alex Certify ‘ಬಿಗ್ ಬಾಸ್’ ಮನೆಯಿಂದ ಅನುಪಮಾ ಗೌಡ ಔಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಬಿಗ್ ಬಾಸ್’ ಮನೆಯಿಂದ ಅನುಪಮಾ ಗೌಡ ಔಟ್

‘ಬಿಗ್ ಬಾಸ್ – ಸೀಸನ್ 9’ ಈಗ 13ನೇ ವಾರಕ್ಕೆ ಕಾಲಿಟ್ಟಿದ್ದು, ಪ್ರವೀಣರಾಗಿ ಮನೆ ಪ್ರವೇಶಿಸಿದ್ದ ಅನುಪಮಾ ಗೌಡ ಔಟ್ ಆಗಿದ್ದಾರೆ. ಸ್ಟ್ರಾಂಗ್ ಸ್ಪರ್ಧಿ ಎಂದು ಗುರುತಿಸಿಕೊಂಡಿದ್ದ ಅವರು ಈಗ ಸ್ಪರ್ಧೆಯಿಂದ ಹೊರ ಬಿದ್ದಿರುವುದು ಅಭಿಮಾನಿಗಳಿಗೆ ಶಾಕ್ ನೀಡಿದೆ.

ಕಿರುತೆರೆಯ ಹಲವು ಧಾರವಾಹಿಗಳಲ್ಲಿ ನಟಿಸಿದ್ದ ಅನುಪಮಾ ಗೌಡ, ಬಿಗ್ ಬಾಸ್ ಸೀಸನ್ 5 ರಲ್ಲಿ ಸ್ಪರ್ಧಿಯಾಗಿದ್ದರು. ಆ ಬಳಿಕ ಸೀಸನ್ 9ರಲ್ಲಿ ಪ್ರವೀಣರ ಪೈಕಿ ಮನೆ ಪ್ರವೇಶಿಸಿದ ಸ್ಪರ್ಧಿಗಳಲ್ಲಿ ಅನುಪಮಾ ಕೂಡ ಒಬ್ಬರಾಗಿದ್ದರು.

ಇದೀಗ ಅವರು ಮನೆಯಿಂದ ಹೊರ ಬಿದ್ದಿದ್ದು ಈಗ ಬಿಗ್ ಬಾಸ್ ಮನೆಯಲ್ಲಿ, ರಾಕೇಶ್ ಅಡಿಗ, ಅಮೂಲ್ಯ ಗೌಡ, ದಿವ್ಯಾ ಉರುಡಗ, ರೂಪೇಶ್ ಶೆಟ್ಟಿ, ರೂಪೇಶ್ ರಾಜಣ್ಣ, ಅರುಣ್ ಸಾಗರ್, ದೀಪಿಕಾ ದಾಸ್ ಹಾಗೂ ಆರ್ಯವರ್ಧನ್ ಗುರೂಜಿ ಇದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...