ್ಮ ಅಭಿಮಾನಿಗಳ ಜೊತೆ ಟಚ್ ನಲ್ಲಿರಲು ಆಗಾಗ‌ ಇನ್ಸ್ಟಾಗ್ರಾಮ್ ಲೈವ್ ಹಾಗೂ ಪ್ರಶ್ನೋತ್ತರ ಸೆಷನ್ ಗಳನ್ನ ನಡೆಸುತ್ತಿರುತ್ತಾರೆ. ಇಂತದ್ದೆ ಒಂದು ಆಸ್ಕ್ ಮೀ ಎನಿಥಿಂಗ್ ಪ್ರಶ್ನೋತ್ತರ ಸೆಷನ್ ನಲ್ಲಿ ರಶ್ಮಿಕಾ ಕೆ-ಪಾಪ್ ಅನ್ನು ಅಕ್ಷರಶಃ ಆಳುತ್ತಿರುವ ಬಿಟಿಎಸ್ ಬಗ್ಗೆ ಮಾತನಾಡಿದ್ದಾರೆ.

ಈ ಹಿಂದೆಯು ಬಿಟಿಎಸ್ ತನ್ನ ಫೇವರಿಟ್ ಮ್ಯೂಸಿಕ್ ಬ್ಯಾಂಡ್ ಎಂದು ಹಲಬಾರು ಬಾರಿ ಹೇಳಿಕೊಂಡಿರುವ ಮಂದಣ್ಣ ಮತ್ತೊಮ್ಮೆ ತಮ್ಮ ಬಿಟಿಎಸ್ ಅಭಿಮಾನಿ ಎಂದು ತೋರಿಸಿದ್ದಾರೆ. ನೀವು ಬಿಟಿಎಸ್ ಹಾಡುಗಳನ್ನ ಕೇಳುತ್ತಿರಾ, ಆ ಹಾಡಿಗೆ ಕುಣಿಯುತ್ತೀರಾ ಎಂದ ಅಭಿಮಾನಿಯೊಬ್ಬರು ಕೇಳಿದ ಪ್ರಶ್ನೆಗೆ, ಹೌದು ಬಿಟಿಎಸ್ ಹಾಡುಗಳನ್ನ ಕೇಳುತ್ತೇನೆ, ಅವರ ಹಾಡುಗಳಿಗೆ ಕುಣಿಯುತ್ತೇನೆ ಎಂದು ರಶ್ಮಿಕಾ ಉತ್ತರಿಸಿದ್ದಾರೆ. ಪುಷ್ಪಾ ಚಿತ್ರದ ಪ್ರಮೋಷನ್ ವೇಳೆಯು ರಶ್ಮಿಕಾ ಬಿಟಿಎಸ್ ಗ್ರೂಪ್ ನ ಐಕಾನಿಕ್ ಪೋಸ್ ಗಳನ್ನ ರಿಕ್ರಿಯೇಟ್ ಮಾಡಿದ್ದರು.

ರಶ್ಮಿಕಾ ಮಂದಣ್ಣ ಮಾತ್ರವಲ್ಲ ಭಾರತದ ಅನೇಕ ಸೂಪರ್ ಸ್ಟಾರ್ ಗಳು ಬಿಟಿಎಸ್ ಹುಡುಗರ ಅಪ್ಪಟ ಅಭಿಮಾನಿಗಳು. ಆಲಿಯಾ ಭಟ್, ದಿಶಾ ಪಠಾಣಿ, ಟೈಗರ್ ಶ್ರಾಫ್, ದಿಲ್ಜೀತ್ ದೊಸಾಂಜ್ ಮತ್ತು ಗೌಹಾರ್ ಖಾನ್ ಸೇರಿದಂತೆ ಹಲವರು ತಮ್ಮ ಇಂಟರ್ವ್ಯೂಗಳಲ್ಲಿ ಹಾಗೂ ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಹೇಳಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...