alex Certify ಬಿಟಿಎಸ್ ಚಾಲಕರಾಗಿದ್ದ ಸ್ನೇಹಿತನಿಗೆ ‌ʼದಾದಾ ಸಾಹೇಬ್‌ ಫಾಲ್ಕೆʼ ಪ್ರಶಸ್ತಿ ಅರ್ಪಿಸಿದ ಸೂಪರ್‌ ಸ್ಟಾರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಿಟಿಎಸ್ ಚಾಲಕರಾಗಿದ್ದ ಸ್ನೇಹಿತನಿಗೆ ‌ʼದಾದಾ ಸಾಹೇಬ್‌ ಫಾಲ್ಕೆʼ ಪ್ರಶಸ್ತಿ ಅರ್ಪಿಸಿದ ಸೂಪರ್‌ ಸ್ಟಾರ್

ತಮಿಳು ಸೂಪರ್ ಸ್ಟಾರ್‌ ರಜನಿಕಾಂತ್‌ ಅವರಿಗೆ ಜೀವಮಾನದ ಶ್ರೇಷ್ಠ ಸಾಧನೆಗಾಗಿ ಚಿತ್ರರಂಗದ ಅತ್ಯುನ್ನತ ಪ್ರಶಸ್ತಿಯಾದ ʼದಾದಾ ಸಾಹೇಬ್‌ ಫಾಲ್ಕೆʼ ಸಂದಿದೆ. ಸೋಮವಾರದಂದು ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು, ನವದೆಹಲಿಯ ವಿಜ್ಞಾನ ಭವನದಲ್ಲಿ ನಡೆದ ಸಮಾರಂಭದಲ್ಲಿ ರಜನಿಕಾಂತ್‌ ಅವರಿಗೆ ಈ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.

ರಜನಿಕಾಂತ್‌ ಇಂದು ಚಿತ್ರರಂಗದಲ್ಲಿ ಉನ್ನತ ಸ್ಥಾನಕ್ಕೇರಿದ್ದರೂ ಇದಕ್ಕೆ ಕಾರಣಕರ್ತರಾದವರನ್ನು ಮರೆತಿಲ್ಲ. ಬಹಳಷ್ಟು ಮಂದಿ ತಾವು ಏರಿದ್ದ ಏಣಿಯನ್ನೇ ಒದೆಯುವ ಈ ಕಾಲಘಟ್ಟದಲ್ಲಿ ಈ ಕಾರಣಕ್ಕಾಗಿಯೇ ರಜನಿಕಾಂತ್‌ ವಿಭಿನ್ನವಾಗಿ ನಿಲ್ಲುತ್ತಾರೆ. ಚಿತ್ರರಂಗಕ್ಕೆ ಬರಲು ನೆರವಾದವರನ್ನು ಈಗಲೂ ಸ್ಮರಿಸಿಕೊಳ್ಳುವ ರಜನಿಕಾಂತ್‌, ದಾದಾ ಸಾಹೇಬ್‌ ಫಾಲ್ಕೆ ಪ್ರಶಸ್ತಿ ಸಮಾರಂಭದಲ್ಲೂ ಈ ಕಾರ್ಯ ಮಾಡಿದ್ದಾರೆ.

ಒಂದು ಕಾಲದಲ್ಲಿ ಶಿವಾಜಿ ರಾವ್‌ ಗಾಯಕ್ವಾಡ್‌ ಎಂಬ ಯುವಕ ಬೆಂಗಳೂರಿನ ಬಿಟಿಎಸ್‌ ಬಸ್‌ ನಲ್ಲಿ ಕಂಡಕ್ಟರ್‌ ಆಗಿ ಕಾರ್ಯ ನಿರ್ವಹಿಸಿದ್ದು, ಈಗ ರಜನಿಕಾಂತ್‌ ಎಂಬ ಹೆಸರಿನಲ್ಲಿ ಸೂಪರ್‌ ಸ್ಟಾರ್‌ ಆಗಿದ್ದಾರೆ. ರಜನಿಕಾಂತ್‌ ಬಿಟಿಎಸ್‌ ಕಂಡಕ್ಟರ್‌ ಆಗಿದ್ದಾಗ ಆ ಬಸ್ಸಿನ ಚಾಲಕರಾಗಿದ್ದವರು ರಾಜ್ ಬಹದೂರ್‌ ಎಂಬ ಗೆಳೆಯ. ಅವರೇ ಶಿವಾಜಿ ರಾವ್‌ ಎಂಬ ಈ ಯುವಕನಲ್ಲಿದ್ದ ಕಲೆಯನ್ನು ಗುರುತಿಸಿ ಚಿತ್ರರಂಗದಲ್ಲಿ ತೊಡಗಿಕೊಳ್ಳಲು ಪ್ರೋತ್ಸಾಹಿಸಿದ್ದರು.

ಹೀಗಾಗಿ ಸೋಮವಾರ ದಾದಾ ಸಾಹೇಬ್‌ ಫಾಲ್ಕೆ ಪ್ರಶಸ್ತಿ ಸ್ವೀಕರಿಸಿದ ರಜನಿ ಕಾಂತ್‌ ಈ ಪ್ರಶಸ್ತಿಯನ್ನು ಗೆಳೆಯ ರಾಜ್ ಬಹಾದೂರ್‌ ಅವರಿಗೆ ಅರ್ಪಿಸಿದ್ದಾರೆ. ಈ ಸಂದರ್ಭದಲ್ಲಿ ಗೆಳೆಯನ ಸಹಕಾರವನ್ನು ಸ್ಮರಿಸಿರುವ ಅವರು, ಚಿತ್ರರಂಗ ಸೇರ್ಪಡೆಗೊಳ್ಳುವಂತೆ ಸಲಹೆ ನೀಡಿ ನನ್ನ ಬದುಕನ್ನೇ ಬದಲಿಸಿದ ಸ್ನೇಹಿತ ಎಂದು ಬಣ್ಣಿಸಿದ್ದಾರೆ. ಅಲ್ಲದೇ ತಮ್ಮ ಅಭಿನಯದ ಮೊದಲ ಚಿತ್ರ ನಿರ್ದೇಶಿಸಿದ ಕೆ. ಬಾಲಚಂದರ್‌ ಹಾಗೂ ಸಹೋದರ ಸತ್ಯನಾರಾಯಣ ರಾವ್‌ ಅವರಿಗೂ ರಜನಿಕಾಂತ್‌ ಗೌರವ ಸಮರ್ಪಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...