alex Certify ಬಿಜೆಪಿ ಹಿಂದುತ್ವವಾದವನ್ನ ಕಡಿಮೆ ಮಾಡಿಕೊಳ್ಳಬೇಕಿದೆ ಎಂದ ‌ʼಮೆಟ್ರೋ ಮ್ಯಾನ್ʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಿಜೆಪಿ ಹಿಂದುತ್ವವಾದವನ್ನ ಕಡಿಮೆ ಮಾಡಿಕೊಳ್ಳಬೇಕಿದೆ ಎಂದ ‌ʼಮೆಟ್ರೋ ಮ್ಯಾನ್ʼ

ಸಕ್ರಿಯ ರಾಜಕಾರಣಕ್ಕೆ ನಿವೃತ್ತಿ ಘೋಷಿಸಿ ಬಿಜೆಪಿಯಲ್ಲಿಯೇ ಇರುವುದಾಗಿ ಹೇಳಿದ್ದ ಮೆಟ್ರೋ ಮ್ಯಾನ್​ ಇ. ಶ್ರೀಧರನ್​ ಪಕ್ಷದ ಕೇರಳ ಘಟಕಕ್ಕೆ ಕೆಲ ಸಲಹೆಗಳನ್ನು ನೀಡಿದ್ದಾರೆ. ಈ ವರ್ಷದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಶ್ರೀಧರನ್​ ಕೇರಳದಲ್ಲಿ ಲವ್​ ಜಿಹಾದ್​ ಅತ್ಯಂತ ಪ್ರಬಲವಾದ ವಿಚಾರವಲ್ಲ ಎಂದು ಪ್ರತಿಪಾದಿಸಿದ್ದರು. ಬಿಜೆಪಿಯು ಶ್ರೀಧರನ್​​ರನ್ನು ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಎಂದೂ ಘೋಷಣೆ ಮಾಡಿತ್ತು.

ಬಿಜೆಪಿಯು ತನ್ನ ಮನೋಭಾವನೆಯನ್ನು ಕೊಂಚ ಬದಲಾಯಿಸಿಕೊಳ್ಳಬೇಕು. ಉದಾಹರಣೆಗೆ ಬಿಜೆಪಿ ಹಿಂದುತ್ವ ಹಾಗೂ ಹಿಂದುತ್ವವಾದವನ್ನೇ ಎತ್ತಿ ತೋರಿಸಬಾರದು. ನಾವು ಕೇರಳದ ಎಲ್ಲಾ ಜನತೆಯ ಜೊತೆ ನಿಲ್ಲುತ್ತೇವೆ ಎಂದು ಹೇಳಬೇಕೆ ಹೊರತು ಹಿಂದೂಗಳ ಪರ ಮಾತ್ರವಲ್ಲ ಎಂಬ ಸಂದೇಶವನ್ನು ನೀಡಬೇಕು. ಎಲ್ಲಾ ವರ್ಗದ ಜನರ ಹಿತಾಸಕ್ತಿಯನ್ನು ಕಾಪಾಡುವ ಜವಾಬ್ದಾರಿಯನ್ನು ವಹಿಸಬೇಕು. ಬಿಜೆಪಿಯಲ್ಲಿ ಇಂತಹದ್ದೊಂದು ಮೂಲಭೂತ ಬದಲಾವಣೆಯ ಅವಶ್ಯಕತೆ ಇದೆ ಎಂದು ಹೇಳಿದ್ದಾರೆ. ಕೇರಳ ಬಿಜೆಪಿ ಘಟಕವನ್ನು ಟೀಕಿಸುವ ವೇಳೆಯಲ್ಲಿಯೂ ಪ್ರಧಾನಿ ನರೇಂದ್ರ ಮೋದಿಯನ್ನು ಶ್ರೀಧರನ್ ಹಾಡಿ ಹೊಗಳಿದ್ದಾರೆ.

ನಮ್ಮ ಪ್ರಧಾನಿ ಮೋದಿಯಂತೆಯೇ….ಅವರು ಎಲ್ಲಿಯೂ ಹಿಂದುತ್ವದ ಬಗ್ಗೆ ಮಾತನಾಡುವುದಿಲ್ಲ. ಅವರು ನಿರ್ದಿಷ್ಟ ಪಂಗಡದ ಜನರ ಜೊತೆಯಲ್ಲಿ ಮಾತ್ರ ನಿಂತಿದ್ದೇನೆ ಎಂದು ಎಲ್ಲಿಯೂ ಹೇಳುವುದಿಲ್ಲ. ಜನರ ಹಿತಾಸಕ್ತಿಗಾಗಿ ನಾವು ಇದೇ ಧೋರಣೆಯನ್ನು ಹೊಂದಬೇಕಿದೆ ಎಂದು ಶ್ರೀಧರನ್​ ಹೇಳಿದರು.‌

ಇನ್ನು ರಾಜಕೀಯ ಜೀವನಕ್ಕೆ ನಿವೃತ್ತಿ ಘೋಷಿಸುವ ವಿಚಾರವಾಗಿಯೂ ಮಾತನಾಡಿದ ಅವರು, ನಾನು ವಯಸ್ಸಿನ ಕಾರಣದಿಂದಾಗಿ ಸಕ್ರಿಯ ರಾಜಕಾರಣ ತ್ಯಜಿಸುತ್ತಿದ್ದೇನೆ. ಹಾಗೆಂದ ಮಾತ್ರಕ್ಕೆ ನಾನು ಬಿಜೆಪಿಯನ್ನು ತೊರೆಯುತ್ತಿಲ್ಲ ಎಂದು ಪುನರುಚ್ಛರಿಸಿದ್ದಾರೆ.

ನಾನು ಪಕ್ಷಕ್ಕಾಗಿ ಎಂದಿಗೂ ಲಭ್ಯವಿರುತ್ತೇನೆ. ಆದರೆ ನಾನು ಯಾವುದೇ ಚುನಾವಣೆಗಳಲ್ಲಿ ಸ್ಪರ್ಧೆ ಮಾಡುವುದಿಲ್ಲ. ಅಥವಾ ಮುಷ್ಕರಗಳಲ್ಲಿ ಭಾಗಿಯಾಗುವುದಿಲ್ಲ. ನನ್ನಿಂದ ಸಕ್ರಿಯ ರಾಜಕಾರಣ ಸಾಧ್ಯವಿಲ್ಲ. ಆದರೆ ಬಿಜೆಪಿಯ ಪರವಾಗಿ ನಾನೆಂದಿಗೂ ಇದ್ದೇನೆ ಎಂದು ಹೇಳಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...